ಗೂಗಲ್ : ಆಂಡ್ರಾಯ್ಡ್​ ಬಳಕೆದಾರರಿಗೆ ಭೂಕಂಪ ಮುನ್ನೆಚ್ಚರಿಕೆ​ ವ್ಯವಸ್ಥೆ ಜಾರಿ

ನವದೆಹಲಿ : ಭಾರತದಲ್ಲಿನ ಆಂಡ್ರಾಯ್ಡ್​​ ಬಳಕೆದಾರರಿಗಾಗಿ ಭೂಕಂಪದ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನು ಗೂಗಲ್ ಬುಧವಾರದಿಂದ ಜಾರಿಗೊಳಿಸಿದೆ.ಭೂಕಂಪವಾದಾಗ ಜನರು ಸುರಕ್ಷಿತವಾಗಿ ಹಾಗೂ ತ್ವರಿತವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ನೀಡುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಇದು ಆಂಡ್ರಾಯ್ಡ್​ ಸ್ಮಾರ್ಟ್​ಪೋನ್ ಬಳಕೆದಾರರಿಗೆ ಲಭ್ಯವಿರುತ್ತದೆ. ವಿಶ್ವದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳ ಪೈಕಿ ಭೂಕಂಪಗಳ ಪಾಲು ದೊಡ್ಡದಾಗಿದೆ. ಭೂಕಂಪ ಸಂಭವಿಸಿದಾಗ ತಕ್ಷಣ ನೀಡುವ ಎಚ್ಚರಿಕೆಯು ಜನ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಾಗೂ ಇತರರನ್ನು ಕೂಡ ರಕ್ಷಿಸಲು ಬಹಳ ಉಪಯುಕ್ತವಾಗುತ್ತದೆ.ಆಂಡ್ರಾಯ್ಡ್​ ಬಳಕೆದಾರರಿಗೆ ಭೂಕಂಪದ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯೊಂದನ್ನು ಗೂಗಲ್ ಭಾರತದಲ್ಲಿ ಜಾರಿಗೊಳಿಸಿದೆ.

ವಿಶೇಷವಾಗಿ ಫೋನ್ ಅನ್ನು ಚಾರ್ಜಿಂಗ್ ಮಾಡಲು ಪ್ಲಗ್​ಗೆ ಸಿಕ್ಕಿಸಿದ ಸಮಯದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಗಳನ್ನು ಬಹುಬೇಗನೆ ಈ ವ್ಯವಸ್ಥೆ ಕಂಡುಹಿಡಿಯುತ್ತದೆ. ಭೂಕಂಪದ ವಿಚಾರದಲ್ಲಿ ಗೂಗಲ್ ಎರಡು ರೀತಿಯ ಎಚ್ಚರಿಕೆಗಳನ್ನು ನೀಡುತ್ತದೆ: ಜಾಗರೂಕರಾಗಿರಿ ಮತ್ತು ಕ್ರಮ ತೆಗೆದುಕೊಳ್ಳಿ (Be Aware and Take Action).

