AI ಎಂಟ್ರಿ, ಮೈಕ್ರೋಸಾಫ್ಟ್‌ನಲ್ಲಿ ಮತ್ತೆ ಭಾರಿ ಉದ್ಯೋಗ ಕಡಿತ, 4,800 ಸಿಬ್ಬಂದಿಗೆ ಶಾಕ್!

ತಂತ್ರಜ್ಞಾನ ದಿಗ್ಗಜ Microsoft ಮತ್ತೊಮ್ಮೆ ದೊಡ್ಡ ಪ್ರಮಾಣದ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಂಪನಿಯು ಸುಮಾರು 4,800 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಅದರ ಜಾಗತಿಕ ಕಾರ್ಯಪಡೆಯ ಸುಮಾರು 2.1 ಶೇಕಡಾಕ್ಕೆ ಸಮಾನವಾಗಿದೆ. ಈ ಉದ್ಯೋಗ ಕಡಿತದಿಂದ ಕಂಪನಿಯ ವಾಣಿಜ್ಯ ಮಾರಾಟ ವಿಭಾಗ ಹಾಗೂ Xbox ವಿಭಾಗದ ಸಿಬ್ಬಂದಿ ಹೆಚ್ಚು ಪರಿಣಾಮಕ್ಕೊಳಗಾಗಲಿದ್ದಾರೆ. ಇದೇ ವೇಳೆ ಮೈಕ್ರೋಸಾಫ್ಟ್ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಭಾರೀ ಹೂಡಿಕೆ ಮಾಡುತ್ತಿರುವುದು ಗಮನಾರ್ಹವಾಗಿದೆ. ಹೊಸ ಹಣಕಾಸು ವರ್ಷದ ಆರಂಭದೊಂದಿಗೆ ಈ ನಿರ್ಧಾರವನ್ನು ಪ್ರಕಟಿಸಿರುವ ಮೈಕ್ರೋಸಾಫ್ಟ್, […]

ಇನ್‌ಸ್ಟಾಗ್ರಾಂಗೆ ಕೇಂದ್ರ ಸರ್ಕಾರದ ಶಾಕ್ :ಇನ್ಮುಂದೆ ಈ ರೀತಿಯ ರೀಲ್ಸ್ ಹಾಕುವಂತಿಲ್ಲ!

ನವದೆಹಲಿ: ಮಕ್ಕಳ ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯಕ್ಕೆ (CSAM/CSEAM) ಸಂಬಂಧಿಸಿದ ವಿಷಯಗಳು ಮತ್ತು ಅವುಗಳನ್ನು ಉತ್ತೇಜಿಸುವ ಜಾಹೀರಾತುಗಳನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಮೆಟಾ (ಇನ್‌ಸ್ಟಾಗ್ರಾಂ)ಗೆ ನಿರ್ದೇಶನ ನೀಡಿದೆ. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಏಳು ದಿನಗಳೊಳಗೆ ಸ್ಪಷ್ಟೀಕರಣ ನೀಡುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ನೋಟಿಸ್ ಜಾರಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಂನಲ್ಲಿ ಮಕ್ಕಳನ್ನು ಗುರಿಯಾಗಿಸಿಕೊಂಡು ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಷಯಗಳು ಹಾಗೂ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ […]

ಮೂತ್ರಪಿಂಡದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ಮಾಡಬೇಡಿ: ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿದೆ ಮೂತ್ರಪಿಂಡದ ಎಲ್ಲಾ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ

ಉಡುಪಿ: ಮೂತ್ರಪಿಂಡಗಳು (ಕಿಡ್ನಿ) ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು, ರಕ್ತವನ್ನು ಶುದ್ಧೀಕರಿಸಿ ದೇಹದ ತ್ಯಾಜ್ಯವನ್ನು ಹೊರಹಾಕುವ ಮಹತ್ವದ ಕಾರ್ಯ ನಿರ್ವಹಿಸುತ್ತವೆ. ಆದರೆ ಆರಂಭಿಕ ಹಂತದಲ್ಲಿ ಮೂತ್ರಪಿಂಡದ ಸಮಸ್ಯೆಗಳು ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದ್ದರಿಂದ ಕೆಲವು ಎಚ್ಚರಿಕೆ ಸೂಚನೆಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ನಿಮ್ಮ ಎಲ್ಲಾ ಮೂತ್ರಪಿಂಡದ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ಉಡುಪಿಯ ಹೈಟೆಕ್ ಮೆಡಿಕೇರ್ ಆಸ್ಪತ್ರೆಯಲ್ಲಿದ್ದು ಈ ಸಮಸ್ಯೆ ಕಂಡರೆ ತಕ್ಷಣ ಭೇಟಿ ನೀಡಿ ಪರಿಹಾರ […]

