ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಎಲ್.ಜಿ. ಬೈ ಬೈ?

ನವದೆಹಲಿ: ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕರನ್ನು ಹೊಂದಿದ್ದ ಎಲ್.ಜಿ ಸಂಸ್ಥೆ ಇದೀಗ ಸ್ಮಾರ್ಟ್ ಫೋನ್ ಮಾರುಕಟ್ಟೆ ತೊರೆಯುವ ಸೂಚನೆ ನೀಡಿದೆ.

ಎಲ್ ಜಿ ಮೊಬೈಲ್ ಉದ್ಯಮ 2015 ರಿಂದ ನಷ್ಟ ಎದುರಿಸುತ್ತಿದ್ದು,  ಪ್ರಸ್ತುತ ವರ್ಷ ಹಾಗೂ ಕಳೆದ ವರ್ಷ 4.5 ಬಿಲಿಯನ್ ಡಾಲರ್ ಕಾರ್ಯಾಚರಣೆಯ ನಷ್ಟವನ್ನು ಎದುರಿಸುತ್ತಿದೆ ಎನ್ನಲಾಗಿದೆ.

ಫೋಲ್ಡಬಲ್ ಎಲ್ ಜಿ ವಿಂಗ್ ರೋಲಬಲ್ ಡಿವೈಸ್ ಗಳು ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ವಿಭಾಗಗಳಲ್ಲಿ ಎಲ್ ಜಿ ಹಲವಾರು ಪ್ರಯೋಗಗಳನ್ನು ಮಾಡಿತ್ತು,ಆದ್ರೆ ಗ್ರಾಹಕರನ್ನು ಈ ಕಂಪೆನಿಯನ್ನು ಕೈಹಿಡಿದಿರಲಿಲ್ಲ.

ಗಮನಾರ್ಹ ಮತ್ತು ಸುಸ್ಥಿರ ಮಾರುಕಟ್ಟೆ ಯಶಸ್ಸು ಎಲ್ ಜಿ ಸಂಸ್ಥೆ ಭಾರತದಲ್ಲಿ ಈ ವರೆಗೆ ಉಳಿವಿಗೆ ಕಾರಣವಾಗಿದೆ. ಜಾಗತಿಕ ಮಟ್ಟದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಎಲ್ ಜಿ ಸಂಸ್ಥೆ ಶೇ.1-2 ರಷ್ಟು ಪಾಲನ್ನು ಹೊಂದಿದೆ.ಆದರೆ ಇದೀಗ ಎಲ್.ಜಿ ಮಾರುಕಟ್ಟೆ ತೊರೆಯುವ ಸೂಚನೆ ನೀಡಿದೆ.