ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ರೀಲ್ ವೈರಲ್ ಆಗಬೇಕಾ? ಈ ತಂತ್ರ ಇದೀಗ ಗೇಮ್ ಚೇಂಜರ್!

ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿದಿನ ಲಕ್ಷಾಂತರ ರೀಲ್ಸ್ ಅಪ್‌ಲೋಡ್ ಆಗುತ್ತಿವೆ. ಆದರೆ ಅವುಗಳಲ್ಲಿ ಕೆಲವೇ ಕೆಲವು ಮಾತ್ರ ಮಿಲಿಯನ್ ವೀಕ್ಷಣೆಗಳನ್ನು ಪಡೆದು ವೈರಲ್ ಆಗುತ್ತವೆ. ಉಳಿದ ಅನೇಕ ವಿಡಿಯೋಗಳು ಕೆಲವೇ ಕ್ಷಣಗಳಲ್ಲಿ ಜನರ ಗಮನದಿಂದ ಮರೆಯಾಗುತ್ತವೆ. ಹಾಗಾದರೆ ಕೆಲವು ರೀಲ್ಸ್ ಮಾತ್ರ ಏಕೆ ಸಕ್ಸಸ್ ಆಗುತ್ತವೆ?  ಇದಕ್ಕೆ ಉತ್ತರವಾಗಿ ಎಲ್ಲರೂ ಹೇಳುತ್ತಿರುವ ಒಂದು ಪ್ರಮುಖ ತಂತ್ರವೇ — ‘3-ಸೆಕೆಂಡ್ ಹುಕ್’. ಸಾಮಾಜಿಕ ಮಾಧ್ಯಮ ತಜ್ಞರ ಪ್ರಕಾರ, ಇಂದಿನ ದೊಡ್ಡ ಸವಾಲು ಎಂದರೆ ಬಳಕೆದಾರರ ಗಮನ ಸೆಳೆಯುವುದು. ಯಾಕೆಂದರೆ, ಒಬ್ಬ ವ್ಯಕ್ತಿ […]

ತಿರುಪತಿ ದರ್ಶನದ ಹೆಸರಿನಲ್ಲಿ ಮಹಿಳೆಗೆ ಪಂಗನಾಮ ಹಾಕಿದ ಸೈಬರ್ ಕಳ್ಳರು: ಹೊಟೇಲ್ ಬುಕ್ಕಿಂಗ್ ಎಂದು ಕಬಳಿಸಿದ್ದು ಬರೋಬ್ಬರಿ ₹4,99,242, ನೀವೂ ಹೀಗೆ ಮೋಸ ಹೋಗಬೇಡಿ

ಮೈಸೂರು: ದೇವರ ದರ್ಶನದ ಕನಸು ಹೊತ್ತು ಹೊರಟಿದ್ದ ಮಹಿಳೆಯೊಬ್ಬರಿಗೆ ಸೈಬರ್ ಖದೀಮರು ಬಲೆ ಬೀಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ತಿರುಪತಿ ಪ್ರವಾಸಕ್ಕೆ ಹೋಟೆಲ್ ಬುಕ್ ಮಾಡಲು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ 67 ವರ್ಷದ ಮಹಿಳೆ, ನಕಲಿ ಹೋಟೆಲ್ ನಂಬರ್‌ಗೆ ಕರೆ ಮಾಡಿ ಕೊನೆಗೆ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೈಸೂರಿನ ಸರಸ್ವತಿಪುರಂ ನಿವಾಸಿಯಾಗಿರುವ ಮಹಿಳೆ ತಿರುಪತಿ ಪ್ರವಾಸದ ನಿಮಿತ್ತ ಕಡಿಮೆ ದರದ ಹೋಟೆಲ್ ಹುಡುಕುತ್ತಿದ್ದರು. […]

ಇನ್ನು UPI ಮೂಲಕ PF ಹಣ ಡ್ರಾ ಮಾಡಬಹುದು, ವಾಟ್ಸಾಪ್ ನಲ್ಲೂ ಸಿಗಲಿದೆ EPFO ಸೇವೆ, ಹೇಗೆ ಇಲ್ಲಿದೆ ಮಾಹಿತಿ

