ದೇಶದಲ್ಲೇ ಚೊಚ್ಚಲ ಬಾರಿಗೆ ಮಹಿಳಾ ಸಿಬಂದಿಗಳಿಂದಲೇ ಎಂಜಿ ಹೆಕ್ಟೆರ್ ವಾಹನ ತಯಾರಿಕೆ !

ಬೆಂಗಳೂರು: ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯ 50,000 ಎಂಜಿ ಹೆಕ್ಟೇರ್‌ ವಾಹನಗಳ ಮೈಲಿಗಲ್ಲು ಸಾಧಿಸಿದೆ. ಇದರ ಜೊತೆಗೆ, 50 ಸಾವಿರದ ವಾಹನವನ್ನು ಸಂಪೂರ್ಣ ಮಹಿಳಾ ಸಿಬ್ಬಂದಿಯೇ ತಯಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದು ದೇಶದಲ್ಲೇ ಇದೊಂದು ಪ್ರಥಮ ಪ್ರಯೋಗವಾಗಿದೆ. ಈ ವಾಹನದ ಆರಂಭದಿಂದ ಅಂತ್ಯದವರೆಗಿನ ಎಲ್ಲಾ ನಿರ್ಮಾಣ ಕಾರ್ಯಗಳಲ್ಲಿ ಶೀಟ್ ಮೆಟಲ್‌ನ ಪ್ಯಾನಲ್-ಪ್ರೆಸ್ಸಿಂಗ್ ಮತ್ತು ಪೇಂಟಿಂಗ್, ವೆಲ್ಡಿಂಗ್ ಜೊತೆಗೆ ಉತ್ಪಾದನೆಯ ನಂತರದ ಪರೀಕ್ಷಾರ್ಥ ಚಾಲನೆ ನಡೆಸುವವರೆಗೆ ಮಹಿಳೆಯರೇ ಕಾರ್ಯನಿರ್ವಹಿಸಿದ್ದಾರೆ.

ಎಂಜಿ ಮೋಟಾರ್ ಇಂಡಿಯಾ ಗುಜರಾತ್‌ನ ಹಲೋಲ್ (ಪಂಚಮಹಲ್ ಜಿಲ್ಲೆ) ನಲ್ಲಿ ತನ್ನ ಅತ್ಯಾಧುನಿಕ ಉತ್ಪಾದನಾ ಸೌಲಭ್ಯ ಹೊಂದಿದೆ. ಇದರಲ್ಲಿ ಮಹಿಳಾ ವೃತ್ತಿಪರರು ಎಲ್ಲಾ ವ್ಯವಹಾರ ಕಾರ್ಯಗಳಲ್ಲಿ ತಮ್ಮ ಪುರುಷ ಸಹವರ್ತಿಗಳೊಂದಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಾರೆ.

ಎಂಜಿ ವೈವಿಧ್ಯತೆ, ಸಮುದಾಯ, ನಾವೀನ್ಯತೆ ಮತ್ತು ಅನುಭವಗಳನ್ನು ಹೊಂದಿರುವ ಪ್ರಗತಿಪರ ಬ್ರಾಂಡ್ ಆಗಿದೆ. ಇದು ನಮ್ಮ ದೃಷ್ಟಿಕೋನವನ್ನು ಬ್ರ್ಯಾಂಡ್ ಆಗಿ ವಿಸ್ತರಿಸಿದೆ. ನಮ್ಮ 50,000 ನೇ ಎಂಜಿ ಹೆಕ್ಟರ್‌ನ ವಾಹನವನ್ನು ಎಲ್ಲ ಮಹಿಳಾ ಸಿಬ್ಬಂದಿಗಳು ತಯಾರಿಸಿದ್ದಾರೆ.