19,400ಕ್ಕೆ ತಲುಪಿದ ನಿಫ್ಟಿ, ಬಿಎಸ್​ಇ ಸೆನ್ಸೆಕ್ಸ್​ 556 ಅಂಕ ಏರಿಕೆ

ಮುಂಬೈ: ದೇಶೀಯ ಷೇರು ಮಾರುಕಟ್ಟೆಗಳು ಗಮನಾರ್ಹ ಏರಿಕೆಯೊಂದಿಗೆ ವಾರವನ್ನು ಕೊನೆಗೊಳಿಸಿವೆ. ಬಿಎಸ್‌ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 555.75 ಪಾಯಿಂಟ್ ಅಥವಾ ಶೇಕಡಾ 0.86 ರಷ್ಟು ಏರಿಕೆ ಕಂಡು 65,387.16 ಕ್ಕೆ ತಲುಪಿದ್ದರೆ, ವಿಶಾಲ ಎನ್‌ಎಸ್‌ಇ ನಿಫ್ಟಿ-50 181.50 ಪಾಯಿಂಟ್ ಅಥವಾ ಶೇಕಡಾ 0.94 ರಷ್ಟು ಏರಿಕೆ ಕಂಡು 19,400 ಕ್ಕೆ ತಲುಪಿದೆ. ವಾರದ ವಹಿವಾಟಿನ ಕೊನೆಯ ದಿನವಾದ ಶುಕ್ರವಾರದಂದು ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ವಾರವನ್ನು ಕೊನೆಗೊಳಿಸಿವೆ. ಎನ್​ಟಿಪಿಸಿ, ಜೆಎಸ್​ಡಬ್ಲ್ಯೂ ಸ್ಟೀಲ್, ಜಿಯೋ ಫೈನಾನ್ಷಿಯಲ್, ಒಎನ್​ಜಿಸಿ, ಟಾಟಾ […]

ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕರಿಂದ Aditya-L1 ಬಗ್ಗೆ ಸಂಪೂರ್ಣ ಮಾಹಿತಿ

ಬೆಂಗಳೂರು : ನಾಳೆ(ಶನಿವಾರ) ಇಸ್ರೋ ನಿರ್ಮಿತ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ.ಆದಿತ್ಯ ಎಲ್​​1 ಸೂರ್ಯನನ್ನು ಅಧ್ಯಯನ ಮಾಡುವ ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಯೋಜನೆಯಾಗಿದೆ. ಈ ಕುರಿತು ಈಟಿವಿ ಭಾರತಕ್ಕೆ ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ.ಗಲಗಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಿಂದುವಿನಲ್ಲಿ ಭೂಮಿಯ ಗುರುತ್ವ ಪ್ರಭಾವ ಮತ್ತು ಸೂರ್ಯನ ಗುರುತ್ವ ಪ್ರಭಾವಗಳು ಸಮತೋಲನಗೊಳ್ಳುತ್ತವೆ. ಆದಿತ್ಯ-ಎಲ್ 1 ಯೋಜನೆಯಲ್ಲಿ ಈ ಬಿಂದುವನ್ನು ಕೇಂದ್ರೀಕರಿಸಿ ಸೂರ್ಯನ ಸುತ್ತ ಪರಿಭ್ರಮಿಸಲು ಯೋಜಿಸಲಾಗಿದೆ.ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆ […]

19 ಲಕ್ಷ ವಿಡಿಯೋಗಳನ್ನು 3 ತಿಂಗಳಲ್ಲಿ ಡಿಲೀಟ್ ಮಾಡಿದ ಯೂಟ್ಯೂಬ್!

ನವದೆಹಲಿ: ಗೂಗಲ್ ಒಡೆತನದ ಯೂಟ್ಯೂಬ್ 2023 ರ ಜನವರಿ ಮತ್ತು ಮಾರ್ಚ್ ನಡುವೆ ನಿಯಮ ಉಲ್ಲಂಘನೆಗಾಗಿ ಭಾರತದಲ್ಲಿ ತನ್ನ ಪ್ಲಾಟ್​​ಫಾರ್ಮ್​ನಿಂದ 19 ಲಕ್ಷಕ್ಕೂ ಹೆಚ್ಚು ವಿಡಿಯೋಗಳನ್ನು ತೆಗೆದುಹಾಕಿದೆ. ಅದೇ ರೀತಿ ಜಾಗತಿಕವಾಗಿ ಯೂಟ್ಯೂಬ್ 64.8 ಲಕ್ಷ ವಿಡಿಯೋಗಳನ್ನು ತೆಗೆದುಹಾಕಿದೆ. ಹಗರಣಗಳು, ದಾರಿತಪ್ಪಿಸುವ ಮೆಟಾಡೇಟಾ ಅಥವಾ ಥಂಬ್​​ನೇಲ್​ಗಳು ಮತ್ತು ವಿಡಿಯೋ ಮತ್ತು ಕಾಮೆಂಟ್​ಗಳ ಸ್ಪ್ಯಾಮ್ ಸೇರಿದಂತೆ ಯೂಟ್ಯೂಬ್​ನ ಸ್ಪ್ಯಾಮ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ 87 ಲಕ್ಷಕ್ಕೂ ಹೆಚ್ಚು ಚಾನೆಲ್​ಗಳನ್ನು ಕಂಪನಿಯು ಇದೇ ಅವಧಿಯಲ್ಲಿ ತೆಗೆದುಹಾಕಿದೆ.ಈ ವರ್ಷದ ಆರಂಭದ ಮೂರು ತಿಂಗಳಲ್ಲಿ […]

