ಸಂಚಾರ ನಿಯಮ ಉಲ್ಲಂಘನೆ, ಇಂದಿನಿಂದ ಶೇ.50 ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಸಬಹುದು,ಆ್ಯಪ್‌ ಮೂಲಕವೂ ದಂಡ ಕಟ್ಟಲು ಅವಕಾಶ!

ಬೆಂಗಳೂರು : ರಾಜ್ಯಾದ್ಯಂತ ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ರಾಜ್ಯ ಸರ್ಕಾರ ಶೇ.50 ರಷ್ಟು ರಿಯಾಯಿತಿ ಘೋಷಿಸಿದೆ. ಜೂನ್ 21ರಿಂದ ಜುಲೈ 10ರವರೆಗೆ ಮಾತ್ರ ಈ ಸೌಲಭ್ಯ ಲಭ್ಯವಿದ್ದು, ವಾಹನ ಸವಾರರು ಬಾಕಿ ದಂಡವನ್ನು ಕಡಿಮೆ ಮೊತ್ತದಲ್ಲಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಕಳೆದ ವರ್ಷ ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ಇದೇ ರೀತಿಯ ಶೇ.50 ರಿಯಾಯಿತಿ ನೀಡಲಾಗಿದ್ದು, ಆ ಅವಧಿಯಲ್ಲಿ 10.02 ಲಕ್ಷ ಪ್ರಕರಣಗಳಿಗೆ ಸಂಬಂಧಿಸಿದಂತೆ ₹28.35 ಕೋಟಿ ದಂಡ ಸಂಗ್ರಹವಾಗಿತ್ತು. […]

NEET ಮರುಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳು ತಿಳಿದುಕೊಳ್ಳಲೇಬೇಕಾದ ಮುಖ್ಯ ಸಂಗತಿಗಳಿವು, NTA ಮಹತ್ವದ ಎಚ್ಚರಿಕೆ

ನವದೆಹಲಿ: ನೀಟ್ ಯುಜಿ-2026 (NEET UG 2026) ಮರುಪರೀಕ್ಷೆಯ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಭ್ಯರ್ಥಿಗಳಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಜೂನ್ 21, 2026ರಂದು ನಡೆಯಲಿರುವ ಮರುಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರ (Admit Card) ಡೌನ್‌ಲೋಡ್ ಮಾಡಿಕೊಳ್ಳುವ ಕುರಿತು ಅಭ್ಯರ್ಥಿಗಳಿಗೆ ಎನ್‌ಟಿಎ ಎಸ್‌ಎಂಎಸ್, ಇ-ಮೇಲ್ ಹಾಗೂ ವಾಟ್ಸಾಪ್ ಮೂಲಕ ಜ್ಞಾಪನೆಗಳನ್ನು ಕಳುಹಿಸಲು ಆರಂಭಿಸಿದೆ. ಇದರ ನಡುವೆಯೇ ನಕಲಿ ಸಂದೇಶಗಳು, ಸೈಬರ್ ವಂಚನೆ ಹಾಗೂ ಹಣ ಕೇಳುವ ಮೋಸಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ […]

ಭಾರತಕ್ಕೂ ಎಂಟ್ರಿ ಕೊಟ್ಟಿತು ವಾಟ್ಸಪ್, ಇನ್ಸ್ಟಾಗ್ರಾಮ್, ಫೇಸ್ಬುಕ್‌ ‘ಪ್ಲಸ್’: ಕಾಸು ಕೊಟ್ರೆ ಮಾತ್ರ ಸಿಗುತ್ತೆ ಈ ವಿಶೇಷ ಸೇವೆ

