ವಾಟ್ಸಾಪ್ ಹೊಸ ವೈಶಿಷ್ಟ್ಯದ ಕುರಿತು ಆತಂಕ ವ್ಯಕ್ತಪಡಿಸಿದ ಕೇಂದ್ರ ಸರಕಾರ: ವಾಟ್ಸಾಪ್ ಗೆ ಸರಕಾರ ಕೇಳಿದ ಪ್ರಶ್ನೆಗಳೇನು?

ನವದೆಹಲಿ: ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆ ಯೂಸರ್‌ನೇಮ್ ಮೂಲಕ ಸಂಪರ್ಕ ಸಾಧಿಸಲು ಅವಕಾಶ ಕಲ್ಪಿಸುವ ವಾಟ್ಸಪ್‌ನ ಹೊಸ ವೈಶಿಷ್ಟ್ಯದ ಕುರಿತು ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಈ ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ವಿವರವಾದ ಮಾಹಿತಿಯನ್ನು ಸಲ್ಲಿಸುವಂತೆ ಮೆಟಾಗೆ ಕೇಂದ್ರ ಸರ್ಕಾರ ನೋಟಿಸ್ ಜಾರಿಗೊಳಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ವಾಟ್ಸಪ್‌ನ ಹೊಸ ಯೂಸರ್‌ನೇಮ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ, ಬಳಕೆದಾರರ ಸುರಕ್ಷತೆ ಮತ್ತು ಗೌಪ್ಯತೆಗಾಗಿ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಕುರಿತು ಮೂರು ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ […]
LPG ಗ್ರಾಹಕರೇ ಇಂದಿನಿಂದ ಹೊಸ ನಿಯಮಗಳು ಜಾರಿ, ಸಿಲಿಂಡರ್ ಬುಕ್ ಮಾಡುವ ಮುನ್ನ ಈ ಎಲ್ಲಾ ವಿಷಯಗಳು ನಿಮಗೆ ಗೊತ್ತಿರಲಿ!

ನವದೆಹಲಿ: ಜುಲೈ 1ರಿಂದ ಎಲ್‌ಪಿಜಿ (LPG) ಸಿಲಿಂಡರ್ ಹಾಗೂ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸೇವೆಗಳಿಗೆ ಸಂಬಂಧಿಸಿದಂತೆ ಹಲವು ಹೊಸ ನಿಯಮಗಳು ಜಾರಿಗೆ ಬಂದಿವೆ. ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್ ಸೇರಿದಂತೆ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಈ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಗ್ರಾಹಕರಿಗೆ ಹೆಚ್ಚು ಪಾರದರ್ಶಕ ಹಾಗೂ ಸುರಕ್ಷಿತ ಸೇವೆ ಒದಗಿಸುವುದು ಇದರ ಉದ್ದೇಶವಾಗಿದೆ. ಹೊಸ ನಿಯಮಗಳು ಲಕ್ಷಾಂತರ LPG ಮತ್ತು PNG ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, […]
ರಸ್ತೆ ವಿಭಾಜಕಗಳ ಮೇಲೆ ಕಾಣುವ ಕಪ್ಪು-ಹಳದಿ ಪಟ್ಟಿಗಳ ಬಗ್ಗೆ ನಿಮಗೆ ತಿಳಿದಿರಲೇಬೇಕು: ಇದರ ಹಿಂದಿದೆ ವೈಜ್ಞಾನಿಕ ಕಾರಣ

ನಗರ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಚರಿಸುವಾಗ ರಸ್ತೆ ವಿಭಾಜಕಗಳ (ಡಿವೈಡರ್) ಮೇಲೆ ಪರ್ಯಾಯವಾಗಿ ಬಣ್ಣಿಸಲಾದ ಕಪ್ಪು ಮತ್ತು ಹಳದಿ ಪಟ್ಟಿಗಳನ್ನು ನೀವು ಗಮನಿಸಿರಬಹುದು. ಬಹುತೇಕರು ಇವುಗಳನ್ನು ಕೇವಲ ಅಲಂಕಾರಕ್ಕಾಗಿ ಬಳಸಲಾಗಿದೆ ಎಂದು ಭಾವಿಸುತ್ತಾರೆ. ಆದರೆ ಈ ಬಣ್ಣಗಳ ಬಳಕೆಯ ಹಿಂದೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಮಹತ್ವದ ವೈಜ್ಞಾನಿಕ ಕಾರಣವಿದೆ. ಕಪ್ಪು ಮತ್ತು ಹಳದಿ ಬಣ್ಣಗಳ ಸಂಯೋಜನೆಯು ಹೆಚ್ಚಿನ ದೃಶ್ಯ ವ್ಯತಿರಿಕ್ತತೆ (High Contrast) ಉಂಟುಮಾಡುತ್ತದೆ. ಇದರಿಂದ ರಸ್ತೆ ವಿಭಾಜಕಗಳು ದೂರದಿಂದಲೇ ಸ್ಪಷ್ಟವಾಗಿ ಗೋಚರಿಸುತ್ತವೆ. ಹಗಲು […]
ಆಪಲ್ ಅಭಿಮಾನಿಗಳಿಗೆ ಶಾಕ್: ಸಂಸ್ಥೆಯ ಉತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆ

