ಇ- ಪೋರ್ಟ್​ನಲ್ಲಿ ಸಾಧಕರ ನಾಮನಿರ್ದೇಶನಕ್ಕೆ ಅವಕಾಶ : 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಧಾನ ಮಾಡಲಾಗುವ 2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಾಗಿ ಇಂದಿನಿಂದ (ಅಕ್ಟೋಬರ್ 1) ಅರ್ಜಿ ಸಲ್ಲಿಸಬಹುದಾಗಿದೆ.ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಾಮನಿರ್ದೇಶನ ಮಾಡಬಹುದಾಗಿದ್ದು, ನಾಮನಿರ್ದೇಶನದ ಅವಧಿ ಅ.1 ರಿಂದ ಅ. 15ರ ವರೆಗೆ ಇರಲಿದೆ2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾಧಕರ ನಾಮನಿರ್ದೇಶನಕ್ಕೆ ಇಂದಿನಿಂದ ಅ.15ರ ವರೆಗೆ ಅವಕಾಶ ನೀಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ಹೊರಡಿಸಿದೆ. ಆಯ್ಕೆ ಸಮಿತಿ ರಚನೆ: 2023ನೇ ಸಾಲಿನ […]

ಗ್ರಾಹಕರು ಹೈರಾಣು : ಸಿಮ್ ಪೋರ್ಟೆಬಿಲಿಟಿಗೆ ಕಂಪನಿಗಳ ಕಿರಿಕಿರಿ

ನವದೆಹಲಿ : ಕಳೆದ 24 ತಿಂಗಳ ಅವಧಿಯಲ್ಲಿ ಸಿಮ್ ಪೋರ್ಟ್ ಮಾಡಿಕೊಂಡ ಪ್ರತಿ ನಾಲ್ವರ ಪೈಕಿ ಒಬ್ಬರು ಪೋರ್ಟ್ ಮಾಡಿಕೊಳ್ಳಲು ತೀರಾ ಕಷ್ಟಪಟ್ಟಿದ್ದಾರೆ ಎಂದು ಶುಕ್ರವಾರ ಬಂದ ಹೊಸ ವರದಿಯೊಂದು ಹೇಳಿದೆ. ಸಿಮ್ ಕಾರ್ಡ್ ಪೋರ್ಟ್ ಮಾಡುವಾಗ ಟೆಲಿಕಾಂ ಕಂಪನಿಗಳು ಅನಗತ್ಯವಾಗಿ ನಿಧಾನ ಮಾಡುತ್ತಿವೆ ಎಂದು ಹಲವಾರು ಗ್ರಾಹಕರು ದೂರುತ್ತಿದ್ದಾರೆಕೇವಲ ಶೇ 47 ರಷ್ಟು ಗ್ರಾಹಕರು ಮಾತ್ರ ತಮ್ಮ ಪೋರ್ಟಿಂಗ್ ಸುಲಭವಾಗಿ ಆಯಿತು ಎಂದು ಹೇಳಿಕೊಂಡಿದ್ದಾರೆ.ಒಂದು ಟೆಲಿಕಾಂ ಕಂಪನಿಯ ಸಿಮ್ ಹೊಂದಿರುವವರು ಇನ್ನೊಂದು ಟೆಲಿಕಾಂ ಕಂಪನಿಯ ಸೇವೆಗೆ […]

