ಕುಕ್ಕರ್ ಬಳಕೆಗೂ ಮುನ್ನ ಈ ವಿಚಾರ ತಿಳಿದಿರಲಿ: ಇಲ್ಲಾಂದ್ರೆ ಬ್ಲಾಸ್ಟ್ ಆಗೋ ಸಾಧ್ಯತೆಯಿದೆ

ಇತ್ತೀಚಿನ ದಿನಗಳಲ್ಲಿ ಬಹುತೇಕ ಪ್ರತಿಯೊಂದು ಮನೆಯ ಅಡುಗೆಮನೆಯಲ್ಲಿ ಪ್ರೆಶರ್ ಕುಕರ್ Pressure Cooker ಬಳಸಲಾಗುತ್ತಿದೆ. ಕಡಿಮೆ ಸಮಯದಲ್ಲಿ ಅಡುಗೆ ಸಿದ್ಧವಾಗಲು ಇದು ಸಹಾಯಕವಾದರೂ, ಅಜಾಗರೂಕತೆಯಿಂದ ಬಳಸಿದರೆ ಅಪಾಯಕ್ಕೂ ಕಾರಣವಾಗಬಹುದು. ವಿಶೇಷವಾಗಿ ಕೆಲ ಸಾಮಾನ್ಯ ತಪ್ಪುಗಳು ಕುಕ್ಕರ್ ಸ್ಫೋಟಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ರಬ್ಬರ್ ಗ್ಯಾಸ್ಕೆಟ್ ಮತ್ತು ಸುರಕ್ಷತಾ ಕವಾಟ ಪರಿಶೀಲನೆ ಅಗತ್ಯ ಕುಕ್ಕರ್ ಬಳಸುವ ಮೊದಲು ಅದರ ರಬ್ಬರ್ ಗ್ಯಾಸ್ಕೆಟ್ ಹಾಗೂ ಸುರಕ್ಷತಾ ಕವಾಟ ಸರಿಯಾದ ಸ್ಥಿತಿಯಲ್ಲಿವೆಯೇ ಎಂದು ಪರಿಶೀಲಿಸಬೇಕು. ಇವು ಕುಕ್ಕರ್‌ನೊಳಗಿನ ಒತ್ತಡವನ್ನು […]
ನಿವೃತ್ತ ಅಧಿಕಾರಿಯನ್ನು ಬೀದಿಗೆ ತಳ್ಳಿ ಬಿಟ್ಟಿತು, ಆ ಒಂದು ವಾಟ್ಸಾಪ್ ಮೆಸೆಜ್: ಮೈಸೂರಿನ ಈ ಘಟನೆ ನಾಳೆ ನಮ್ಮೂರಲ್ಲೂ ಆಗಬಹುದು ಎಚ್ಚರವಾಗಿರಿ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಎಂದರೆ ನೆಮ್ಮದಿಯ ತಾಣ ಎಂದು ಹೇಳಲಾಗುತ್ತದೆ. ಆದರೆ ಇದೀಗ ಅದೇ ನಗರದಲ್ಲಿ ಸೈಬರ್ ಖದೀಮರು ಡಿಜಿಟಲ್ ದರೋಡೆಗೆ ಇಳಿದಿರುವ ಘಟನೆಗಳು ಹೆಚ್ಚಾಗುತ್ತಿವೆ. ನಿವೃತ್ತ ಅಧಿಕಾರಿಯನ್ನು ಬೀದಿಗೆ ತಳ್ಳಿ ಬಿಟ್ಟಿತು ಸೈಬರ್ ಕಳ್ಳರ ಆ ಒಂದು ಮೆಸೆಜ್, ಹೌದು ಕಷ್ಟಪಟ್ಟು ದುಡಿದು ನಿವೃತ್ತಿ ಜೀವನವನ್ನು ಸುಖವಾಗಿ ಕಳೆಯಬೇಕೆಂದಿದ್ದ ಅಧಿಕಾರಿಯೊಬ್ಬರು ಇದೀಗ ಕೋಟಿ ರೂಪಾಯಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇವಲ ಒಂದು ವಾಟ್ಸಾಪ್ ಮೆಸೇಜ್ ಇಡೀ ಬದುಕನ್ನೇ ಉಲ್ಟಾಪಲ್ಟಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. […]
ಭಾರತೀಯ ರೈಲ್ವೆಯಿಂದ ಪ್ರಯಾಣಿಕರಿಗೆ ಸಿಹಿ ಸುದ್ದಿ: ಹೊಸ AI ಆಧಾರಿತ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಜಾರಿ!