ಮನೆಯಲ್ಲಿ ಚಿನ್ನ ಇಟ್ಟಿದ್ದೀರಾ? ಇನ್ನು ಬಡ್ಡಿಯೂ ಸಿಗಲಿದೆ! ಕೇಂದ್ರದ ಹೊಸ ‘ಗೋಲ್ಡ್ ಮಾನಿಟೈಸೇಷನ್’ ಯೋಜನೆ ಏನು?

ಮನೆಯಲ್ಲಿರುವ ಹಳೆಯ ಚಿನ್ನವನ್ನು ಮಾರದೇ, ಲಾಕರ್‌ನಲ್ಲಿ ಇಡದೇ ಅದರಿಂದಲೇ ಆದಾಯ ಗಳಿಸುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಲು ಮುಂದಾಗಿದೆ. ‘ಚಿನ್ನ ನಗದೀಕರಣ ಯೋಜನೆ’ (Gold Monetisation Scheme)ಗೆ ಹೊಸ ರೂಪ ನೀಡಲು ಸರ್ಕಾರ ಸಿದ್ಧತೆ ನಡೆಸಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ. ದೇಶದಲ್ಲಿ ಚಿನ್ನದ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗುತ್ತಿದೆ. ಭಾರತೀಯರ ಮನೆಗಳಲ್ಲಿ ಅಪಾರ ಪ್ರಮಾಣದ ಚಿನ್ನ ಬಳಕೆಯಾಗದೆ ಉಳಿದಿದ್ದು, ಅದರ ಒಂದು ಭಾಗವನ್ನು ಆರ್ಥಿಕ ಚಟುವಟಿಕೆಗೆ ತರಲು ಸರ್ಕಾರ […]

ಕ್ಯಾನ್ಸರ್ ಪತ್ತೆಗೆ ಹೊಸ ಕ್ರಾಂತಿ! ವಾಸನೆ ಹಿಡಿದು ರೋಗ ಗುರುತಿಸುತ್ತವೆ ಈ ಶ್ವಾನಗಳು

ಕ್ಯಾನ್ಸರ್ ಪತ್ತೆ ಮಾಡುವ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಆರಂಭವಾಗಿದೆ. ಮನೆಯ ಕಾವಲುಗಾರರೆಂದು ಪರಿಚಿತವಾಗಿರುವ ಶ್ವಾನಗಳು ಈಗ ಜೀವ ರಕ್ಷಿಸುವ ವೈದ್ಯರ ಪಾತ್ರವನ್ನು ನಿಭಾಯಿಸುತ್ತಿವೆ. ತಮ್ಮ ಅಸಾಧಾರಣ ವಾಸನೆ ಗ್ರಹಿಸುವ ಸಾಮರ್ಥ್ಯದ ಮೂಲಕ ಮನುಷ್ಯರಲ್ಲಿ ಕ್ಯಾನ್ಸರ್ ಇದೆಯೇ ಎಂಬುದನ್ನು ಪತ್ತೆ ಮಾಡುವಲ್ಲಿ ಅವು ಗಮನಾರ್ಹ ಯಶಸ್ಸು ಸಾಧಿಸಿವೆ. ಬೆಂಗಳೂರು ಮೂಲದ ಡಾಗ್ನೊಸಿಸ್ (Dognosis) ಸ್ಟಾರ್ಟ್‌ಅಪ್, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ನೆರವಿನಿಂದ 16 ಶ್ವಾನಗಳಿಗೆ ವಿಶೇಷ ತರಬೇತಿ ನೀಡಿದೆ. ಈ ಶ್ವಾನಗಳು ಮನುಷ್ಯರ ಉಸಿರಾಟದಲ್ಲಿರುವ ವೋಲಟೈಲ್ ಆರ್ಗ್ಯಾನಿಕ್ […]