WTC Final 2023: 31ನೇ ಟೆಸ್ಟ್‌ ಶತಕ ದಾಖಲಿಸಿದ ಸ್ಮಿತ್‌, 469 ರನ್​ಗಳಿಗೆ ಆಸ್ಟ್ರೇಲಿಯಾ ಆಲೌಟ್2ನೇ ದಿನ ಭಾರತದ ಬೌಲರ್​​ಗಳ ಮೇಲುಗೈ;

ಓವಲ್ (ಲಂಡನ್​): ಲಂಡನ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡ 469 ರನ್​ಗಳಿಗೆ ಆಲೌಟ್​ ಆಗಿದೆ. ಇಂದು ಭಾರತದ ಬೌಲರ್‌ಗಳು ಅದ್ರಲ್ಲೂ ಮಹಮ್ಮದ್ ಸಿರಾಜ್‌ 4 ವಿಕೆಟ್‌ ಪಡೆದು ಆಸೀಸ್‌ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ಸು ಕಂಡರು. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (Australia vs India WTC Final) 2023​ ಪಂದ್ಯದಲ್ಲಿ​ ಎರಡನೇ ದಿನ ಭಾರತದ ಬೌಲರ್​ಗಳು ಹಿಡಿತ ಸಾಧಿಸಿದರು. ಪರಿಣಾಮವಾಗಿ ಆಸ್ಟ್ರೇಲಿಯಾ ತಂಡ ಇಂದು […]

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ನಲ್ಲಿ ರಿಷಭ್​ ಪಂತ್​ ದಾಖಲೆ ಮುರಿದ ಟ್ರಾವಿಸ್​ ಹೆಡ್

ಲಂಡನ್​: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ​ ಪಂದ್ಯದ ಮೊದಲನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಆಟಗಾರರು ಹಲವು ದಾಖಲೆಗಳನ್ನು ಬರೆದಿದ್ದಾರೆ.​ ​ ಐಪಿಎಲ್​ನಲ್ಲಿ ಹರಾಜಗಾದೆ ನಿರಾಸೆಗೊಳಗಾಗಿದ್ದ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್​ ಹೆಡ್,​ ಐಪಿಎಲ್​ ಮಾದರಿಯಲ್ಲೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಬಿರುಸಿನ ಬ್ಯಾಟ್​ ಬೀಸಿ ದಾಖಲೆ ಬರೆದಿದ್ದಾರೆ. ಇಲ್ಲಿಯ ಓವೆಲ್​ ಮೈದಾನದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ, ವೇಗವಾಗಿ ಬ್ಯಾಟ್​ಮಾಡಿ ಭಾರತದ ಬ್ಯಾಟರ್​​ ರಿಷಭ್​ ಪಂತ್ ಅವರ ಟೆಸ್ಟ್​ನ​ ಅತ್ಯಧಿಕ ಸ್ಟ್ರೈಕ್ ರೇಟ್ […]

ತೋಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಂ ಇಂಡಿಯಾ: ಭಾರತ- ಆಸ್ಟ್ರೇಲಿಯಾ ಟೆಸ್ಟ್‌ ಚಾಂಪಿಯನ್‌ಶಿಪ್‌

ಲಂಡನ್​: ಲಂಡನ್‌ನ ಓವಲ್​ ಮೈದಾನದಲ್ಲಿ ನಡೆಯುತ್ತಿರುವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತ ಟಾಸ್ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಇತ್ತೀಚಿನ ವರದಿಯಂತೆ ಆಸೀಸ್ ತಂಡ 5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 13 ರನ್‌ ಗಳಿಸಿ ಆಡುತ್ತಿದೆ.ಬಹುನೀರೀಕ್ಷಿತ 2021-23 ರ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ. ಪ್ರತಿಷ್ಟಿತ​ ಪಂದ್ಯಕ್ಕೆ ಓವಲ್​ ಮೈದಾನ ಆತಿಥ್ಯ ವಹಿಸಿದೆ. ಟಾಸ್ ಗೆದ್ದ ಭಾರತ ತಂಡ ಬೌಲಿಂಗ್​ ಆಯ್ದುಕೊಂಡಿದೆ. ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ರೈಲು […]