ಗೂಗಲ್ : ಆಂಡ್ರಾಯ್ಡ್​ ಬಳಕೆದಾರರಿಗೆ ಭೂಕಂಪ ಮುನ್ನೆಚ್ಚರಿಕೆ​ ವ್ಯವಸ್ಥೆ ಜಾರಿ

ನವದೆಹಲಿ : ಭಾರತದಲ್ಲಿನ ಆಂಡ್ರಾಯ್ಡ್​​ ಬಳಕೆದಾರರಿಗಾಗಿ ಭೂಕಂಪದ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯನ್ನು ಗೂಗಲ್ ಬುಧವಾರದಿಂದ ಜಾರಿಗೊಳಿಸಿದೆ.ಭೂಕಂಪವಾದಾಗ ಜನರು ಸುರಕ್ಷಿತವಾಗಿ ಹಾಗೂ ತ್ವರಿತವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ನೀಡುವಂತೆ ಈ ವ್ಯವಸ್ಥೆಯನ್ನು ರೂಪಿಸಲಾಗಿದ್ದು, ಇದು ಆಂಡ್ರಾಯ್ಡ್​ ಸ್ಮಾರ್ಟ್​ಪೋನ್ ಬಳಕೆದಾರರಿಗೆ ಲಭ್ಯವಿರುತ್ತದೆ. ವಿಶ್ವದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪಗಳ ಪೈಕಿ ಭೂಕಂಪಗಳ ಪಾಲು ದೊಡ್ಡದಾಗಿದೆ. ಭೂಕಂಪ ಸಂಭವಿಸಿದಾಗ ತಕ್ಷಣ ನೀಡುವ ಎಚ್ಚರಿಕೆಯು ಜನ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹಾಗೂ ಇತರರನ್ನು ಕೂಡ ರಕ್ಷಿಸಲು ಬಹಳ ಉಪಯುಕ್ತವಾಗುತ್ತದೆ.ಆಂಡ್ರಾಯ್ಡ್​ ಬಳಕೆದಾರರಿಗೆ ಭೂಕಂಪದ ಮುನ್ನೆಚ್ಚರಿಕೆ […]

55 ಸಾವಿರ ಕೋಟಿ ರೂ. ಜಿಎಸ್​ಟಿ ಬಾಕಿ ನೋಟಿಸ್​ : ಡ್ರೀಮ್​11 ಸೇರಿ ಆನ್ಲೈನ್​ ಗೇಮಿಂಗ್​ ಕಂಪನಿಗಳು

ನವದೆಹಲಿ : ಪ್ಲೇ ಗೇಮ್ಸ್ 24×7 ಮತ್ತು ರಮ್ಮಿ ಸರ್ಕಲ್ ಮತ್ತು ಮೈ 11 ಸರ್ಕಲ್ ಸೇರಿದಂತೆ ಅದರ ಸಂಬಂಧಿತ ಕಂಪನಿಗಳಿಗೆ 20,000 ಕೋಟಿ ರೂ.ಗಳ ಜಿಎಸ್​ಟಿ ಬಾಕಿ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆಸುಮಾರು 55,000 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ವಂಚಿಸಿದ ಆರೋಪದ ಮೇಲೆ ಆನ್ಲೈನ್ ರಿಯಲ್ ಮನಿ ಗೇಮಿಂಗ್ (ಆರ್​ಎಂಜಿ) ಸಂಸ್ಥೆಗಳಿಗೆ ಜಿಎಸ್​ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಸುಮಾರು 12 ಪ್ರಿ-ಶೋಕಾಸ್ ನೋಟಿಸ್​​ಗಳನ್ನು ನೀಡಿದೆ ಎಂದು ವರದಿಯಾಗಿದೆ.ಒಟ್ಟಾರೆ 55 ಸಾವಿರ […]

2024ಕ್ಕೆ ಜಿಮೇಲ್​​ನಲ್ಲಿನ ಬೇಸಿಕ್ HTML ಆವೃತ್ತಿ ಸ್ಥಗಿತ : ಗೂಗಲ್ ಘೋಷಣೆ

ಸ್ಯಾನ್ ಫ್ರಾನ್ಸಿಸ್ಕೋ : ಗೂಗಲ್ ತನ್ನ ಜಿಮೇಲ್ ಸೇವೆಯ ಬೇಸಿಕ್ ಎಚ್​ಟಿಎಂಎಲ್ ಆವೃತ್ತಿಯನ್ನು (Basic HTML version) 2024 ರ ಜನವರಿಯಲ್ಲಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. “ನೀವು ಜನವರಿ 2024 ರವರೆಗೆ ನಿಮ್ಮ ಬ್ರೌಸರ್​ನಲ್ಲಿ ಬೇಸಿಕ್ ಎಚ್​ಟಿಎಂಎಲ್​ ಆವೃತ್ತಿಯನ್ನು ನೋಡಬಹುದು. ಈ ದಿನಾಂಕದ ನಂತರ ಜಿಮೇಲ್ ಸ್ವಯಂಚಾಲಿತವಾಗಿ ಸ್ಟ್ಯಾಂಡರ್ಡ್ ಆವೃತ್ತಿಗೆ ಬದಲಾಗುತ್ತದೆ” ಎಂದು ಗೂಗಲ್ ಹೇಳಿದೆ. ಗೂಗಲ್ ತನ್ನ ಜಿಮೇಲ್​ನಲ್ಲಿನ ಬೇಸಿಕ್ ಎಚ್​ಟಿಎಂಎಲ್​ ಆವೃತ್ತಿಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಜನವರಿ 2024 ರವರೆಗೆ ನೀವು ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬೆಂಬಲಿಸದ ಬ್ರೌಸರ್ […]