ಭಾರತ ಕಂಡ ಶ್ರೇಷ್ಠ ನಾಯಕ ಪ್ರಖರ ವಾಗ್ಮಿ ಯಶಸ್ವಿ ಪ್ರಧಾನಿ: ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ

ಐದು ವರ್ಷಗಳ ಕಾಲ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವನ್ನು ಸಮರ್ಥವಾಗಿ ಮುನ್ನಡೆಸಿದ ಭಾರತ ಕಂಡ ಶ್ರೇಷ್ಠ ನಾಯಕ ಮತ್ತು ಶ್ರೇಷ್ಠ ವಾಗ್ಮಿ ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತವನ್ನು ವಿಶ್ವಗುರುವಾಗಿಸುವ ಹಲವಾರು ವಿಷಯಗಳಿಗೆ ಹಾಕಿದ ಅಡಿಪಾಯದ ಫಲವನ್ನು ಇಂದು ಭಾರತೀಯರೆಲ್ಲರೂ ಉಣ್ಣುತ್ತಿದ್ದಾರೆ.

Rare and unseen pics of Atal Bihari Vajpayee
Pic: BJP

ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ, ಭಾರತ್ ಮಾಲಾ, ಸಾಗಾರ್ ಮಾಲಾ ದಂತಹ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಅಡಿಪಾಯ, ಗ್ರಾಮ ಸಡಕ್ ಯೋಜನೆ, ಮೆಟ್ರೋ ಯೋಜನೆಗಳಿಗೆ ಅಡಿಪಾಯ, ಸಾರ್ವಜನಿಕ ಘಟಕ ವಲಯಗಳ ಖಾಸಗೀಕರಣ, ಸರ್ವ ಶಿಕ್ಷಾ ಅಭಿಯಾನ, ಪರಮಾಣು ಆತ್ಮನಿರ್ಭರತೆ ಮುಂತಾದ ಹತ್ತು ಹಲವು ಯೋಜನೆಗಳಿಗೆ ಅಡಿಪಾಯ ಹಾಕಿದವರು ಅಟಲ್ ಬಿಹಾರಿ ವಾಜಪೇಯಿ.

1996 ರಲ್ಲಿ ನರಸಿಂಹ ರಾವ್ ಸರ್ಕಾರದ ಸೋಲಿನ ನಂತರ ದೇಶದ ಆರ್ಥಿಕತೆಯು ಹಳಿತಪ್ಪಿತ್ತು. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಅಟಲ್ ಬಿಹಾರಿ ವಾಜಪೇಯಿ ಅವರು ಅದನ್ನು ಮತ್ತೆ ಹಳಿಗೆ ತಂದರು ಮತ್ತು 2004ರಲ್ಲಿ ಅವರು ಪ್ರಧಾನ ಮಂತ್ರಿ ಕಚೇರಿಯನ್ನು ತ್ಯಜಿಸಿದಾಗ, ಭಾರತೀಯ ಜಿಡಿಪಿ ಶೇಕಡಾ 8 ಕ್ಕಿಂತ ಹೆಚ್ಚು ಬೆಳೆಯುತ್ತಿತ್ತು ಮತ್ತು ಎರಡಂಕಿಯ ಬೆಳವಣಿಗೆಯನ್ನು ದಾಖಲಿಸುವುದರಲ್ಲಿತ್ತು.