ಆಯಶಸ್ ಟೆಸ್ಟ್‌ ಸರಣಿಗೆ ಇಂಗ್ಲೆಂಡ್‌ ತಂಡ ಸೇರಿದ ಮೋಯಿನ್​ ಅಲಿ: ನಿವೃತ್ತಿ ವಾಪಸ್

ಲಂಡನ್: 2021ರಲ್ಲಿ ನಿವೃತ್ತಿ ಘೋಷಿಸಿದ್ದ 35 ವರ್ಷದ ಮೋಯಿನ್​ ಅಲಿ ಅವರನ್ನು ಆಯಶಸ್​ ಸರಣಿಗೆ ಇಂಗ್ಲೆಂಡ್​ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡ್​ – ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ಕ್ರಿಕೆಟ್ ಸರಣಿ ಆಯಶಸ್​ನ ಮೊದಲೆರಡು ಪಂದ್ಯಗಳಿಗೆ ಮೋಯಿನ್​ ಅಲಿ ಅವರನ್ನು ಸೇರಿಸಿಕೊಳ್ಳಲಾಗಿದೆ. 35 ವರ್ಷ ವಯಸ್ಸಿನ ಅನುಭವಿ ಸ್ಪಿನ್ನರ್​ 2021ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಇಂಗ್ಲೆಂಡ್​ ತಂಡದಲ್ಲಿ ಆಟಗಾರರ ಗಾಯದ ಸಮಸ್ಯೆಯಿಂದಾಗಿ ಮತ್ತೆ ಅಲಿಗೆ ಮಣೆ ಹಾಕಲಾಗಿದೆ. ಆಸ್ಟ್ರೇಲಿಯಾ- ಭಾರತ ತಂಡಗಳ ನಡುವೆ ಲಂಡನ್‌ನ ಓವಲ್​ ಮೈದಾನದಲ್ಲಿ […]

ಟೀ ಬ್ರೇಕ್​ಗೆ 170ಕ್ಕೆ 3 ವಿಕೆಟ್​ ಕಳೆದುಕೊಂಡ ಆಸಿಸ್​ ICC WTC Final

ಲಂಡನ್​: ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡ ಭಾರತ ಎರಡನೇ ಅವಧಿಯಲ್ಲಿ 97 ರನ್​ ಬಿಟ್ಟು ಕೊಟ್ಟು, 1 ವಿಕೆಟ್​ ಪಡೆದುಕೊಂಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನ ಟಿ ಬ್ರೇಕ್​ ವೇಳೆಗೆ ಆಸ್ಟ್ರೇಲಿಯಾ ಉತ್ತಮ ಕಮ್​​ಬ್ಯಾಕ್​ ಮಾಡಿದೆ. ದಿನದ ಎರಡನೇ ಸೆಷನ್​ನಲ್ಲಿ ಕೇವಲ ಒಂದು ವಿಕೆಟ್​ ಬಿಟ್ಟುಕೊಟ್ಟು 97 ರನ್​ ಕಲೆಹಾಕಿದೆ. ಎರಡನೇ ಸೆಷ್ನ್​ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ 3 ವಿಕೆಟ್​ ನಷ್ಟಕ್ಕೆ 170 ರನ್​ ಗಳಿಸಿದೆ. ಪ್ರಸ್ತುತ ಕ್ರೀಸ್​ನಲ್ಲಿ ಸ್ಮಿತ್​ ಮತ್ತು ಹೆಡ್​ ಇದ್ದಾರೆ. ಮೊದಲ ಸೆಷನ್​ನಲ್ಲಿ […]