ನವದೆಹಲಿ: ಭಾರತದಲ್ಲಿ ಆಪಲ್ ತನ್ನ ಪ್ರಮುಖ ಉತ್ಪನ್ನಗಳಾದ ಮ್ಯಾಕ್‌ಬುಕ್, ಐಪ್ಯಾಡ್, ಮ್ಯಾಕ್ ಸ್ಟುಡಿಯೋ ಹಾಗೂ ಮ್ಯಾಕ್ ಮಿನಿ ಸರಣಿಯ ಬೆಲೆಗಳನ್ನು ಏರಿಕೆ ಮಾಡಿದೆ. ವಿಶೇಷವಾಗಿ ಉನ್ನತ ಕಾನ್ಫಿಗರೇಶನ್ ಹೊಂದಿರುವ ಮಾದರಿಗಳ ಬೆಲೆ ₹70,000ರಿಂದ ₹1 ಲಕ್ಷದವರೆಗೆ ಹೆಚ್ಚಳವಾಗಿರುವುದು ಗ್ರಾಹಕರ ಶಾಕ್ ನೀಡಿದೆ. ಬೆಲೆ ಏರಿಕೆಗೆ ಕಾರಣವೇನು? AI ವೈಶಿಷ್ಟ್ಯಗಳಿಗೆ ಶಕ್ತಿಶಾಲಿ ಹಾರ್ಡ್‌ವೇರ್: Apple Intelligence ಸೇರಿದಂತೆ ಕೃತಕ ಬುದ್ಧಿಮತ್ತೆ (AI) ಆಧಾರಿತ ವೈಶಿಷ್ಟ್ಯಗಳನ್ನು ಸಾಧನದಲ್ಲೇ ಕಾರ್ಯಗತಗೊಳಿಸಲು ಹೆಚ್ಚು ಸಾಮರ್ಥ್ಯದ ಪ್ರೊಸೆಸರ್, ಹೆಚ್ಚಿನ RAM ಹಾಗೂ ಸ್ಟೋರೇಜ್ ಅಗತ್ಯವಾಗಿದೆ. […]
ಉದ್ಯೋಗಿಗಳಿಗೆ ದೊಡ್ಡ ಶಾಕ್ ಕೊಟ್ಟ ವೋಕ್ಸ್‌ವ್ಯಾಗನ್ ಕಾರು ಕಂಪೆನಿ: ಒಟ್ಟು1 ಲಕ್ಷ ಉದ್ಯೋಗ ಕಡಿತ, ನಾಲ್ಕು ಪ್ರಮುಖ ಉತ್ಪಾದನಾ ಘಟಕ ಬಂದ್!

ಬರ್ಲಿನ್: ಜರ್ಮನಿಯ ವಾಹನ ತಯಾರಿಕಾ ದೈತ್ಯ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿರುವ ವೋಕ್ಸ್‌ವ್ಯಾಗನ್ Volkswagen ವೆಚ್ಚ ಕಡಿತ ಮತ್ತು ಆರ್ಥಿಕ ಒತ್ತಡದಿಂದ ಹೊರಬರಲು 1 ಲಕ್ಷ ಉದ್ಯೋಗಿಗಳನ್ನು ಹಂತಹಂತವಾಗಿ ವಜಾಗೊಳಿಸುವ ನಿರ್ಧಾರಕ್ಕೆ ಬಂದಿದ್ದು. ಉದ್ಯೋಗಿಗಳಿಗೆ ಇದೊಂದು ದೊಡ್ಡ ಶಾಕ್ ನೀಡಿದೆ. ಜರ್ಮನಿಯಲ್ಲಿರುವ ತನ್ನ ನಾಲ್ಕು ಪ್ರಮುಖ ಉತ್ಪಾದನಾ ಘಟಕಗಳನ್ನು ಮುಚ್ಚಲು ಸಂಸ್ಥೆ ನಿರ್ಧರಿಸಿದೆ. ಕಂಪನಿಯ ಮೇಲ್ವಿಚಾರಣಾ ಮಂಡಳಿಯ ಸದಸ್ಯರಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಜುಲೈ 9ರಂದು ನಡೆಯಲಿರುವ ಸಭೆಯಲ್ಲಿ ಈ ಪ್ರಸ್ತಾವನೆ […]