ನವದೆಹಲಿ: Indian Railways ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಆಗಸ್ಟ್ 2026ರಿಂದ ಹೊಸ ತಲೆಮಾರಿನ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಅನ್ನು ಹಂತ ಹಂತವಾಗಿ ಜಾರಿಗೆ ತರಲು ಸಿದ್ಧವಾಗಿದೆ. ಸುಮಾರು 40 ವರ್ಷಗಳ ಹಳೆಯ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ನವೀಕರಿಸಲಾಗುತ್ತಿದ್ದು, ಇದರ ಮೂಲಕ ವೇಗವಾದ ಟಿಕೆಟ್ ಬುಕ್ಕಿಂಗ್, ಹೆಚ್ಚಿದ ಪಾರದರ್ಶಕತೆ ಹಾಗೂ ಉತ್ತಮ ಪ್ರಯಾಣಿಕ ಸೇವೆ ದೊರೆಯಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ರೈಲ್ವೆ ಮೂಲಗಳ ಪ್ರಕಾರ, ಹೊಸ PRS ವ್ಯವಸ್ಥೆ ಒಂದು ನಿಮಿಷಕ್ಕೆ […]
ನೀವಿನ್ನು ಮನೆಗೆ ಬೀಗ ಹಾಕಿ ಹಲವು ದಿನಗಳ ಕಾಲ ಹೊರಹೋಗಬೇಕಾದರೆ ಚಿಂತಿಸಬೇಕಿಲ್ಲ: ಇಲ್ಲಿದೆ ಒಂದು ಪ್ಲಾನ್

ಉಡುಪಿ: ಇಲ್ಲಿನ ಜಿಲ್ಲಾ ಪೊಲೀಸರು ಬೀಗ ಹಾಕಿದ ಮನೆಗಳ ಸುರಕ್ಷತೆಗೆ “ಲಾಕ್ಡ್ ಹೌಸ್ ಬೀಟ್ ಸಿಸ್ಟಮ್” (LHBS) ಎಂಬ ವಿನೂತನ ಯೋಜನೆ ಆರಂಭಿಸಿದ್ದಾರೆ. ಕೆಲಸ, ಪ್ರವಾಸ ಅಥವಾ ಇತರ ಕಾರಣಗಳಿಂದ ಮನೆಗೆ ಬೀಗ ಹಾಕಿ ಹೊರಡುವ ನಿವಾಸಿಗಳ ಮನೆಗಳ ಮೇಲೆ ಪೊಲೀಸರು ವಿಶೇಷ ನಿಗಾ ಇಡಲಿದ್ದಾರೆ. ಸಂಬಂಧಪಟ್ಟ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ಹಗಲು ಹಾಗೂ ರಾತ್ರಿ ವೇಳೆ ಮನೆಗಳಿಗೆ ಭೇಟಿ ನೀಡಿ ಭದ್ರತೆ ಪರಿಶೀಲಿಸಲಿದ್ದಾರೆ. ಪ್ರಯಾಣಕ್ಕೆ ತೆರಳುವವರು ಜಿಲ್ಲಾ ನಿಯಂತ್ರಣ ಕೊಠಡಿಯ ಸಹಾಯವಾಣಿ ಸಂಖ್ಯೆ 0820-2526709 […]
ನಿಮ್ಮ ಮಕ್ಕಳನ್ನು ಲೆಕ್ಕದಲ್ಲಿ ಪಕ್ಕಾ ಕ್ರಿಯೇಟಿವ್ ಮಾಡುತ್ತೆ ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್: ಮೇ 11 ರಿಂದ ಶುರುವಾಗುವ ಈ ಕಾರ್ಯಾಗಾರದಲ್ಲಿ ಭಾಗವಹಿಸಿ ಗಣಿತ ಕೌಶಲ್ಯ ಪಡೀರಿ

ಉಡುಪಿ: ಮಕ್ಕಳಲ್ಲಿ ಗಣಿತದ ಮೇಲಿನ ಆಸಕ್ತಿ ಹೆಚ್ಚಿಸಿ, ಅವರಿಗೆ ಪಾಠಗಳನ್ನು ಸುಲಭವಾಗಿ ಕಲಿಸುವ ಉದ್ದೇಶದಿಂದ ಮಣಿಪಾಲದ ಶ್ರೀ ಶಾರದಾ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ ವಿಶೇಷ “ಟೇಬಲ್ಸ್ ವರ್ಕ್‌ಶಾಪ್” ನ್ನು ಮೇ 11 ರಿಂದ ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ 99 ರವರೆಗಿನ ಟೇಬಲ್ಸ್ ಗಳನ್ನು ಮನರಂಜನಾತ್ಮಕವಾಗಿ ಹಾಗೂ ಸುಲಭ ವಿಧಾನಗಳ ಮೂಲಕ ಕಲಿಸಲಾಗುತ್ತದೆ. ಜೊತೆಗೆ ಪಾಠಗಳನ್ನು ಅವರಿಗೆ ಖುಷಿ ಕೊಡುವ ಚಟುವಟಿಕೆಗಳನ್ನು, ಕ್ವಿಜ್ ಹಾಗೂ ಗೇಮ್ಸ್‌ಗಳ ಮೂಲಕವೂ ಕ್ರಿಯಾಶೀಲವಾಗಿ ಹೇಳಿಕೊಡಲಾಗುತ್ತದೆ. ಒಟ್ಟಾರೆಯಾಗಿ ಮಕ್ಕಳಲ್ಲಿ ಗಣಿತ ಕೌಶಲ್ಯವನ್ನು ವೃದ್ಧಿಸುವ […]