4.5 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಭೂಕಂಪದ ಸಮಯದಲ್ಲಿ ಎಂಎಂಐ 3 ಮತ್ತು 4 ಕಂಪನದ ಸಮಯದಲ್ಲಿ ಬಳಕೆದಾರರಿಗೆ “ಜಾಗರೂಕರಾಗಿರಿ” (Be Aware) ಎಚ್ಚರಿಕೆಗಳನ್ನು ಕಳುಹಿಸಲಾಗುತ್ತದೆ. ಇದು ಪರದೆಯ ಮೇಲೆ ಅಲರ್ಟ್​ ಮೆಸೇಜ್ ಅನ್ನು ತೋರಿಸುತ್ತದೆ. ಆದರೆ ನಿಮ್ಮ ಫೋನ್ ಡು ನಾಟ್ ಡಿಸ್ಟರ್ಬ್ ಅಥವಾ ಸೈಲೆಂಟ್ ಮೋಡ್ ನಲ್ಲಿದ್ದರೆ ಯಾವುದೇ ಸೌಂಡ್​ ಅನ್ನು ಪ್ಲೇ ಮಾಡುವುದಿಲ್ಲ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಎಂಎ) ಮತ್ತು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಎಸ್​ಸಿ) ಯೊಂದಿಗೆ ಸಮಾಲೋಚಿಸಿ ಈ ವ್ಯಸ್ಥೆಯನ್ನು ತಯಾರಿಸಲಾಗಿದೆ. ಈ ವ್ಯವಸ್ಥೆಯು ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳಲ್ಲಿ ಅಳವಡಿಸಲಾದ ಸೆನ್ಸರ್​ಗಳನ್ನು ಬಳಸಿಕೊಂಡು ಭೂಕಂಪಗಳನ್ನು ಪತ್ತೆ ಮಾಡುತ್ತದೆ ಮತ್ತು ಎಚ್ಚರಿಕೆ ನೀಡುತ್ತದೆ. ಪ್ರತಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಸಣ್ಣ ಅಕ್ಸೆಲೆರೋಮೀಟರ್ ಗಳನ್ನು ಹೊಂದಿದ್ದು, ಇದು ಮಿನಿ ಭೂಕಂಪ ಮಾಪಕವಾಗಿ ಕಾರ್ಯನಿರ್ವಹಿಸುತ್ತದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್​ಡಿಎಂಎ) ಮತ್ತು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಎಸ್​ಸಿ) ಯೊಂದಿಗೆ ಸಮಾಲೋಚಿಸಿ ಈ ವ್ಯಸ್ಥೆಯನ್ನು ತಯಾರಿಸಲಾಗಿದೆ. ಈ ವ್ಯವಸ್ಥೆಯು ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳಲ್ಲಿ ಅಳವಡಿಸಲಾದ ಸೆನ್ಸರ್​ಗಳನ್ನು ಬಳಸಿಕೊಂಡು ಭೂಕಂಪಗಳನ್ನು ಪತ್ತೆ ಮಾಡುತ್ತದೆ ಮತ್ತು ಎಚ್ಚರಿಕೆ ನೀಡುತ್ತದೆ. ಪ್ರತಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಸಣ್ಣ ಅಕ್ಸೆಲೆರೋಮೀಟರ್ ಗಳನ್ನು ಹೊಂದಿದ್ದು, ಇದು ಮಿನಿ ಭೂಕಂಪ ಮಾಪಕವಾಗಿ ಕಾರ್ಯನಿರ್ವಹಿಸುತ್ತದೆ.

“ಅನೇಕ ಫೋನ್​ಗಳು ಒಂದೇ ಸಮಯದಲ್ಲಿ ಭೂಕಂಪದ ಕಂಪನವನ್ನು ಕಂಡು ಹಿಡಿದರೆ ಅಂಥ ಸಮಯದಲ್ಲಿ ಭೂಕಂಪ ಸಂಭವಿಸಬಹುದು ಎಂದು ಅಂದಾಜು ಮಾಡಲು ನಮ್ಮ ಸರ್ವರ್ ಈ ಮಾಹಿತಿಯನ್ನು ಬಳಸಬಹುದು. ಜೊತೆಗೆ ಘಟನೆಯ ಗುಣಲಕ್ಷಣಗಳು – ಅದರ ಕೇಂದ್ರಬಿಂದು ಮತ್ತು ಪ್ರಮಾಣ ಮುಂತಾದುವುಗಳನ್ನು ವ್ಯವಸ್ಥೆ ಕಂಡು ಹಿಡಿಯುತ್ತದೆ. ನಂತರ ನಮ್ಮ ಸರ್ವರ್ ಹತ್ತಿರದ ಫೋನ್​ಗಳಿಗೆ ಎಚ್ಚರಿಕೆಗಳನ್ನು ಕಳುಹಿಸಬಹುದು” ಎಂದು ಗೂಗಲ್​ನ ಆಂಡ್ರಾಯ್ಡ್ ಸುರಕ್ಷತೆ ಉತ್ಪನ್ನ ವಿಭಾಗದ ವ್ಯವಸ್ಥಾಪಕ ಮೀಕಾ ಬರ್ಮನ್ ಬ್ಲಾಗ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

4.5 ತೀವ್ರತೆಯ ಭೂಕಂಪದ ಸಮಯದಲ್ಲಿ ಎಂಎಂಐ 5+ ಕಂಪನವನ್ನು ಅನುಭವಿಸುವ ಬಳಕೆದಾರರಿಗೆ ಅಲರ್ಟ್​ ಎಚ್ಚರಿಕೆಗಳನ್ನು ಕಳುಹಿಸಲಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಪೋನ್ ಡು ನಾಟ್​​ ಡಿಸ್ಟರ್ಬ್ ಅಥವಾ ಸೈಲೆಂಟ್​ ಮೋಡ್​ನಲ್ಲಿದ್ದರೂ ಅದನ್ನು ಮೀರಿ ದೊಡ್ಡ ಮಟ್ಟದ ಸೌಂಡ್​ ಅನ್ನು ಪ್ಲೇ ಮಾಡುತ್ತದೆ.