ನಿಮ್ಮ ಆಧಾರ್ ಸಂಖ್ಯೆಯನ್ನು ಲಾಕ್ ಮಾಡುವ ಮೂಲಕ ದುರ್ಬಳಕೆಯನ್ನು ತಪ್ಪಿಸಿಕೊಳ್ಳಿ: ಇಲ್ಲಿದೆ ಲಾಕ್ ಮತ್ತು ಅನ್ ಲಾಕ್ ವಿಧಾನ

ಭಾರತೀಯ ನಿವಾಸಿಗಳಿಗೆ ಭಾರತೀಯ ಸರಕಾರವು ಅನನ್ಯ ಗುರುತಿನ ಸಂಖ್ಯೆಯ ಆಧಾರ್ ಕಾರ್ಡ್ ಅನ್ನು ನೀಡಿದೆ. ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕತ್ವವನ್ನು ಹೊಂದಿರುವ ಪ್ರತಿಯೊಬ್ಬರ ಬಳಿಯೂ ಆಧಾರ್ ಕಾರ್ಡ್ ಇರುವುದು ಕಡ್ಡಾಯ. ಆದಾಗ್ಯೂ, ಆಧಾರ್ ಕಾರ್ಡ್ ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಘಟನೆಗಳು ಆಗ್ಗಿಂದಾಗ್ಗೆ ಕೇಳಿಬರುತ್ತಿರುತ್ತವೆ. ತಮ್ಮ ಆಧಾರ್ ಸಂಖ್ಯೆಯನ್ನು ಸಮಾಜಘಾತುಕ ಶಕ್ತಿಗಳ ಕೈಗೆ ಸಿಗದಂತೆ ನೋಡಿಕೊಳ್ಳಲು ಆಧಾರ್ ಲಾಕ್ ಮತ್ತು ಅನ್ ಲಾಕ್ ವ್ಯವಸ್ಥೆಯನ್ನು ನೀಡಲಾಗಿದೆ. ನಿವಾಸಿಗಳ, ವೈಯಕ್ತಿಕ ಡೇಟಾದ ಸುರಕ್ಷತೆ ಮತ್ತು ಗೌಪ್ಯತೆ ಯಾವಾಗಲೂ ಪ್ರಾಥಮಿಕ ಕಾಳಜಿಯಾಗಿದೆ. ನಿವಾಸಿಗಳ ಆಧಾರ್ ಸಂಖ್ಯೆಯ ಭದ್ರತೆಯನ್ನು ಬಲಪಡಿಸಲು ಮತ್ತು ನಿವಾಸಿಗೆ ನಿಯಂತ್ರಣವನ್ನು ಒದಗಿಸಲು, ಯುಐಡಿಐಎ ಯು ಆಧಾರ್ ಸಂಖ್ಯೆ(ಯುಐಡಿ)ಯನ್ನು ಲಾಕ್ ಮತ್ತು ಅನ್ಲಾಕ್ ಮಾಡುವ ಕಾರ್ಯವಿಧಾನವನ್ನು ಒದಗಿಸುತ್ತದೆ.

ಇದನ್ನು ಮಾಡುವುದರಿಂದ ನಿವಾಸಿಯು ಯುಐಡಿ, ಯುಐಡಿ ಟೋಕನ್ ಮತ್ತು ವಿಐಡಿ ಬಳಸಿ ಬಯೋಮೆಟ್ರಿಕ್ಸ್, ಡೆಮೊಗ್ರಾಫಿಕ್ ಮತ್ತು ಒಟಿಪಿ ವಿಧಾನಕ್ಕಾಗಿ ಯಾವುದೇ ರೀತಿಯ ದೃಢೀಕರಣವನ್ನು ಮಾಡಲು ಸಾಧ್ಯವಿಲ್ಲ. ನಿವಾಸಿಯು ಯುಐಡಿ ಅನ್ನು ಅನ್ಲಾಕ್ ಮಾಡಲು ಬಯಸಿದರೆ ಯುಐಡಿಐಎ ವೆಬ್‌ಸೈಟ್ ಅಥವಾ mAadhaar ಅಪ್ಲಿಕೇಶನ್ ಮೂಲಕ ಇತ್ತೀಚಿನ ವಿಐಡಿ ಅನ್ನು ಬಳಸಿಕೊಂಡು ಮಾಡಬಹುದು. ಆಧಾರ್ ಅನ್‌ಲಾಕ್ ಮಾಡಿದ ನಂತರ, ನಿವಾಸಿ ಯುಐಡಿ, ಯುಐಡಿ ಟೋಕನ್ ಮತ್ತು ವಿಐಡಿ ಬಳಸಿಕೊಂಡು ದೃಢೀಕರಣವನ್ನು ಮಾಡಬಹುದು.

ನಿವಾಸಿಗಳು ಆಧಾರ್ ಅನ್ನು ಹೇಗೆ ಲಾಕ್ ಮಾಡಬಹುದು?

