ನವಿಲುಗಳ ಕಣಿವೆಯೆಂದೆ ಪ್ರಖ್ಯಾತವಾಗಿದೆ ಭಾರತದ ಈ ಹಳ್ಳಿ: ಅಜ್ಜನ ಕನಸನ್ನು ಜೀವಂತವಾಗಿರಿಸಿದ ಮೊಮ್ಮಗ

ಭಾರತದ ಯಾವುದೇ ಒಂದು ಹಳ್ಳಿಯಂತೆಯೆ ಇದೂ ಕೂಡಾ ಒಂದು ಹಳ್ಳಿ. ಹಸಿರು ಹೊಲಗಳ ಮಧ್ಯೆ ಹಾದು ಹೋಗಿರುವ ಕೆಂಪು ಮಣ್ಣಿನ ರಸ್ತೆಯ ಈ ಹಳ್ಳಿಯಲ್ಲಿ ನೋಡಲು ವಿಶೇಷವಾದದ್ದು ಏನೂ ಇಲ್ಲ. ಆದರೂ ಇದೆ. ಇಲ್ಲೊಂದು ಒಂಟಿ ಗುಡಿಸಲಿದೆ ಮತ್ತು ಅಲ್ಲಿರುವ ಒಬ್ಬ ವ್ಯಕ್ತಿ ವಾಸಿಸುತ್ತಾರೆ ಮತ್ತು ಆತ ಕರೆದ ತಕ್ಷಣ ಅಲ್ಲೇ ಪಕ್ಕದಲ್ಲಿ ಆಡ್ಡಾಡಿಕೊಂಡಿರುವ ನವಿಲುಗಳೆಲ್ಲಾ ಓಡೋಡಿ ಬರುತ್ತವೆ! ಆಗ ಆ ವ್ಯಕ್ತಿ ಸಂತೋಷದಿಂದ ನವಿಲುಗಳಿಗೆ ಆಹಾರ ನೀಡುತ್ತಾರೆ. ನವಿಲುಗಳೂ ಯಾವುದೇ ಭಯವಿಲ್ಲದೆ ಕಾಳುಗಳನ್ನು ಹೆಕ್ಕಿ ತಿನ್ನುತ್ತವೆ. […]

ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡುಬಿದಿರೆಯಲ್ಲಿ ಜಾಂಬೂರಿಗೆ ಭರ್ಜರಿ ಸಿದ್ಧತೆ: 100 ಎಕರೆ ಜಾಗ, 50 ಸಾವಿರ ವಿದ್ಯಾರ್ಥಿಗಳು, 10 ಸಾವಿರ ತರಬೇತುದಾರರು, ಜಾಂಬೂರಿಯ ವಿಶೇಷತೆಗಳು ಇಲ್ಲಿದೆ ಸಂಪೂರ್ಣ ಮಾಹಿತಿ..

ಮೂಡುಬಿದಿರೆ: ಸ್ಕೌಟ್ಸ್- ಗೈಡ್ ಸಂಸ್ಥೆಯು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರಪಂಚದ 216ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಯುವಜನತೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳೊಂದಿಗೆ ಮುನ್ನಡೆಯುತ್ತಿದೆ.1907ರಲ್ಲಿ ಬೇಡನ್ ಪೋವೆಲ್ ರವರು ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಸ್ಕೌಟ್ಸ್-ಗೈಡ್ಸ್ ಸಂಸ್ಥೆಗೆ ನಮ್ಮ ಜಿಲ್ಲೆಯಲ್ಲೂ 100 ವರ್ಷಗಳ ಇತಿಹಾಸವನ್ನು ಹೊಂದಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ 24 ಜಾಂಬೂರಿ ಕಾರ್ಯಕ್ರಮ ನಡೆದಿದ್ದು, ದೇಶದಲ್ಲಿ ಪ್ರಪ್ರಥಮ ಬಾರಿಗೆ ಸ್ಕೌಟ್ಸ್-ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮ ನಡೆಸುವ ಸೌಭಾಗ್ಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ದೊರಕಿದೆ […]

