Menu
  • ನ್ಯೂಸ್ ರೂಂ
    • ಕರಾವಳಿ ಸಮಾಚಾರ
    • ನಮ್ಮ ಊರು-ನಮ್ಮ ಬೇರು
    • ಸವಿಯೋಣ ಬಾರಾ
    • zoom ಇನ್
    • ರಾಜ್ಯ
    • ಆಪ್ತ ಸಂಗತಿ
    • ದೇಶ
    • ಸ್ಪೋರ್ಟ್ಸ್ Beat
  • ಬಿಂದಾಸ್ ರಂಜನೆ
    • ಮೂವಿ ಮಸಾಲ
    • ಕಂಡಿದ್ದು ಬರೀರಿ
  • ಸ್ಪೆಷಲ್ ಕಾಫಿ
    • ತಂತ್ರಜ್ಞಾನ
  • ಮೈ ಮನಸ್ಸು
    • ಹಸಿರೇ ಉಸಿರು
    • ಆರೋಗ್ಯ ಭಾಗ್ಯ
    • ಮನೆ-ಮನ
    • ಹುಡುಗಿಯೊಬ್ಬಳ ಪಿಸುಮಾತು
  • ಸಿಟಿ ಸ್ಪೆಷಲ್
    • ಧಾರ್ಮಿಕ
    • ವಿಶೇಷ
  • ಕರಾವಳಿ ಸಮಾಚಾರ
  • ರಾಜ್ಯ ಸುದ್ದಿ
  • ನಮ್ಮ ಊರು-ನಮ್ಮ ಬೇರು
  • ದೇಶ
  • ಆಪ್ತ ಸಂಗತಿ
  • zoom ಇನ್
  • ಕಂಡಿದ್ದು ಬರೀರಿ
  • ಮೂವಿ ಮಸಾಲ
  • ಆರೋಗ್ಯ ಭಾಗ್ಯ
  • ಮನೆ-ಮನ-ನೆಮ್ಮದಿ
  • ಸ್ಪೋರ್ಟ್ಸ್ Beat
  • ಸವಿಯೋಣ ಬಾರಾ
  • ಹಸಿರೇ ಉಸಿರು
  • ಧಾರ್ಮಿಕ
  • ವಿಶೇಷ
  • ಹುಡುಗಿಯೊಬ್ಬಳ ಪಿಸುಮಾತು
  • ತಂತ್ರಜ್ಞಾನ
Menu
  • ಕರಾವಳಿ ಸಮಾಚಾರ
  • ರಾಜ್ಯ ಸುದ್ದಿ
  • ನಮ್ಮ ಊರು-ನಮ್ಮ ಬೇರು
  • ದೇಶ
  • ಆಪ್ತ ಸಂಗತಿ
  • zoom ಇನ್
  • ಕಂಡಿದ್ದು ಬರೀರಿ
  • ಮೂವಿ ಮಸಾಲ
  • ಆರೋಗ್ಯ ಭಾಗ್ಯ
  • ಮನೆ-ಮನ-ನೆಮ್ಮದಿ
  • ಸ್ಪೋರ್ಟ್ಸ್ Beat
  • ಸವಿಯೋಣ ಬಾರಾ
  • ಹಸಿರೇ ಉಸಿರು
  • ಧಾರ್ಮಿಕ
  • ವಿಶೇಷ
