ಮೋದಿ ಕೃತಜ್ಞತೆ : 11 ದಿನದಲ್ಲಿ ಪಿಎಂ ಮೋದಿ ವಾಟ್ಸ್ಆಯಪ್ ಚಾನೆಲ್ಗೆ 5 ಮಿಲಿಯನ್ ಫಾಲೋವರ್ಸ್

ನವದೆಹಲಿ:ಸೆಪ್ಟೆಂಬರ್ 14ರಂದು ಪ್ರಧಾನಿಗಳು ಮೊದಲ ಬಾರಿಗೆ ವಾಟ್ಸ್ಆಯಪ್ಗೆ ಅಡಿ ಇಟ್ಟಿದ್ದರು. ಇವತ್ತು 11 ದಿನಗಳ ಬಳಿಕ ಅವರ ಫಾಲೋವರ್ಸ್ ಸಂಖ್ಯೆ 53 ಲಕ್ಷ ಮುಟ್ಟಿದೆ. ಸೋಷಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಫಾಲೋವರ್ಸ್ಗಳನ್ನು ಹೊಂದಿರುವ ವಿಶ್ವನಾಯಕರಲ್ಲಿ ಪ್ರಮುಖರಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾಟ್ಸ್ಆಯಪ್ನಲ್ಲೂ ಕಿಂಗ್ ಎನಿಸಿಕೊಳ್ಳುವತ್ತ ಸಾಗುತ್ತಿದ್ದಾರೆ. ‘ನಾವು 50 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಆಗಿರುವುದರಿಂದ, ನನ್ನ ವಾಟ್ಸ್ಆಯಪ್ ಚಾನೆಲ್ ಮೂಲಕ ನನ್ನೊಂದಿಗೆ ಸಂಪರ್ಕ ಹೊಂದಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ನಿಮ್ಮಲ್ಲಿ ಪ್ರತಿಯೊಬ್ಬರ ನಿರಂತರ ಬೆಂಬಲಕ್ಕೆ ಕೃತಜ್ಞರಾಗಿರುತ್ತೇನೆ. […]
ಸತತ 4ನೇ ದಿನದಲ್ಲಿ ಸೆನ್ಸೆಕ್ಸ್, ನಿಫ್ಟಿ ಕುಸಿತ

ಮುಂಬೈ : ಶುಕ್ರವಾರದಂದು ಬಿಎಸ್‌ಇ ಸೆನ್ಸೆಕ್ಸ್ 221.09 ಪಾಯಿಂಟ್ಸ್ ಕುಸಿದು 66,009.15 ಕ್ಕೆ ಕೊನೆಗೊಂಡರೆ, ಎನ್‌ಎಸ್‌ಇ ನಿಫ್ಟಿ 50 68.10 ಪಾಯಿಂಟ್ಸ್ ಕುಸಿದು 19,674.25 ಕ್ಕೆ ತಲುಪಿದೆ.ಭಾರತೀಯ ಷೇರು ಮಾರುಕಟ್ಟೆಗಳು ಶುಕ್ರವಾರ ಇಳಿಕೆಯೊಂದಿಗೆ ಕೊನೆಗೊಂಡಿವೆ.ಫಾರ್ಮಾ ಕಂಪನಿಗಳ ಷೇರುಗಳು ತೀವ್ರ ಕುಸಿಯುವುದರೊಂದಿಗೆ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಶುಕ್ರವಾರ ಸತತ ನಾಲ್ಕನೇ ದಿನ ಇಳಿಕೆಯೊಂದಿಗೆ ಕೊನೆಗೊಂಡವು. ನಿಫ್ಟಿ ಸ್ಮಾಲ್ಕ್ಯಾಪ್100 ಹೊರತುಪಡಿಸಿ ಹೆಚ್ಚಿನ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ಇಳಿಕೆಯಲ್ಲಿ ಕೊನೆಗೊಂಡವು. ನಿಫ್ಟಿ ಸ್ಮಾಲ್ಕ್ಯಾಪ್100 ಶೇಕಡಾ 0.26 ರಷ್ಟು ಏರಿಕೆಯಾಗಿದೆ. […]
ದೇಶದ ಅಭಿವೃದ್ದಿಯ ಕನಸನ್ನು ತಮ್ಮ ಚಾಣಾಕ್ಷತೆಯಿಂದ ನನಸಾಗಿಸುವ ಆಧುನಿಕ ಶಿಲ್ಪಿಗಳಿಗೆ ಇಂಜಿನಿಯರ್ಸ್ ದಿನದ ಶುಭಾಶಯಗಳು

ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರವೂ ಹಿರಿದು. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮತ್ತು ಆರ್ಥಿಕವಾಗಿ ಸದೃಢವನ್ನಾಗಿಸಲು ನೆರವಾಗುವ ಎಂಜಿನಿಯರ್‌ಗಳ ಸೇವೆಯನ್ನು ಸ್ಮರಿಸುವ, ತನ್ಮೂಲಕ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ `ಇಂಜಿನಿಯರ್‌ಗಳ ದಿನ’ವನ್ನು ಆಚರಿಸಲಾಗುತ್ತದೆ. ಇಂದು ಸೆಪ್ಟೆಂಬರ್ 15 ಇಂಜಿನಿಯರ್‌ಗಳ ದಿನ ಬನ್ನಿ ಇಂಜಿನಿಯರ್ ದಿನದ ಆಚರಣೆಯ ಹಿನ್ನಲೆ ಏನು ಒಮ್ಮೆ ತಿಳಿದುಕೊಳ್ಳೋಣ. ಸರ್ ಎಂ ವಿಶ್ವೇಶ್ವರಯ್ಯ. ನಮ್ಮ ನೆಲದ ಸಾಕ್ಷಿಪ್ರಜ್ಞೆ. ಭಾರತದ ಕಂಡ ಅಪ್ರತಿಮ ಇಂಜಿನಿಯರ್. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1860 ಸೆಪ್ಟೆಂಬರ್ 15ರಂದು ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ […]
ವಿಶ್ವ ಇಂಜಿನಿಯರ್ಸ್ ದಿನಾಚರಣೆಯ ಶುಭಾಶಯಗಳು: ನಾಡಿನ ಗಣ್ಯರಿಂದ ಶುಭಹಾರೈಕೆ

ವಿಶ್ವ ಇಂಜಿನಿಯರ್ಸ್ ದಿನಾಚರಣೆಯ ಶುಭಾಶಯಗಳು: ನಾಡಿನ ಗಣ್ಯರಿಂದ ಶುಭಹಾರೈಕೆ
ನೋಕಿಯಾ 5G ಸ್ಮಾರ್ಟ್‌ಫೋನ್ G-42 ಬಿಡುಗಡೆ : ಇಲ್ಲಿದೆ ಮಾಹಿತಿ
ನವದೆಹಲಿ: ಬ್ಯಾಟರಿ ಸೇರಿದಂತೆ ರಫ್ ಆಯಂಡ್ ಟಫ್ ಯೂಸ್ಗೆ ಹೆಸರುವಾಸಿಯಾಗಿರುವ ಖ್ಯಾತ ಕಂಪನಿ ನೋಕಿಯಾ ಇದೀಗ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸುವ ಮೂಲಕ ಮತ್ತೆ ಕಮ್ಬ್ಯಾಕ್ಗೆ ಸಿದ್ದವಾಗಿದೆ.ನೋಕಿಯಾದ ಹೆಚ್ಎಮ್ಡಿ ಗ್ಲೋಬಲ್ ಇಂದು ಭಾರತದಲ್ಲಿ G42 ಹೆಸರಿನ ನೋಕಿಯಾ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. G ಸರಣಿಯ ಈ ಸ್ಮಾರ್ಟ್‌ಫೋನ್ 6.56 ಇಂಚಿನ ಹೆಚ್ಡಿ ಡಿಸ್ಪ್ಲೇ, 90Hz ರಿಫ್ರೆಶ್ ರೇಟ್ ಜತೆಗೆ ಸ್ನ್ಯಾಪ್ಡ್ರಾಗನ್480+5G ಪ್ರೊಸೆಸರ್, ಹೈಬ್ರಿಡ್ಸಿಮ್ ಸ್ಲಾಟ್ ಹೊಂದಿರಲಿದೆ. ನೋಕಿಯಾ ಕಂಪನಿ ಅಗ್ಗದ ಬೆಲೆಯಲ್ಲಿ ಹೆಚ್ಚಿನ ವೈಶಿಷ್ಟ್ಯತೆಗಳನ್ನೊಳಗೊಂಡ […]