ಯುವ ಜನತೆಯ ಹಾಟೆಸ್ಟ್ ಬೈಕ್ ಇದು! ಯಮಹಾ ಎಫ್‍‌ಜೆಡ್-ಎಕ್ಸ್ ರೆಟ್ರೋ ಡಿಸೈನ್ ಬೈಕ್, ಏನಿದರ ಸ್ಪೆಷಾಲಿಟಿ?

ಬಹು ನಿರೀಕ್ಷಿತ ಎಫ್‍‌ಜೆಡ್-ಎಕ್ಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಹೊಸ ಎಫ್‍‌ಜೆಡ್-ಎಕ್ಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಯಮಹಾ ಎಫ್‌ಜೆಡ್-ಎಕ್ಸ್ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ ವೈ-ಕನೆಕ್ಟ್ ಅಪ್ಲಿಕೇಶನ್‌ನಂತಹ ಹೊಸ ಫೀಚರ್ಸ್ ಗಳನ್ನು ಪಡೆದುಕೊಂಡಿದೆ. ಹೊಸ ಯಮಹಾ  ಎಫ್‍‍ಝಡ್-ಎಕ್ಸ್ 2 ಮಾದರಿಗಳಲ್ಲಿ ಲಭ್ಯವಿದ್ದು, ಈ ಹೊಸ ಯಮಹಾ ಎಫ್‍ಜೆಡ್-ಎಕ್ಸ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೊರೂಂ ಪ್ರಕಾರ ರೂ.1.16 ಲಕ್ಷಗಳಾಗಿದೆ. ಇದರ ಸ್ಟ್ಯಾಂಡರ್ಡ್ ರೂಪಾಂತರದ ಬೆಲೆಯು ರೂ.1,16,800 ಗಳಾದರೆ, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುವ ರೂಪಾಂತರ ಬೈಕ್ ನ  ಬೆಲೆಯು ರೂ.1,19,800 ಗಳಾಗಿದೆ.

ಏನು ವಿಶೇಷತೆ?

ಹೊಸ ಯಮಹಾ ಎಫ್‍‍ಜೆಡ್-ಎಕ್ಸ್ ಬೈಕ್ ವೃತ್ತಾಕಾರದ ಹೆಡ್ ಲ್ಯಾಂಪ್‌ ಗಳು ಮತ್ತು ಟಿಯರ್-ಡ್ರಾಪ್ ಫ್ಯೂಯಲ್ ಟ್ಯಾಂಕ್‌ನೊಂದಿಗೆ ರೆಟ್ರೊ-ರೋಡ್ಸ್ಟರ್ ಅನ್ನು ಹೊಂದಿದೆ. ಫ್ಯೂಯಲ್ ಟ್ಯಾಂಕ್ ಮಧ್ಯದಲ್ಲಿ ಬ್ಲ್ಯಾಕ್ ಮೆಟಲ್ ಸ್ಟ್ರಿಪ್ ಅನ್ನು ಹೊಂದಿದ್ದು, ಇನ್ನು ಈ ಬೈಕ್ ಮ್ಯಾಟ್ ಬ್ಲೂ, ಮ್ಯಾಟ್ ಬ್ಲ್ಯಾಕ್ ಮತ್ತು ಮ್ಯಾಟ್  ಕೂಪರ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಬೈಕ್ ಲಭ್ಯವಿದೆ. ಈ ಹೊಸ ಬೈಕಿನಲ್ಲಿ ಇಂಟೆಗ್ರೇಟೆಡ್ ಡಿಆರ್‌ಎಲ್‌ಗಳೊಂದಿಗಿನ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್‌ಲ್ಯಾಂಪ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಸೈಡ್-ಸ್ಟ್ಯಾಂಡ್ ಎಂಜಿನ್ ಸ್ವಿಚ್ ಕಿಲ್, ಅಪ್ ಸ್ಪೆಪ್ಟ್ ಎಕ್ಸಾಸ್ಟ್, ಮೊಬೈಲ್ ಚಾರ್ಜಿಂಗ್ ಸಾಕೆಟ್ ಮತ್ತು ಇತರೆ ಫೀಚರ್ಸ್ ಗಳನ್ನು ಹೊಂದಿವೆ.

ಯಮಹಾ ಎಫ್‍‍ಝಡ್-ಎಕ್ ಬೈಕ್ 149 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 12.2 ಬಿಹೆಚ್‌ಪಿ ಮತ್ತು 13.3 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ

ಈ  ಬೈಕ್ 1330 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿರಲಿದೆ. ಇದೇ ಸರಣಿಯ ಎಫ್‌ಜೆಡ್-150 ಬೈಕ್ ಕೂಡ ಇದೇ ರೀತಿಯ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್  ಎಬಿಎಸ್ ಅನ್ನು ಕೂಡ ಬೈಕ್ ಹೊಂದಿರಲಿದೆ.