ಚಾರ್ಜರ್ ಅನ್ನು ಸಾಕೆಟ್‌ನಲ್ಲೇ ಬಿಡ್ತೀರಾ? ಈ ಅಭ್ಯಾಸ ನಿಮ್ಮ ಜೇಬಿಗೆ ಹಾಕಬಹುದು ಕತ್ತರಿ!

ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ, ಚಾರ್ಜರ್ ಅನ್ನು ಬಳಕೆ ಬಳಿಕವೂ ಸಾಕೆಟ್‌ನಲ್ಲೇ ಬಿಡುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಈ ಅಭ್ಯಾಸ ದೀರ್ಘಾವಧಿಯಲ್ಲಿ ವಿದ್ಯುತ್ ವ್ಯರ್ಥವಾಗುವುದರ ಜೊತೆಗೆ ಸುರಕ್ಷತೆಯ ಮೇಲೂ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಆಧುನಿಕ ಚಾರ್ಜರ್‌ಗಳಲ್ಲಿ ಓವರ್‌ಚಾರ್ಜಿಂಗ್ ಸಮಸ್ಯೆ ಇಲ್ಲಇಂದಿನ ಸ್ಮಾರ್ಟ್‌ಫೋನ್‌ಗಳು ಮತ್ತು ಆಧುನಿಕ ಚಾರ್ಜರ್‌ಗಳು ಬ್ಯಾಟರಿ 100% ಚಾರ್ಜ್ ಆದ ಬಳಿಕ ವಿದ್ಯುತ್ ಹರಿವನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುತ್ತವೆ. ಹೀಗಾಗಿ ರಾತ್ರಿಯಿಡೀ ಚಾರ್ಜ್ ಮಾಡಿದರೂ ಸಾಮಾನ್ಯವಾಗಿ […]

ಹೊಸ ತಂತ್ರಜ್ಞಾನದ ಬೈಕ್ ಇಂದು ಮಾರುಕಟ್ಟೆಗೆ: ಪೆಟ್ರೋಲ್ ಇಲ್ಲದೆಯೂ ಓಡತ್ತೆ ಈ ಬೈಕ್

ನವದೆಹಲಿ: ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್ ತನ್ನ ಮೊದಲ ಫ್ಲೆಕ್ಸ್ ಫ್ಯೂಯೆಲ್ ಮೋಟಾರ್‌ಸೈಕಲ್ ಅನ್ನು ಇಂದು ದೆಹಲಿಯಲ್ಲಿ ಅನಾವರಣಗೊಳಿಸುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫ್ಲೆಕ್ಸ್ ಫ್ಯೂಯೆಲ್ ತಂತ್ರಜ್ಞಾನ ಎಂದರೇನು? ಫ್ಲೆಕ್ಸ್ ಫ್ಯೂಯೆಲ್ ವಾಹನಗಳು ಪೆಟ್ರೋಲ್ ಮಾತ್ರವಲ್ಲದೆ, ಎಥೆನಾಲ್ ಮಿಶ್ರಿತ ಇಂಧನದಲ್ಲಿಯೂ ಕಾರ್ಯನಿರ್ವಹಿಸುತ್ತವೆ. ಈ ಹೊಸ ಬೈಕ್ E20, E85 ಹಾಗೂ E100 […]

ಇನ್ನು ಭಾರತದಲ್ಲಿ ಹಾಲು ಇರುವ ಐಸ್ ಕ್ರೀಂಗಳನ್ನೇ ತಯಾರು ಮಾಡ್ತೇವೆ ಎಂದ ಕ್ವಾಲಿಟಿ ವಾಲ್ಸ್: ಹಾಗಾದ್ರೆ ಇಷ್ಟು ದಿನ ನಾವು ತಿಂದ ಐಸ್ ಕ್ರೀಂ ನಲ್ಲಿ ಏನಿತ್ತು?