ಆಧಾರ್ ಅನ್ನು ಲಾಕ್ ಮಾಡಲು, ನಿವಾಸಿಯು 16 ಅಂಕಿಯ ವಿ.ಐ.ಡಿ ಸಂಖ್ಯೆಯನ್ನು ಹೊಂದಿರಬೇಕು ಮತ್ತು ಆಧಾರ್ ಅನ್ನು ಲಾಕ್ ಮಾಡಲು ಇದು ಪೂರ್ವಾಪೇಕ್ಷಿತವಾಗಿದೆ. ನಿವಾಸಿಗಳು ವಿ.ಐ.ಡಿ ಸಂಖ್ಯೆ ಹೊಂದಿಲ್ಲದಿದ್ದರೆ ಎಸ್.ಎಂ.ಎಸ್ ಸೇವೆ ಅಥವಾ ಯುಐಡಿಐಎ ನ ವೆಬ್‌ಸೈಟ್ (www.myaadhaar.uidai.gov.in) ಮೂಲಕ ಇದನ್ನು ರಚಿಸಬಹುದು. ಆಧಾರ್ ಗೆ ಜೋಡಣೆಯಾಗಿರುವ ನಿಮ್ಮ ದೂರವಾಣಿ ಸಂಖ್ಯೆಯಿಂದ ಮಾತ್ರ ಈ ಸೇವೆ ಲಭ್ಯ.

ಎಸ್.ಎಂ.ಎಸ್ ಸೇವೆಗಾಗಿ: GVID ಸ್ಪೇಸ್ ಆಧಾರ್ ನ ಕೊನೆಯ 4 ಅಥವಾ 8 ಸಂಖ್ಯೆಗಳನ್ನು 1947 ಗೆ ಎಸ್.ಎಂ.ಎಸ್ ಮಾಡಿ. ಉದಾ: GVID 1234

ವೆಬ್ ಸೈಟ್: ನಿವಾಸಿಯು ಯುಐಡಿಐಎ ವೆಬ್‌ಸೈಟ್‌ https://resident.uidai.gov.in/aadhaar-lockunlock ಗೆ ಭೇಟಿ ನೀಡಬಹುದು.

ವಿಧಾನ:
# ನನ್ನ ಆಧಾರ್ ಟ್ಯಾಬ್ ಅಡಿಯಲ್ಲಿ, ಆಧಾರ್ ಲಾಕ್ ಮತ್ತು ಅನ್ಲಾಕ್ ಸೇವೆಗಳ ಮೇಲೆ ಕ್ಲಿಕ್ ಮಾಡಿ.
# ಯುಐಡಿ ಲಾಕ್ ರೇಡಿಯೋ ಬಟನ್ ಅನ್ನು ಆಯ್ಕೆ ಮಾಡಿ ಮತ್ತು ಇತ್ತೀಚಿನ ವಿವರಗಳ ಯುಐಡಿ ಸಂಖ್ಯೆ, ಪೂರ್ಣ ಹೆಸರು ಮತ್ತು ಪಿನ್ # ಕೋಡ್ ಅನ್ನು ನಮೂದಿಸಿ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ.
# ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ ಅಥವಾ ಟಿಒಟಿಪಿ ಆಯ್ಕೆಮಾಡಿ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ.
# ನಿಮ್ಮ ಯುಐಡಿ ಅನ್ನು ಯಶಸ್ವಿಯಾಗಿ ಲಾಕ್ ಮಾಡಲಾಗುತ್ತದೆ.

ಆಧಾರ್ ಅನ್ನು ಅನ್ ಲಾಕ್ ಮಾಡುವುದು ಹೇಗೆ?

ಯುಐಡಿ ಅನ್ಲಾಕ್ ಮಾಡಲು ನಿವಾಸಿಯು ಇತ್ತೀಚಿನ 16 ಅಂಕಿಯ ವಿಐಡಿ ಅನ್ನು ಹೊಂದಿರಬೇಕು ಮತ್ತು ನಿವಾಸಿಯು 16 ಅಂಕಿಯ ವಿಐಡಿ ಯನ್ನು ಮರೆತಿದ್ದರೆ ಎಸ್.ಎಂ.ಎಸ್ ಸೇವೆಗಳ ಮೂಲಕ ಇತ್ತೀಚಿನ ವಿಐಡಿ ಅನ್ನು ಹಿಂಪಡೆಯಬಹುದು.

RVID ಸ್ಪೇಸ್ ಆಧಾರ್ ನ ಕೊನೆಯ 4 ಅಥವಾ 8 ಅಂಕೆಗಳನ್ನು 1947ಗೆ ಸ್.ಎಂ.ಎಸ್ ಮಾಡಿ. ಉದಾ: RVID 1234

ಯುಐಡಿ ಅನ್ ಲಾಕ್ ಮಾಡಲು https://resident.uidai.gov.in/aadhaar-lockunlock ಗೆ ಭೇಟಿ ನೀಡಿ. ಅನ್ ಲಾಕ್ ರೇಡಿಯೋ ಬಟನ್ ಅನ್ನು ಆಯ್ಕೆ ಮಾಡಿ ಮತ್ತು ಇತ್ತೀಚಿನ ವಿಐಡಿ ಸಂಖ್ಯೆ ಮತ್ತು ಭದ್ರತಾ ಕೋಡ್ ನಮೂದಿಸಿ ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ ಅಥವಾ ಟಿಒಟಿಪಿ ಆಯ್ಕೆಮಾಡಿ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ. ನಿಮ್ಮ ಯುಐಡಿ ಅನ್ನು ಯಶಸ್ವಿಯಾಗಿ ಅನ್ ಲಾಕ್ ಮಾಡಲಾಗುತ್ತದೆ.

ನಿವಾಸಿಗಳು mAadhaar ಅಪ್ಲಿಕೇಶನ್ ಮೂಲಕ ಆಧಾರ್ ಲಾಕ್ ಅಥವಾ ಅನ್ಲಾಕ್ ಸೇವೆಯನ್ನು ಬಳಸಬಹುದು.