ಅಟಲ್ ಜೀ ಬಗ್ಗೆ ಕೆಲವು ಕುತೂಹಲಕಾರಿ ಮಾಹಿತಿ ಇಲ್ಲಿದೆ

  • ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಅಟಲ್ ಬಿಹಾರಿ ವಾಜಪೇಯಿ 23 ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರು.
  • 4 ರಾಜ್ಯಗಳ 6 ಲೋಕಸಭಾ ಕ್ಷೇತ್ರಗಳಿಂದ ಗೆದ್ದ ಏಕೈಕ ಸಂಸದ ಅಟಲ್ ಜೀ. ಬಲರಾಂಪುರ (ಯುಪಿ), ಲಕ್ನೋ (ಯುಪಿ), ನವದೆಹಲಿ, ವಿದಿಶಾ (ಎಂಪಿ), ಗ್ವಾಲಿಯರ್ (ಎಂಪಿ), ಗಾಂಧಿ ನಗರ (ಗುಜರಾತ್) ನಿಂದ ಚುನಾವಣೆ ಎದುರಿಸಿ ಗೆದ್ದಿದ್ದಾರೆ.
  • ಅವರು 47 ವರ್ಷಗಳ ಕಾಲ ಸಂಸದರಾಗಿದ್ದರು. ಲೋಕಸಭೆಯಿಂದ 11 ಬಾರಿ ಮತ್ತು ರಾಜ್ಯಸಭೆಯಿಂದ ಎರಡು ಬಾರಿ ಚುನಾಯಿತರಾಗಿದ್ದರು. ಸುದೀರ್ಘ ಅವಧಿಯ ಸಂಸದರಲ್ಲಿ ಅಟಲ್ ಜೀ ಒಬ್ಬರು.
  • ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ರಾಜಕಾರಣಿ ವಾಜಪೇಯಿ.
  • ಅವರು ಪ್ರಧಾನಿಯಾಗಿದ್ದಾಗ, ಭಾರತವು ರಾಜಸ್ಥಾನದ ಪೋಖ್ರಾನ್‌ನಲ್ಲಿ ಆಪರೇಷನ್ ಶಕ್ತಿ ಎಂಬ ಹೆಸರಿನ ಯಶಸ್ವಿ ಪರಮಾಣು ಪರೀಕ್ಷೆಯನ್ನು ನಡೆಸಿ ವಿಶ್ವವನ್ನು ನಿಬ್ಬೆರಗಾಗಿಸಿತ್ತು.
  • ಕವಿ ಹೃದಯಿ ಅಟಲ್ ಜೀ ಬಾಲ್ಯದಿಂದಲೇ ಕವಿತೆ ಬರೆಯುತ್ತಿದ್ದರು. ಅವರು 10 ನೇ ತರಗತಿಯಲ್ಲಿದ್ದಾಗ ಬರೆದ ಮೊದಲ ಕವಿತೆ “ಮೇರಾ ಪರಿಚಯ್: ಹಿಂದೂ ತನ್ ಮನ್, ಹಿಂದೂ ಜೀವನ್, ರಗ್ ರಗ್ ಹಿಂದೂ ”
  • ವಾಜಪೇಯಿ ಅವರು ಮರಾಠಿ ಭಾಷೆಯಲ್ಲೂ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರು ವೀರ್ ಸಾವರ್ಕರ್ ಅವರ ಕವಿತೆಗಳನ್ನು ಮರಾಠಿಯಿಂದ ಹಿಂದಿಗೆ ಅನುವಾದಿಸಿದ್ದಾರೆ.
  • ಅಟಲ್ ಬಿಹಾರಿ ವಾಜಪೇಯಿ ಮಾಂಸಾಹಾರಿ ತಿನಿಸುಗಳನ್ನು ಇಷ್ಟಪಡುತ್ತಿದ್ದರು. ಅವರ ನೆಚ್ಚಿನ ಆಹಾರ ಸಿಗಡಿ ಮತ್ತು ಹಳೆಯ ದೆಹಲಿಯಲ್ಲಿರುವ ಕರೀಮ್ ರೆಸ್ಟೋರೆಂಟ್ ಅವರ ನೆಚ್ಚಿನ ತಿನಿಸಿನ ತಾಣವಾಗಿತ್ತು.
  • ವಾಜಪೇಯಿ ಅವರು ರಾಷ್ಟ್ರಧರ್ಮ ಮತ್ತು ಪಾಂಚಜನ್ಯ ಎಂಬ ಎರಡು ಮಾಸಿಕಗಳ ಸಂಪಾದಕರಾಗಿದ್ದರು.
  • 1977ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದರು. ಅಟಲ್ ಜೀ ನಾಲ್ಕು ದಶಕಗಳ ಕಾಲ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತಿದ್ದರು.
  • 2000 ರ ಕೊನೆಯಲ್ಲಿ ಅವರ ಆರೋಗ್ಯವು ಹದಗೆಡಲು ಪ್ರಾರಂಭಿಸಿತು, ಅವರು 2001 ರಲ್ಲಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾದರು ಮತ್ತು 2009 ರಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿ ಮಾತು ಮತ್ತು ನಡೆದಾಡುವ ಶಕ್ತಿಯನ್ನು ಕಳೆದುಕೊಂಡರು. 16 ಆಗಸ್ಟ್ 2018 ರಲ್ಲಿ ನಿಧನರಾದರು.
  • ಸಾಮಾನ್ಯ ಕಾರ್ಯಕರ್ತನಾಗಿದ್ದ ನರೇಂದ್ರ ಡಿ.ಮೋದಿಯವರನ್ನು ಗುಜರಾತಿನ ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡಿದ ಕೀರ್ತಿ ಅಟಲ್ ಜಿ ಅವರಿಗೆ ಸಲ್ಲುತ್ತದೆ. ತಮ್ಮ ರಾಜಕೀಯ ಗುರುವಿನ ಬಗ್ಗೆ ಅತ್ಯಂತ ಗೌರವ ಹೊಂದಿರುವ ಪ್ರಧಾನಿ ಮೋದಿ ಅಟಲ್ ಜಿ ಹೆಸರಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.