ನವದೆಹಲಿ: ಜನಪ್ರಿಯ ಐಸ್‌ಕ್ರೀಮ್ ತಯಾರಿಕಾ ಸಂಸ್ಥೆ ಕ್ವಾಲಿಟಿ ವಾಲ್ಸ್ Kwality Wall’s ತನ್ನ ಎಲ್ಲಾ ಉತ್ಪನ್ನಗಳನ್ನು ಇನ್ನು ಮುಂದೆ ಸಂಪೂರ್ಣ ಹಾಲು ಆಧಾರಿತ ಐಸ್‌ಕ್ರೀಮ್‌ಗಳಾಗಿ ಮಾರಾಟ ಮಾಡುವುದಾಗಿ ಘೋಷಿಸಿದೆ. ಈ ಮೂಲಕ ಸಂಸ್ಥೆ ತನ್ನ “ಫ್ರೋಜನ್ ಡೆಸರ್ಟ್” ಮಾದರಿಯಿಂದ ಸಂಪೂರ್ಣವಾಗಿ ಹೊರಬಂದು ನೈಜ ಐಸ್‌ಕ್ರೀಮ್ ಉತ್ಪನ್ನಗಳತ್ತ ಹೆಜ್ಜೆ ಇಟ್ಟಿದೆ. ಈ ಹೇಳಿಕೆಯಿಂದ ಹಾಗಾದ್ರೆ ನಾವೆಲ್ಲಾ ಇಷ್ಟು ದಿನ ತಿಂದ ಐಸ್ ಕ್ರೀಂ ಗಳಲ್ಲಿ ಹಾಲಿನ ಅಂಶಗಳೇ ಇರಲಿಲ್ಲವೇ ಎನ್ನುವ ಪ್ರಶ್ನೆ ಮೂಡಿದೆ. ಸಂಸ್ಥೆಯ ಜನಪ್ರಿಯ ಬ್ರ್ಯಾಂಡ್‌ಗಳಾದ Magnum […]

ಫೇಸ್ಬುಕ್, ವಾಟ್ಸಾಪ್ ಬಳಕೆಗೂ ಶುಲ್ಕ ಕೊಡ್ಬೇಕು, ಏನ್ ಮಾಡೋಕೆ ಹೊರಟಿದೆ Meta !

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆದಾರರಿಗಾಗಿ ಹೊಸ ಪ್ರೀಮಿಯಂ ಸೇವೆಗಳನ್ನು ಪರಿಚಯಿಸುವತ್ತ ಮೆಟಾ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದೆ. Facebook, Instagram ಮತ್ತು WhatsApp ಸೇರಿದಂತೆ ತನ್ನ ವಿವಿಧ ವೇದಿಕೆಗಳ ಹೆಚ್ಚುವರಿ ವೈಶಿಷ್ಟ್ಯಗಳನ್ನು ಒಂದೇ ಚಂದಾದಾರಿಕೆ ವ್ಯವಸ್ಥೆಯ ಅಡಿಯಲ್ಲಿ ತರಲು ಕಂಪನಿ ಮುಂದಾಗಿದ್ದು, ಇದಕ್ಕೆ ‘ಮೆಟಾ ಒನ್’ ಎಂದು ಹೆಸರಿಟ್ಟಿದೆ. ಹೆಚ್ಚುವರಿ ಸೌಲಭ್ಯಕ್ಕೆ ಹಣ ಕೊಡಿ: ಸಾಮಾನ್ಯವಾಗಿ ಬಳಕೆದಾರರು ಈಗ ಬಳಸುತ್ತಿರುವ Facebook, Instagram ಮತ್ತು WhatsApp ಸೇವೆಗಳು ಎಂದಿನಂತೆ ಉಚಿತವಾಗಿಯೇ ಮುಂದುವರಿಯಲಿವೆ. ಆದರೆ ಹೆಚ್ಚುವರಿ ಸೌಲಭ್ಯಗಳು […]

ಕಾರು ಪ್ರಿಯರಿಗೆ ಶಾಕ್ ನೀಡಿದ Maruti Suzuki: ಜೂ. 1 ರಿಂದ ಕಾರುಗಳ ಬೆಲೆಯಲ್ಲಿ ಭಾರೀ ಹೆಚ್ಚಳ

ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ Maruti Suzuki ತನ್ನ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಜೂನ್ ತಿಂಗಳಿನಿಂದ ಅನ್ವಯವಾಗುವಂತೆ ಕಂಪನಿಯ ವಿವಿಧ ಕಾರುಗಳ ಬೆಲೆಯಲ್ಲಿ ಗರಿಷ್ಠ ₹30,000 ವರೆಗೆ ಹೆಚ್ಚಳ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ವಾಹನ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ಮುಂಬೈನ ರಾಷ್ಟ್ರೀಯ ಷೇರುಪೇಟೆ (NSE)ಗೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದೆ. ಈ ದರ ಏರಿಕೆ ಎಲ್ಲಾ ಮಾದರಿಗಳಿಗೂ ಒಂದೇ ರೀತಿಯಾಗಿರುವುದಿಲ್ಲ. […]