ಯುವ ಜನತೆಯ ಹಾಟೆಸ್ಟ್ ಬೈಕ್ ಇದು! ಯಮಹಾ ಎಫ್‍‌ಜೆಡ್-ಎಕ್ಸ್ ರೆಟ್ರೋ ಡಿಸೈನ್ ಬೈಕ್, ಏನಿದರ ಸ್ಪೆಷಾಲಿಟಿ?

ಬಹು ನಿರೀಕ್ಷಿತ ಎಫ್‍‌ಜೆಡ್-ಎಕ್ಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಹೊಸ ಎಫ್‍‌ಜೆಡ್-ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಯಮಹಾ ಎಫ್‌ಜೆಡ್-ಎಕ್ಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ವೈ-ಕನೆಕ್ಟ್ ಅಪ್ಲಿಕೇಶನ್‌ನಂತಹ ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಹೊಸ ಯಮಹಾ  ಎಫ್‍‍ಝಡ್-ಎಕ್ಸ್ 2 ಮಾದರಿಗಳಲ್ಲಿ ಲಭ್ಯವಿದ್ದು, ಈ ಹೊಸ ಯಮಹಾ ಎಫ್‍ಜೆಡ್-ಎಕ್ಸ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೊರೂಂ ಪ್ರಕಾರ ರೂ.1.16 ಲಕ್ಷಗಳಾಗಿದೆ. ಇದರ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ರೂ.1,16,800 ಗಳಾದರೆ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುವ ರೂಪಾಂತರ […]

ದೇಶದಲ್ಲೇ ಚೊಚ್ಚಲ ಬಾರಿಗೆ ಮಹಿಳಾ ಸಿಬಂದಿಗಳಿಂದಲೇ ಎಂಜಿ ಹೆಕ್ಟೆರ್ ವಾಹನ ತಯಾರಿಕೆ !

ಬೆಂಗಳೂರು: ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯ 50,000 ಎಂಜಿ ಹೆಕ್ಟೇರ್‌ ವಾಹನಗಳ ಮೈಲಿಗಲ್ಲು ಸಾಧಿಸಿದೆ. ಇದರ ಜೊತೆಗೆ, 50 ಸಾವಿರದ ವಾಹನವನ್ನು ಸಂಪೂರ್ಣ ಮಹಿಳಾ ಸಿಬ್ಬಂದಿಯೇ ತಯಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದು ದೇಶದಲ್ಲೇ ಇದೊಂದು ಪ್ರಥಮ ಪ್ರಯೋಗವಾಗಿದೆ. ಈ ವಾಹನದ ಆರಂಭದಿಂದ ಅಂತ್ಯದವರೆಗಿನ ಎಲ್ಲಾ ನಿರ್ಮಾಣ ಕಾರ್ಯಗಳಲ್ಲಿ ಶೀಟ್ ಮೆಟಲ್‌ನ ಪ್ಯಾನಲ್-ಪ್ರೆಸ್ಸಿಂಗ್ ಮತ್ತು ಪೇಂಟಿಂಗ್, ವೆಲ್ಡಿಂಗ್ ಜೊತೆಗೆ ಉತ್ಪಾದನೆಯ ನಂತರದ ಪರೀಕ್ಷಾರ್ಥ ಚಾಲನೆ ನಡೆಸುವವರೆಗೆ ಮಹಿಳೆಯರೇ ಕಾರ್ಯನಿರ್ವಹಿಸಿದ್ದಾರೆ. ಎಂಜಿ ಮೋಟಾರ್ ಇಂಡಿಯಾ ಗುಜರಾತ್‌ನ ಹಲೋಲ್ (ಪಂಚಮಹಲ್ […]

ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಎಲ್.ಜಿ. ಬೈ ಬೈ?

ನವದೆಹಲಿ: ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿದ್ದ ಎಲ್.ಜಿ ಸಂಸ್ಥೆ ಇದೀಗ ಸ್ಮಾರ್ಟ್ ಫೋನ್ ಮಾರುಕಟ್ಟೆ ತೊರೆಯುವ ಸೂಚನೆ ನೀಡಿದೆ. ಎಲ್ ಜಿ ಮೊಬೈಲ್ ಉದ್ಯಮ 2015 ರಿಂದ ನಷ್ಟ ಎದುರಿಸುತ್ತಿದ್ದು,  ಪ್ರಸ್ತುತ ವರ್ಷ ಹಾಗೂ ಕಳೆದ ವರ್ಷ 4.5 ಬಿಲಿಯನ್ ಡಾಲರ್ ಕಾರ್ಯಾಚರಣೆಯ ನಷ್ಟವನ್ನು ಎದುರಿಸುತ್ತಿದೆ ಎನ್ನಲಾಗಿದೆ. ಫೋಲ್ಡಬಲ್ ಎಲ್ ಜಿ ವಿಂಗ್ ರೋಲಬಲ್ ಡಿವೈಸ್ ಗಳು ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ವಿಭಾಗಗಳಲ್ಲಿ ಎಲ್ ಜಿ ಹಲವಾರು ಪ್ರಯೋಗಗಳನ್ನು ಮಾಡಿತ್ತು,ಆದ್ರೆ ಗ್ರಾಹಕರನ್ನು […]