ಭಾರತದಲ್ಲಿ ಡಿಜಿಟಲ್ ಸೇವೆಗಳ ವಿಸ್ತರಣೆಯ ಭಾಗವಾಗಿ Employees’ Provident Fund Organisation (EPFO) ಇದೀಗ ಮಹತ್ವದ ಹೊಸ ವ್ಯವಸ್ಥೆಗಳನ್ನು ಪರಿಚಯಿಸಲು ಮುಂದಾಗಿದೆ. ಇನ್ನು ಮುಂದೆ PF ಹಣವನ್ನು ಪಡೆಯಲು ಕಚೇರಿಗಳಿಗೆ ಸುತ್ತಾಡುವ ಕಷ್ಟ ಕಡಿಮೆಯಾಗಲಿದ್ದು, UPI ಹಾಗೂ ವಾಟ್ಸಾಪ್ ಮೂಲಕವೇ ಹಲವು ಸೇವೆಗಳು ಲಭ್ಯವಾಗಲಿವೆ. UPI ಮೂಲಕ PF ಹಣ ಡ್ರಾ ಹೇಗೆ? ಹೊಸ ವ್ಯವಸ್ಥೆಯ ಪ್ರಕಾರ, EPFO ಸದಸ್ಯರು ತಮ್ಮ PF ಖಾತೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಮತ್ತು UPI ಬಳಸಿ ಹಣವನ್ನು ನೇರವಾಗಿ […]

ಇಲೆಕ್ಟ್ರಿಕ್ ಗಾಡಿ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ, ಶೋರೂಂ ಗಳ ಬಣ್ಣದ ಮಾತುಗಳಿಗೆ ಮರುಳಾಗಬೇಡಿ, ಈ ಅಂಶಗಳನ್ನು ನೆನಪಲ್ಲಿಡಿ!

“ಲೈಸೆನ್ಸ್ ಬೇಡ, ಆರ್‌ಟಿಒ ರಿಜಿಸ್ಟ್ರೇಷನ್ ಬೇಡ” ಎಂಬ ಆಮಿಷಗಳಿಗೆ ಮಾರು ಹೋಗಿ ಇವಿ ಬೈಕ್ ಖರೀದಿಸಲು ಮುಂದಾಗುತ್ತಿದ್ದರೆ ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ, ಅನಧಿಕೃತ ಇವಿ ಬೈಕ್ ಶೋರೂಮ್‌ಗಳು ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿ ವಾಹನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಕೆಲವು ಕಂಪನಿಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ, ರಿಜಿಸ್ಟ್ರೇಷನ್ ಮತ್ತು ಲೈಸೆನ್ಸ್ ಕಡ್ಡಾಯವಾಗಿರುವ ಬೈಕ್‌ಗಳನ್ನೇ “ಯಾವ ದಾಖಲೆಗಳೂ ಬೇಡ” ಎಂದು ಹೇಳಿ ಮಾರಾಟ ಮಾಡುತ್ತಿರುವುದಾಗಿ ದೂರುಗಳು ದಾಖಲಾಗಿವೆ. ಮಂಡ್ಯದಲ್ಲಿ […]

ನಿಮ್ಮ ಮೊಬೈಲ್ ಇಂಟರ್ನೆಟ್ ಸ್ಲೋ ಆಗಿದೆಯೇ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಇಂಟರ್ನೆಟ್ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಕೆಲವೊಮ್ಮೆ ವಿಡಿಯೋ ಬಫರಿಂಗ್, ವೆಬ್‌ಸೈಟ್ ತೆರೆಯದಿರುವುದು, ಸೋಶಿಯಲ್ ಮೀಡಿಯಾ ನಿಧಾನಗೊಳ್ಳುವುದು ಮುಂತಾದ ಸಮಸ್ಯೆಗಳು ಕಿರಿಕಿರಿ ಉಂಟುಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಮೊಬೈಲ್ ಡೇಟಾ ವೇಗವನ್ನು ಸುಧಾರಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ಮೊಬೈಲ್ ರೀಸ್ಟಾರ್ಟ್ ಮಾಡಿ ಮೊಬೈಲ್ ಅನ್ನು ಒಮ್ಮೆ ರೀಸ್ಟಾರ್ಟ್ ಮಾಡುವುದರಿಂದ ತಾತ್ಕಾಲಿಕ ನೆಟ್‌ವರ್ಕ್ ಸಮಸ್ಯೆಗಳು ಸರಿಯಾಗಬಹುದು. ಜೊತೆಗೆ ಏರ್‌ಪ್ಲೇನ್ ಮೋಡ್ ಅನ್ನು ಕೆಲ ಸೆಕೆಂಡ್‌ಗಳ ಕಾಲ ಆನ್ […]