‘Global IndiaAI’ ಪ್ರಥಮ ಸಮ್ಮೇಳನ ಅಕ್ಟೋಬರ್ ತಿಂಗಳಲ್ಲಿ

ನವದೆಹಲಿ: ಭಾರತ ಮತ್ತು ವಿಶ್ವದಾದ್ಯಂತದ ಪ್ರಮುಖ ಎಐ ಕಂಪನಿಗಳು, ಸಂಶೋಧಕರು, ಸ್ಟಾರ್ಟ್‌ಅಪ್​ಗಳು ಮತ್ತು ಹೂಡಿಕೆದಾರರು ಇದರಲ್ಲಿ ಭಾಗವಹಿಸಲಿದ್ದಾರೆ.ಈ ವರ್ಷದ ಅಕ್ಟೋಬರ್​​ನಲ್ಲಿ ಮೊದಲ ಬಾರಿಗೆ ‘ಗ್ಲೋಬಲ್ ಇಂಡಿಯಾಎಐ 2023′ ಸಮ್ಮೇಳನ ಆಯೋಜಿಸಲಾಗುವುದು ಎಂದು ಐಟಿ ಸಚಿವಾಲಯ ಬುಧವಾರ ತಿಳಿಸಿದೆ. ಇದೇ ವರ್ಷದ ಅಕ್ಟೋಬರ್​ನಲ್ಲಿ ಗ್ಲೋಬಲ್ ಇಂಡಿಯಾಎಐ 2023’ ಸಮ್ಮೇಳನ ಆಯೋಜಿಸಲಾಗುವುದು ಎಂದು ಐಟಿ ಸಚಿವಾಲಯ ಹೇಳಿದೆ. “ಗ್ಲೋಬಲ್ ಇಂಡಿಯಾಎಐ 2023 ಸಮ್ಮೇಳನದ ಆಯೋಜನೆಗೆ ತಾತ್ಕಾಲಿಕವಾಗಿ ಅಕ್ಟೋಬರ್ 14-15 ರಂದು ದಿನಾಂಕ ನಿಗದಿಪಡಿಸಲಾಗಿದೆ. ಇದು ಭಾರತ ಮತ್ತು ಪ್ರಪಂಚದಾದ್ಯಂತದ ಎಐನಲ್ಲಿನ […]

ಆಫ್ಲೈನ್ ಡಿಜಿಟಲ್ ಪೇಮೆಂಟ್​ ಮಿತಿ ಸಣ್ಣ ಮೊತ್ತದ 500 ರೂ.ಗೆ ಹೆಚ್ಚಳ

ಬೆಂಗಳೂರು: ಆಫ್ಲೈನ್ ಮೂಲಕ ಮಾಡಬಹುದಾದ ಸಣ್ಣ ಮೊತ್ತದ ಡಿಜಿಟಲ್ ಪೇಮೆಂಟ್​​ ಮಿತಿಯನ್ನು 200 ರೂಪಾಯಿಗಳಿಂದ 500 ರೂಪಾಯಿಗಳಿಗೆ ಆರ್​ಬಿಐ ಹೆಚ್ಚಿಸಿದೆ.ಇತ್ತೀಚೆಗೆ ನಡೆದ ದ್ವೈಮಾಸಿಕ ನೀತಿ ಪರಾಮರ್ಶೆ ಸಭೆಯಲ್ಲಿ ಆರ್​ಬಿಐ ಈ ನಿರ್ಧಾರ ಘೋಷಿಸಿತ್ತು. ಇದೀಗ ನಿರ್ಧಾರ ಜಾರಿಗೆ ಬಂದಿದೆ. ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007 (2007 ರ ಕಾಯ್ದೆ 51) ರ ಸೆಕ್ಷನ್ 10 (2) ಮತ್ತು ಸೆಕ್ಷನ್ 18 ರ ಅಡಿಯಲ್ಲಿ ಹೊಸ ನೀತಿಯನ್ನು ಜಾರಿಗೊಳಿಸಲಾಗಿದ್ದು, ಇದು ತಕ್ಷಣದಿಂದ ಜಾರಿಗೆ ಬರಲಿದೆ ಎಂದು […]