ಮಣಿಪಾಲದ ಮುನಿಯಾಲು ಆಯುರ್ವೇದ ಸಂಸ್ಥೆ ಸಂಶೋಧಿಸಿದ ಔಷಧಿಗೆ ಅಮೆರಿಕಾದ ಪೇಟೆಂಟ್

ಮಣಿಪಾಲ: ಮುನಿಯಾಲು ಆಯುರ್ವೇದ ಸಂಸ್ಥೆಯ ಅಧ್ಯಕ್ಷ ಡಾ. ಎಂ. ವಿಜಯಭಾನು ಶೆಟ್ಟಿಯವರು ಅಭಿವೃದ್ಧಿಪಡಿಸಿರುವ ಆರು ಸಂಶೋಧಿತ ಆಯುರ್ವೇದ ಔಷಧಿಗಳು ಹಾಗೂ ಒಂದು ಚಿಕಿತ್ಸಾ ಕ್ರಮಕ್ಕೆ ಅಮೇರಿಕಾದ ಡೈರೆಕ್ಟರ್ ಆಫ್ ಪೇಟೆಂಟ್ ಎಂಡ್ ಟ್ರೇಡ್ ಮಾರ್ಕ್ ಆಫೀಸಿನಿಂದ ಇಪ್ಪತ್ತು ವರ್ಷಗಳ ಅವಧಿಯವರೆಗಿನ ಪೇಟ್‍ಂಟ್ ದೊರೆತಿದೆ. ಹೃದಯಘಾತವನ್ನು ಜೀವಕಣದ ಜೀನ್ ಮಟ್ಟದಲ್ಲಿ ನಿಯಂತ್ರಿಸಬಲ್ಲ ಹಾರ್ಟೋಜನ್ ಮಾತ್ರೆಗಳು, ದೇಹದಲ್ಲಿ ಇನ್ಸುಲಿನ್ ಅನ್ನು ಪುನರುತ್ಪತ್ತಿಗೊಳಿಸಿ ಆ ಮೂಲಕ ಸಿಹಿಮೂತ್ರ ರೋಗ ನಿಯಂತ್ರಣ ಹಾಗೂ ದೇಹದ ಪ್ರಮುಖ ಅಂಗಗಳಿಗೆ ರಕ್ಷಣೆ ಕೊಡುವ ಇನ್ಸೋಲ್ –ಎನ್ […]

ಚೈನೀಸ್ ಮೊಬೈಲ್ ಗೆ ಗುದ್ದು ನೀಡಲು ನಾಳೆಯಿಂದ ಬರ್ತಿದೆ ಮೈಕ್ರೋಮ್ಯಕ್ಸ್ ಇನ್-1: ಇಲ್ಲಿದೆ ಫಸ್ಟ್ ಲುಕ್

ಚೀನಾ ಬ್ರ್ಯಾಂಡ್ ಗಳಿಗೆ ಗುದ್ದು ನೀಡೋ ಸೂಪರ್ ಫೋನ್ ಒಂದು ನಾಳೆ ರಿಲೀಸ್ ಆಗಲಿದೆ.ಬಹುನಿರೀಕ್ಷಿತ ಭಾರತದ ಪ್ರಖ್ಯಾತ ಬ್ರ್ಯಾಂಡ್ ಗಳಲ್ಲೊಂದಾದ ಮೈಕ್ರೋಮ್ಯಾಕ್ಸ್ ಮತ್ತೆ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು.ಒಂದು ಅದ್ಬುತ ಫೋನ್ ನೊಂದಿಗೆ ಗ್ರಾಹಕರನ್ನು ಸೇರಲಿದೆ. ಇದು ಭಾರತದಲ್ಲೇ ಉತ್ಪಾದನೆಯಾದ ಫೋನ್ ಆಗಿದ್ದು ಚೀನಾಕ್ಕೆ ಠಕ್ಕರ್ ನೀಡುವ ಉದ್ದೇಶವೂ ಮೈಕ್ರೋಮ್ಯಾಕ್ಸ್ ಗಿದೆ.ಭಾರತದಲ್ಲೇ  ನಿರ್ಮಾಣವಾದ ಫೋನ್ ಆದ್ದರಿಂದ ಇದರ ಹೆಸರು ಇನ್-೧ ಎಂದು ನೀಡಲಾಗಿದೆ.ಮೈಕ್ರೋಮ್ಯಾಕ್ಸ್ ಫೋನ್ ನ ಅಫೀಸಿಯಲ್ ಲುಕ್ ಇಲ್ಲಿದೆ ನೋಡಿ https://youtu.be/_k0TcytgcKQ