  • ಹುಡುಗಿಯೊಬ್ಬಳ ಪಿಸುಮಾತು
  • ತಂತ್ರಜ್ಞಾನ
  • ನ್ಯೂಸ್ ರೂಂ
    • ಕರಾವಳಿ ಸಮಾಚಾರ
    • ನಮ್ಮ ಊರು-ನಮ್ಮ ಬೇರು
    • ಸವಿಯೋಣ ಬಾರಾ
    • zoom ಇನ್
    • ರಾಜ್ಯ
    • ಆಪ್ತ ಸಂಗತಿ
    • ದೇಶ
    • ಸ್ಪೋರ್ಟ್ಸ್ Beat
  • ಬಿಂದಾಸ್ ರಂಜನೆ
    • ಮೂವಿ ಮಸಾಲ
    • ಕಂಡಿದ್ದು ಬರೀರಿ
  • ಸ್ಪೆಷಲ್ ಕಾಫಿ
    • ತಂತ್ರಜ್ಞಾನ
  • ಮೈ ಮನಸ್ಸು
    • ಹಸಿರೇ ಉಸಿರು
    • ಆರೋಗ್ಯ ಭಾಗ್ಯ
    • ಮನೆ-ಮನ
    • ಹುಡುಗಿಯೊಬ್ಬಳ ಪಿಸುಮಾತು
  • ಸಿಟಿ ಸ್ಪೆಷಲ್
    • ಧಾರ್ಮಿಕ
    • ವಿಶೇಷ
Menu
  • ನ್ಯೂಸ್ ರೂಂ
    • ಕರಾವಳಿ ಸಮಾಚಾರ
    • ನಮ್ಮ ಊರು-ನಮ್ಮ ಬೇರು
    • ಸವಿಯೋಣ ಬಾರಾ
    • zoom ಇನ್
    • ರಾಜ್ಯ
    • ಆಪ್ತ ಸಂಗತಿ
    • ದೇಶ
    • ಸ್ಪೋರ್ಟ್ಸ್ Beat
  • ಬಿಂದಾಸ್ ರಂಜನೆ
    • ಮೂವಿ ಮಸಾಲ
    • ಕಂಡಿದ್ದು ಬರೀರಿ
  • ಸ್ಪೆಷಲ್ ಕಾಫಿ
    • ತಂತ್ರಜ್ಞಾನ
  • ಮೈ ಮನಸ್ಸು
    • ಹಸಿರೇ ಉಸಿರು
    • ಆರೋಗ್ಯ ಭಾಗ್ಯ
    • ಮನೆ-ಮನ
    • ಹುಡುಗಿಯೊಬ್ಬಳ ಪಿಸುಮಾತು
  • ಸಿಟಿ ಸ್ಪೆಷಲ್
    • ಧಾರ್ಮಿಕ
    • ವಿಶೇಷ
Home ತಂತ್ರಜ್ಞಾನ ಇದು ವಾಟ್ಸ್​ಆಯಪ್​ನ ಹೊಸ ಪಾಸ್​ ಕೀ ವೈಶಿಷ್ಟ್ಯ : ಪಾಸ್​ವರ್ಡ್​ ರಹಿತ ಲಾಗಿನ್​!
  • ತಂತ್ರಜ್ಞಾನ