ಮೆಟಾ ಸಂಸ್ಥೆಯು ತನ್ನ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್‌ಗಾಗಿ ಹೊಸ ‘ಪ್ಲಸ್’ (Plus) ಪ್ರೀಮಿಯಂ ಚಂದಾದಾರಿಕೆ ಯೋಜನೆಗಳನ್ನು ಭಾರತ ಸೇರಿದಂತೆ ಜಾಗತಿಕವಾಗಿ ಪರಿಚಯಿಸಿದೆ. ಬಳಕೆದಾರರಿಗೆ ಹೆಚ್ಚಿನ ಪ್ರೈವೆಸಿ, ಕಸ್ಟಮೈಸೇಶನ್ ಹಾಗೂ ವಿಶೇಷ ಫೀಚರ್‌ಗಳನ್ನು ಒದಗಿಸುವ ಉದ್ದೇಶದಿಂದ ಈ ಸೇವೆಗಳನ್ನು ಆರಂಭಿಸಲಾಗಿದೆ. ಹೊಸ ಫೀಚರ್‌ಗಳನ್ನು ಪಡೆಯಲು ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಮೂಲಕ ತಮ್ಮ ಆಪ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗಿದೆ. ಪ್ಲಾನ್‌ಗಳ ಬೆಲೆ ವಾಟ್ಸಪ್ ಪ್ಲಸ್‌ನಲ್ಲಿ ಏನಿದೆ?20 ಚಾಟ್‌ಗಳವರೆಗೆ ಪಿನ್ […]

ಎಟಿಎಂ ನಲ್ಲಿ ಕ್ಯಾಶ್ ಡೆಪಾಸಿಟ್ ಮಾಡುವಾಗ ಕ್ಯಾಶ್ ಕೊಡಿ ಯುಪಿಐ ಮಾಡ್ತೇನೆ ಎಂದು ಯಾಮಾರಿಸ್ತಾರೆ! : ಶುರುವಾಗಿದೆ ಹೊಸ ಹೈಟೆಕ್ ವಂಚನೆ ಜಾಲ, ಎಚ್ಚರದಿಂದಿರಿ!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೀಗ ಹೊಸ ಮಾದರಿಯ ಹೈಟೆಕ್ ವಂಚನೆ ಜಾಲವೊಂದು ಸಕ್ರಿಯವಾಗಿದ್ದು, ಎಟಿಎಂ ಕ್ಯಾಶ್ ಡೆಪಾಸಿಟ್ ಮಷೀನ್‌ಗಳ ಬಳಿ ಹಣ ಜಮೆ ಮಾಡಲು ಬರುವ ಅಮಾಯಕ ಜನರನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ದೋಚುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.ಮೈಸೂರು ಮಾತ್ರವಲ್ಲ, ರಾಜ್ಯದ ಎಲ್ಲಾ ಕಡೆಗಳಲ್ಲೂ ಈ ರೀತಿಯ ಮೋಸದ ಜಾಲವೊಂದು ಸಕ್ರೀಯವಾಗಿದೆಯಂತೆ. ಈ ಸುದ್ದಿ ಓದಿ, ಎಟಿಎಂ ನಲ್ಲಿ ಕ್ಯಾಶ್ ಡೆಪಾಸಿಟ್ ಮಾಡಲು ಹೋಗುವಾಗ ಜಾಗರೂಕರಾಗಿರಿ. ಏನಿದು ಹೊಸ ವಂಚನೆ ತಂತ್ರ? ವಂಚಕರು ಎಟಿಎಂ […]

ವರ್ಷಕ್ಕೆ ಇಷ್ಟು ಸಿಲಿಂಡರ್ ಮಾತ್ರ ಸಿಗೋದು, ಇನ್ನು ಪ್ಲಾನ್ ಮಾಡ್ಕೊಂಡು ಬುಕ್ ಮಾಡಿ !

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಹಾಗೂ ಜಾಗತಿಕ ಉದ್ವಿಗ್ನತೆಗಳ ಹಿನ್ನೆಲೆ ಎಲ್ಪಿಜಿ ಗ್ಯಾಸ್ ಪೂರೈಕೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ದೇಶದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ತೈಲ ಮಾರುಕಟ್ಟೆ ಕಂಪನಿಗಳು ಸ್ಪಷ್ಟಪಡಿಸಿವೆ. ಈ ನಡುವೆ ಗೃಹಬಳಕೆಯ ಎಲ್ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ವರ್ಷಕ್ಕೆ ಎಷ್ಟು ಸಿಲಿಂಡರ್ ಖರೀದಿಸಬಹುದು ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ವರ್ಷಕ್ಕೆ 15 ಸಿಲಿಂಡರ್ ಮಿತಿ ಪ್ರಸ್ತುತ ನಿಯಮಗಳ ಪ್ರಕಾರ, 14.2 ಕೆಜಿ ಗೃಹಬಳಕೆಯ […]