ಇಂದು 330 ಪಾಯಿಂಟ್​ ಏರಿಕೆಯಾದ ಸೆನ್ಸೆಕ್ಸ್​; 19,100 ದಾಟಿದ ನಿಫ್ಟಿ : ಷೇರು ಮಾರುಕಟ್ಟೆ

ಬೆಂಗಳೂರು: ಸೋಮವಾರ ವಹಿವಾಟಿನ ಅಂತ್ಯಕ್ಕೆ ಎಸ್ &ಪಿ ಬಿಎಸ್‌ಇ ಸೆನ್ಸೆಕ್ಸ್ 330 ಪಾಯಿಂಟ್ಸ್ ಅಥವಾ ಶೇಕಡಾ 0.52ರಷ್ಟು ಏರಿಕೆ ಕಂಡು 64,113ಕ್ಕೆ ತಲುಪಿದೆ. ಮತ್ತೊಂದೆಡೆ, ನಿಫ್ಟಿ50 94 ಪಾಯಿಂಟ್ ಅಥವಾ ಶೇಕಡಾ 0.49ರಷ್ಟು ಏರಿಕೆ ಕಂಡು 19,141ಕ್ಕೆ ಕೊನೆಗೊಂಡಿದೆ. ಜಾಗತಿಕ ಮಾರುಕಟ್ಟೆಗಳಲ್ಲಿನ ಮಂದಗತಿಯ ವಹಿವಾಟಿನ ಕಾರಣದಿಂದ ಸೋಮವಾರ ಇಳಿಕೆಯೊಂದಿಗೆ ವಹಿವಾಟು ಆರಂಭಿಸಿದ ಭಾರತೀಯ ಷೇರು ಸೂಚ್ಯಂಕಗಳು ನಂತರ ರಿಲಯನ್ಸ್ ಇಂಡಸ್ಟ್ರೀಸ್, ಭಾರ್ತಿ ಏರ್ಟೆಲ್, ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಎಲ್ &ಟಿ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಷೇರುಗಳ ಕಾರಣದಿಂದ ಎತ್ತರಕ್ಕೇರಿದವು.ಭಾರತದ ಷೇರು ಮಾರುಕಟ್ಟೆಗಳು ಸೋಮವಾರದ ವಹಿವಾಟಿನಲ್ಲಿ ಏರಿಕೆಯೊಂದಿಗೆ ಕೊನೆಗೊಂಡಿವೆ.

ಯುಪಿಎಲ್, ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಆಕ್ಸಿಸ್ ಬ್ಯಾಂಕ್, ಐಷರ್ ಮೋಟಾರ್ಸ್, ಬ್ರಿಟಾನಿಯಾ ಇಂಡಸ್ಟ್ರೀಸ್, ಎನ್​ಟಿಪಿಸಿ ಮತ್ತು ಬಜಾಜ್ ಆಟೋ ಶೇಕಡಾ 2.7ರಷ್ಟು ಕುಸಿದವು. ಆದಾಗ್ಯೂ, ಬಿಎಸ್‌ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.13 ಮತ್ತು ಶೇಕಡಾ 0.06ರಷ್ಟು ಮಾತ್ರ ಲಾಭ ಗಳಿಸಿದ ನಂತರ ವಿಶಾಲ ಮಾರುಕಟ್ಟೆಗಳಲ್ಲಿ ಚೇತರಿಕೆ ಕಂಡುಬಂದಿದೆ.
ಲಾರ್ಜ್ ಕ್ಯಾಪ್ ಷೇರುಗಳನ್ನು ನೋಡುವುದಾದರೆ- ಬಿಪಿಸಿಎಲ್ ಶೇ 3.6, ಅಲ್ಟ್ರಾಟೆಕ್ ಸಿಮೆಂಟ್ ಶೇ 2 ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇ 1.8ರಷ್ಟು ಏರಿಕೆ ಕಂಡಿವೆ. ಒಎನ್​ಜಿಸಿ, ಸಿಪ್ಲಾ, ಅದಾನಿ ಎಂಟರ್ ಪ್ರೈಸಸ್, ಎಸ್​ಬಿಐ ಲೈಫ್, ಭಾರ್ತಿ ಏರ್ಟೆಲ್, ಗ್ರಾಸಿಮ್, ಇಂಡಸ್‌ಇಂಡ್ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್, ಎಲ್ &ಟಿ, ಕೋಟಕ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಶೇಕಡಾ 1ರಿಂದ 2ರಷ್ಟು ಏರಿಕೆ ಕಂಡಿವೆ.

ರೂಪಾಯಿ ಮೌಲ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿರಂತರವಾಗಿ ರಕ್ಷಿಸುತ್ತಿರುವುದರಿಂದ ಮತ್ತು ಆಮದುದಾರರಿಂದ ತಿಂಗಳಾಂತ್ಯದ ಯುಎಸ್ ಡಾಲರ್ ಬೇಡಿಕೆಯ ಒತ್ತಡವು ಕಡಿಮೆಯಾಗಿದ್ದರಿಂದ ಭಾರತೀಯ ರೂಪಾಯಿ ಸೋಮವಾರ ತನ್ನ ಮೌಲ್ಯದಲ್ಲಿ ವಿಶೇಷ ಬದಲಾವಣೆ ಕಾಣದೆ ಕೊನೆಗೊಂಡಿತು.ಹಿಂದಿನ ಸೆಷನ್ ನಲ್ಲಿ 83.2450ಕ್ಕೆ ಕೊನೆಗೊಂಡಿದ್ದ ರೂಪಾಯಿ ಇಂದಿನ ವಹಿವಾಟಿನಲ್ಲಿ 83.25ಕ್ಕೆ ಕೊನೆಗೊಂಡಿತು. ಸ್ಪಾಟ್ ಸೆಷನ್​ನಲ್ಲಿ ರೂಪಾಯಿ ಕರೆನ್ಸಿ 83.2450ರಿಂದ 83.27 ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಏಷ್ಯಾದ ಕರೆನ್ಸಿಗಳು ಕೊಂಚ ಏರಿಕೆಯಾಗಿದ್ದು, ಡಾಲರ್ ಸೂಚ್ಯಂಕ ಅಲ್ಪ ಕುಸಿದಿದೆ. ವಲಯವಾರು ನೋಡುವುದಾದರೆ- ನಿಫ್ಟಿ ರಿಯಾಲ್ಟಿ ಶೇಕಡಾ 2ರಷ್ಟು ಏರಿಕೆ ಕಂಡರೆ, ನಿಫ್ಟಿ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸೂಚ್ಯಂಕಗಳು ತಲಾ 0.7ರಷ್ಟು ಏರಿಕೆ ಕಂಡಿವೆ. ಇದಕ್ಕೆ ವಿರುದ್ಧವಾಗಿ ನಿಫ್ಟಿ ಆಟೋ ಸೂಚ್ಯಂಕವು ಬುಧವಾರ ಶೇಕಡಾ 0.9ರಷ್ಟು ಕುಸಿದಿದೆ.