ಇದು ವಾಟ್ಸ್​ಆಯಪ್​ನ ಹೊಸ ಪಾಸ್​ ಕೀ ವೈಶಿಷ್ಟ್ಯ : ಪಾಸ್​ವರ್ಡ್​ ರಹಿತ ಲಾಗಿನ್​!

October 17, 2023
WhatsApp
Facebook
Twitter
Telegram

    ನವದೆಹಲಿ: ತನ್ನ ಪ್ಲಾಟ್​ಫಾರ್ಮ್​ನಲ್ಲಿ ಪಾಸ್​ವರ್ಡ್ ಬದಲಾಗಿ ಪಾಸ್​ ಕೀ ವೈಶಿಷ್ಟ್ಯವನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ವಾಟ್ಸ್​ಆಯಪ್ ಘೋಷಿಸಿದೆ.ವಾಟ್ಸ್​ಆಪ್ ಇನ್ನು ಮುಂದೆ ಆಂಡ್ರಾಯ್ಡ್​ ಬಳಕೆದಾರರಿಗಾಗಿ ಪಾಸ್​ವರ್ಡ್ ಬದಲು ಪಾಸ್ ಕೀ ವೈಶಿಷ್ಟ್ಯ ಹೊರತರಲಿದೆ.

    ಪಾಸ್​ ಕೀ ವೈಶಿಷ್ಟ್ಯವನ್ನು ಈ ಹಿಂದೆಯೇ ವಾಟ್ಸ್​ಆಯಪ್ ತನ್ನ ಬೀಟಾ ಚಾನೆಲ್​ನಲ್ಲಿ ಪರೀಕ್ಷಿಸಿದೆ. ಹೀಗಾಗಿ ಇನ್ನು ಮುಂದೆ ಎಲ್ಲ ಬಳಕೆದಾರರಿಗೂ ಪರಿಚಯಿಸಲು ವಾಟ್ಸ್​ಆಯಪ್ ಮುಂದಾಗಿದೆ. ಆದರೆ ಐಫೋನ್ ಗಳಲ್ಲಿ ಪಾಸ್​ ಕೀ ವೈಶಿಷ್ಟ್ಯ ಯಾವಾಗ ಸಿಗಲಿದೆ ಎಂಬ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ. ಆಂಡ್ರಾಯ್ಡ್ ಸಾಧನಗಳಲ್ಲಿ ಪಾಸ್​ ಕೀ ವೈಶಿಷ್ಟ್ಯವು ಮುಂದಿನ ಕೆಲ ವಾರಗಳಲ್ಲಿ ಮತ್ತು ತಿಂಗಳುಗಳಲ್ಲಿ ಹೊರಬರಲಿದೆ ಎಂದು ಕಂಪನಿ ತಿಳಿಸಿದೆ. ಪಾಸ್ ಕೀಗಳು ಸಾಂಪ್ರದಾಯಿಕ ಪಾಸ್ ವರ್ಡ್ ಗಳನ್ನು ನಿಮ್ಮ ಸಾಧನದ ಸ್ವಂತ ದೃಢೀಕರಣ ವಿಧಾನಗಳೊಂದಿಗೆ ಬದಲಾಯಿಸಲಿವೆ. ಅಂದರೆ ಇನ್ನುಮುಂದೆ ಪಾಸ್​ವರ್ಡ್​ ಲಾಗಿನ್ ಕಣ್ಮರೆಯಾಗಲಿದೆ.ಈ ಬದಲಾವಣೆಯಿಂದ ಬಳಕೆದಾರರು ಕಿರಿಕಿರಿ ಉಂಟು ಮಾಡುವ ಹಾಗೂ ಅಸುರಕ್ಷಿತವಾದ ಟು – ಸ್ಟೆಪ್ ಎಸ್​ಎಂಎಸ್​ ದೃಢೀಕರಣದ ಪ್ರಕ್ರಿಯೆಯಿಂದ ಪಾರಾಗಲಿದ್ದಾರೆ. “ಆಂಡ್ರಾಯ್ಡ್ ಬಳಕೆದಾರರು ಸುಲಭವಾಗಿ ಮತ್ತು ಸುರಕ್ಷಿತವಾಗಿ ಪಾಸ್ ಕೀಗಳೊಂದಿಗೆ ಲಾಗ್ ಇನ್ ಮಾಡಬಹುದು. ನಿಮ್ಮ ಮುಖ, ಬೆರಳಚ್ಚು ಅಥವಾ ಪಿನ್ ಮಾತ್ರ ನಿಮ್ಮ ವಾಟ್ಸ್​​ಆಯಪ್ ಖಾತೆಯನ್ನು ಅನ್ಲಾಕ್ ಮಾಡುತ್ತದೆ” ಎಂದು ಕಂಪನಿ ಸೋಮವಾರ ತಡರಾತ್ರಿ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದೆ.

