ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ನಲ್ಲಿ ರಿಷಭ್​ ಪಂತ್​ ದಾಖಲೆ ಮುರಿದ ಟ್ರಾವಿಸ್​ ಹೆಡ್

ಲಂಡನ್​: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ​ ಪಂದ್ಯದ ಮೊದಲನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ಆಟಗಾರರು ಹಲವು ದಾಖಲೆಗಳನ್ನು ಬರೆದಿದ್ದಾರೆ.​ ​

ಐಪಿಎಲ್​ನಲ್ಲಿ ಹರಾಜಗಾದೆ ನಿರಾಸೆಗೊಳಗಾಗಿದ್ದ ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್​ ಹೆಡ್,​ ಐಪಿಎಲ್​ ಮಾದರಿಯಲ್ಲೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಬಿರುಸಿನ ಬ್ಯಾಟ್​ ಬೀಸಿ ದಾಖಲೆ ಬರೆದಿದ್ದಾರೆ.

ಇಲ್ಲಿಯ ಓವೆಲ್​ ಮೈದಾನದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ, ವೇಗವಾಗಿ ಬ್ಯಾಟ್​ಮಾಡಿ ಭಾರತದ ಬ್ಯಾಟರ್​​ ರಿಷಭ್​ ಪಂತ್ ಅವರ ಟೆಸ್ಟ್​ನ​ ಅತ್ಯಧಿಕ ಸ್ಟ್ರೈಕ್ ರೇಟ್ ದಾಖಲೆಯನ್ನು ಹೆಡ್​ ಮುರಿದಿದ್ದಾರೆ.

ಮೊದಲದಿನದಾಟದ ಪಂದ್ಯದಲ್ಲಿ ಟ್ರಾವಿಸ್ ಹೆಡ್ 146 ರನ್​ಗಳನ್ನು ಕಲೆ ಹಾಕಿ ಅಜೇಯರಾಗಿ ಕ್ರೀಸ್​ನಲ್ಲಿ ಉಳಿದಿದ್ದಾರೆ. ಮತ್ತೊಂದೆಡೆ ಸ್ಟೀವ್​ ಸ್ಮಿತ್ ಕೂಡ (ಅಜೇಯ 95) ರನ್​ ಕಲೆಹಾಕದ್ದಾರೆ. ಇಬ್ಬರ ಜೋಡಿ 4ನೇ ವಿಕೆಟ್​ಗೆ ಮುರಿಯದ 251 ರನ್‌ಗಳ ಜೊತೆಯಾಟವಾಡಿದ್ದಾರೆ. ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 327 ರನ್​ ಗಳಿಸಿದೆ.
WTC 2021-23ರಲ್ಲಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟ್ಸ್‌ಮನ್‌ಗಳು

ಟ್ರಾವಿಸ್ ಹೆಡ್ – 81.91

ರಿಷಭ್ ಪಂತ್ – 80.81

ಜಾನಿ ಬೈರ್‌ಸ್ಟೋ – 68.90

ಒಲ್ಲಿ ಪೋಪ್ – 66.04

ಇಂಗ್ಲೆಂಡನಲ್ಲಿ ಅತ್ಯಧಿಕ ಜೊತೆಯಾಟ

388 – ಡಾನ್ ಬ್ರಾಡ್‌ಮನ್ ಮತ್ತು ಬಿಲ್ ಪೊನ್ಸ್‌ಫೋರ್ಡ್, ಇಂಗ್ಲೆಂಡ್​ ವಿರುದ್ಧ ಹೆಡಿಂಗ್ಲೆ ಮೈದಾನ, 1934

251 – ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಭಾರತ ವಿರುದ್ಧ ದಿ ಓವಲ್ ಮೈದಾನ, 2023

243 – ಡಾನ್ ಬ್ರಾಡ್ಮನ್ ಮತ್ತು ಆರ್ಚೀ ಜಾಕ್ಸನ್ ಇಂಗ್ಲೆಂಡ್ ವಿರುದ್ಧ ದಿ ಓವಲ್ ಮೈದಾನ, 1930

221 – ಸಿಡ್ನಿ ಗ್ರೆಗೊರಿ ಮತ್ತು ಹ್ಯಾರಿ ಟ್ರಾಟ್ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಮೈದಾನ, 1896

214 – ಮೈಕೆಲ್ ಕ್ಲಾರ್ಕ್ ಮತ್ತು ಸ್ಟೀವ್ ಸ್ಮಿತ್ ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್ ಮೈದಾನ, 2013

ಭಾರತದ ವಿರುದ್ಧ ಆಸ್ಟ್ರೇಲಿಯಾ ಅತ್ಯಧಿಕ ಜೊತೆಯಾಟ

386 – ರಿಕಿ ಪಾಂಟಿಂಗ್ ಮತ್ತು ಮೈಕೆಲ್ ಕ್ಲಾರ್ಕ್, ಅಡಿಲೇಡ್, 2012

334 – ಮೈಕೆಲ್ ಕ್ಲಾರ್ಕ್ ಮತ್ತು ಮೈಕೆಲ್ ಹಸ್ಸಿ, ಸಿಡ್ನಿ, 2012

288 – ರಿಕಿ ಪಾಂಟಿಂಗ್ ಮತ್ತು ಮೈಕೆಲ್ ಕ್ಲಾರ್ಕ್, ಸಿಡ್ನಿ, 2012

251 – ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್, ಓವಲ್, 2023

239 – ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾ, ಅಡಿಲೇಡ್ 1999

ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ಟೆಸ್ಟ್​ರನ್ ಗಳಿಸಿದ ವಿದೇಶಿ ಆಟಗಾರರು

2674 – ಡಾನ್ ಬ್ರಾಡ್ಮನ್

2082 – ಅಲನ್ ಬಾರ್ಡರ್

2057 – ವಿವ್ ರಿಚರ್ಡ್ಸ್

1822 – ಸ್ಟೀವ್ ಸ್ಮಿತ್

1820 – ಗಾರ್ಫೀಲ್ಡ್ ಸೋಬರ್ಸ್

ಈ ಬಗ್ಗೆ ಆಸ್ಟ್ರೇಲಿಯಾ ಬ್ಯಾಟರ್ ಟ್ರಾವಿಸ್ ಹೆಡ್ ಪ್ರತಿಕ್ರಿಯೆ ನೀಡಿದ್ದು, ಸ್ಟೀವ್ ಸ್ಮಿತ್ ಅವರೊಟ್ಟಿಗೆ ಬ್ಯಾಟಿಂಗ್ ಮಾಡಲು ಹೆಚ್ಚಾಗಿ ಇಷ್ಟಪಡುತ್ತೇನೆ. ಏಕೆಂದರೆ ಇದು ನನ್ನ ಅತ್ಯುತ್ತಮ ಪ್ರದರ್ಶನಕ್ಕೆ ಸಹಾಯ ಮಾಡಲಿದೆ. ಸ್ಮೀತ್​ ಅವರೊಂದಿಗಿನ ಬ್ಯಾಟಿಂಗ್‌ ಅನ್ನು ನಾನು ನಿಜವಾಗಿಯೂ ಆನಂದಿಸುತ್ತೇನೆ. ಅವರು ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು, ಬಹುಶಃ ನಮ್ಮ ಅತ್ಯುತ್ತಮ ಆಟಗಾರರು ಹೌದು. ಹಾಗಾಗಿ ನಾನು ಯಾವಾಗಲೂ ಅವರೊಂದಿಗೆ ಆಡಲು ಸಿದ್ಧನಿರುತ್ತೇನೆ ಎಂದು ಹೆಡ್​ ಹೇಳಿದರು.