ಆಳ್ವಾಸ್ ‘ಜಾಂಬೂರಿ’: ಭಾರತ ದೇಶ ಶ್ರೇಷ್ಟ ಪರಂಪರೆ, ಇತಿಹಾಸ ಹಾಗೂ ಸಂಸ್ಕೃತಿಯಿಂದ ಕೂಡಿದೆ: ಮುಖ್ಯಮಂತ್ರಿ

ಮಂಗಳೂರು: ಸಣ್ಣವಯಸ್ಸಿನಲ್ಲಿ ಚರಿತ್ರೆ ಮತ್ತು ಶಿಸ್ತು ರೂಪಿಸುವ ಸುಸಮಯವಾಗಿದ್ದು, ಚರಿತ್ರೆಯ ಜೊತೆಗೆ ಚಾರಿತ್ರ್ಯ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳೆಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ ಭಾನುವಾರ ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಆಯೋಜಿಸಲಾಗಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಸಣ್ಣ ವಯಸ್ಸಿನಲ್ಲಿ ಮಕ್ಕಳಲ್ಲಿ ಮೌಲ್ಯ, ಆದರ್ಶಗಳನ್ನು ತುಂಬಿ, ಹಿರಿಯರಿಗೆ ಗೌರವಾದರಗಳನ್ನು ತೋರುವ, ಕಿರಿಯರಿಗೆ ಪ್ರೀತಿಯನ್ನು ತೋರುವ ಗುಣಧರ್ಮವನ್ನು ಇಲ್ಲಿ […]

ಡಿ.21ರಿಂದ 27: ಮೂಡಬಿದಿರೆಯಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್‌ ಅಂತಾರಾಷ್ಟ್ರೀಯ ಜಾಂಬೂರಿ, ಇಲ್ಲಿದೆ ಆಮಂತ್ರಣ

ಮಂಗಳೂರು: ನಾಳೆಯಿಂದ ಒಂದು ವಾರಗಳ ಕಾಲ (ಡಿಸೆಂಬರ್‌ 21ರಿಂದ 27) ಮೂಡಬಿದಿರೆಯ ಆಳ್ವಾಸ್‌ ಆವರಣದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ನಡೆಯಲಿದೆ. ನಾಳೆ ಅಲ್ಲಿನ ವಿವಿಧ ವೇದಿಕೆಗಳಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿವೆ. ಈ ಜಾಂಬೂರಿಯಲ್ಲಿ 50,000 ಸ್ಕೌಟ್ಸ್ ಹಾಗೂ ಗೈಡ್ ಗಳು ಸೇರಿದಂತೆ ಒಟ್ಟು 63,000 ಮಂದಿ ಭಾಗವಹಿಸಲಿದ್ದಾರೆ. 10 ದೇಶಗಳಿಂದ 10,000 ಮಂದಿ ತರಬೇತಿ ನೀಡುವವರು ಹಾಗೂ 3,000 ಮಂದಿ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ದೇಶದಲ್ಲಿ ಇಂತಹ ಕಾರ್ಯಕ್ರಮ ನಡೆಯುವುದು ಇದೇ ಮೊದಲು […]

ಭಾರತ ಕಂಡ ಶ್ರೇಷ್ಠ ನಾಯಕ ಪ್ರಖರ ವಾಗ್ಮಿ ಯಶಸ್ವಿ ಪ್ರಧಾನಿ: ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ

ಐದು ವರ್ಷಗಳ ಕಾಲ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸಿದ ಭಾರತ ಕಂಡ ಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ವಾಗ್ಮಿ ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತವನ್ನು ವಿಶ್ವಗುರುವಾಗಿಸುವ ಹಲವಾರು ವಿಷಯಗಳಿಗೆ ಹಾಕಿದ ಅಡಿಪಾಯದ ಫಲವನ್ನು ಇಂದು ಭಾರತೀಯರೆಲ್ಲರೂ ಉಣ್ಣುತ್ತಿದ್ದಾರೆ. ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ, ಭಾರತ್ ಮಾಲಾ, ಸಾಗಾರ್ ಮಾಲಾ ದಂತಹ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ, ಗ್ರಾಮ ಸಡಕ್ ಯೋಜನೆ, […]