    “ಪಾಸ್​ ಕೀ ಗಳ ಅಳವಡಿಕೆ ಒಂದು ದೊಡ್ಡ ಹೆಜ್ಜೆಯಾಗಿದ್ದರೂ, ಹೊಸ ತಂತ್ರಜ್ಞಾನಗಳನ್ನು ಜಾರಿಗೊಳಿಸುವುದು ಸಮಯ ತೆಗೆದುಕೊಳ್ಳುತ್ತದೆ ಎಂಬುದು ನಮಗೆ ತಿಳಿದಿದೆ. ಹೀಗಾಗಿ ಪಾಸ್​ವರ್ಡ್​ಗಳು ಇನ್ನೂ ಕೆಲ ಸಮಯದವರೆಗೆ ಬಳಕೆಯಲ್ಲಿರುತ್ತವೆ” ಎಂದು ಗೂಗಲ್ ಪ್ರಕಟಣೆಯಲ್ಲಿ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಗೂಗಲ್ ಬಳಕೆದಾರರ ಖಾತೆಗಳಿಗೆ ಸೈನ್ ಇನ್ ಮಾಡಲು ಪಾಸ್​ವರ್ಡ್ ಬದಲಿಗೆ ಪಾಸ್​ ಕೀ ಬಳಸುವ ವೈಶಿಷ್ಟ್ಯವನ್ನು ಆರಂಭಿಸಿತ್ತು.ಆಯಪಲ್ ಮತ್ತು ಗೂಗಲ್ ಸಾಧನಗಳು ಈಗಾಗಲೇ ಪಾಸ್ ಕೀಗಳನ್ನು ಸಪೋರ್ಟ್ ಮಾಡುತ್ತಿವೆ. ಪಾಸ್ ಕೀಗಳನ್ನು ಬಳಸಲಾರಂಭಿಸುವಂತೆ ಮತ್ತು ಅದಕ್ಕಾಗಿ ತಮ್ಮ ಖಾತೆಗಳಲ್ಲಿ ಪಾಸ್ ವರ್ಡ್ ಗಳನ್ನು ತ್ಯಜಿಸುವಂತೆ ಗೂಗಲ್ ಕಳೆದ ವಾರ ಬಳಕೆದಾರರಿಗೆ ಮನವಿ ಮಾಡಿದೆ. ಪಾಸ್ ಕೀಗಳನ್ನು ಬಳಸುವ ಸಮಯದಲ್ಲಿ ನಿಮ್ಮ ಸಾಧನವನ್ನು ಅನ್ ಲಾಕ್ ಮಾಡಲು ನೀವು ಫಿಂಗರ್ ಪ್ರಿಂಟ್, ಫೇಸ್ ಸ್ಕ್ಯಾನ್ ಅಥವಾ ಪಿನ್ ಅನ್ನು ಬಳಸಬೇಕಾಗುತ್ತದೆ ಮತ್ತು ಅವು ಪಾಸ್ ವರ್ಡ್ ಗಳಿಗಿಂತ ಶೇಕಡಾ 40 ರಷ್ಟು ವೇಗವಾಗಿರುತ್ತವೆ ಮತ್ತು ಅವುಗಳನ್ನು ಹೆಚ್ಚು ಸುರಕ್ಷಿತವಾಗಿಸುವ ಒಂದು ರೀತಿಯ ಕ್ರಿಪ್ಟೋಗ್ರಫಿಯನ್ನು ಅವಲಂಬಿಸಿರುತ್ತವೆ.

    • TAGS
    • #newdelhi #whatsapp #features #login
    WhatsApp
    Facebook
    Twitter
    Telegram
      Previous articleಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್​ ನೇಮಕಾತಿ
      Next articleಸೋಷಿಯಲ್​ ಮೀಡಿಯಾದ ವಿಡಿಯೋ ನೋಡಿ ಚಿಕ್ಕೋಡಿಯಲ್ಲಿ ಬಂಗಾರದಂಥ ಬೆಳೆ ಬೆಳೆದ ದಂಪತಿ
      Udupi Xpress

      RELATED ARTICLESMORE FROM AUTHOR

      ರಸ್ತೆಗಿಳಿದ ಸೈಬರ್ ಟ್ರಕ್ ಗಳು: ಗ್ರಾಹಕರಿಗೆ ಟ್ರಕ್ ವಿತರಿಸಿದ ಟೆಸ್ಲಾ ಸಿಇಒ ಏಲಾನ್ ಮಸ್ಕ್

      ಸಂಶೋಧನಾ ವರದಿ : ಗ್ಯಾಸ್ – ಡೀಸೆಲ್​ಗಿಂತ ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚ ಅಧಿಕ

      16 ಮಿಲಿಯನ್ ಕಿಲೋಮೀಟರ್ ದೂರದ ಅಂತರಿಕ್ಷದಿಂದ ಭೂಮಿಗೆ ಬಂತು ಲೇಸರ್ ಸಂದೇಶ!! ಆಳ ಬಾಹ್ಯಕಾಶದಿಂದ ಬಂದ ‘ಪ್ರಥಮ ಬೆಳಕು’!

      ಉಡುಪಿXPRESS ವಾಟ್ಸಾಪ್ ಗುಂಪಿಗೆ ಸೇರಿ

      About us

      ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.

      • 9591650840
      • contact@udupixpress.com
      • First floor, Bhakta towers, kalsanka , Udupi.

      Udupixpress © Copyright 2020. All rights reserved. 

      Designed By Fluxemy

      Privacy Policy

      error: Content is protected !!