ನುಗ್ಗೆಕಾಯಿ ಆರೋಗ್ಯಕ್ಕೆ ಹಿತಕರವಾದ ಆಹಾರ.ನುಗ್ಗೆಕಾಯಿಯ ಎಲ್ಲಾ ಖಾದ್ಯಗಳು ಚೆಂದ. ಆದರೆ ನುಗ್ಗೇಕಾಯಿ ಯ ದಾಲ್ ತಿಂದರೆ ನಿಮ್ಮಲ್ಲಿ ಬೇರೆಯೇ ಜೋಶ್ ಬರುತ್ತೆ.ಊಟಕ್ಕೆ ಕಿಕ್ಕೇರಿಸುವ ಈ ದಾಲ್ ಅನ್ನು ಮನೆಲೇ ಒಮ್ಮೆ ಟ್ರೈ ಮಾಡಿ
ಬೇಕಾಗುವ ಪದಾರ್ಥಗಳು
- ನುಗ್ಗೇಕಾಯಿ- 4
- ತೊಗರಿಬೇಳೆ – 1 ಚಮಚ
- ಕಡಲೇಬೇಳೆ- 1 ಚಮಚ
- ಮೈಸೂರ್ ಬೇಳೆ- 1 ಚಮಚ
- ಹೆಸರುಬೇಳೆ- 1 ಚಮಚ
- ಟೊಮೆಟೋ ಪ್ಯೂರಿ- 1 ಸಣ್ಣ ಬಟ್ಟಲು
- ಈರುಳ್ಳಿ- 1
- ಅಚ್ಚಖಾರದ ಪುಡಿ- 1 ಚಮಚ
- ಕೊತ್ತಂಬರಿ ಸೊಪ್ಪು-ಸ್ವಲ್ಪ
- ಜೀರಿಗೆ-ಸ್ವಲ್ಪ
- ಉಪ್ಪು-ರುಚಿಗೆ ತಕ್ಕಷ್ಟು
ಹೀಗೆ ಮಾಡಿ:
ಮೊದಲು ಬೇಳೆಗಳೆಲ್ಲವನ್ನೂ ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಬೇಕು.ನುಗ್ಗೇಕಾಯಿಗಳನ್ನು ಚೆನ್ನಾಗಿ ತೊಳೆದುಕೊಂಡು ತುಂಡು ಮಾಡಿಟ್ಟುಕೊಳ್ಳಿ.ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಗೂ ಖಾರದ ಪುಡಿಯನ್ನು ರುಬ್ಬಿಟ್ಟುಕೊಳ್ಳಿ.ಸ್ವಲ್ಪ ನೀರಿಗೆ ಉಪ್ಪು ಹಾಕಿ ನುಗ್ಗೆಕಾಯಿ ಬೇಯಿಸಿಕೊಳ್ಳಿ. ಬೆಂದ ನುಗ್ಗೆಕಾಯಿದೆ ಬೇಯಿಸಿದ ಬೇಳೆಯನ್ನು ಹಾಕಿ ಮಿಶ್ರಣ ಮಾಡಿ. ನಂತರ ಈಗಾಗಲೇ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ.ಬಳಿಕ ಉಪ್ಪು, ಅರಿಶಿನದ ಪುಡಿ, ಜೀರಿಗೆ ಪುಡಿ ಹಾಗೂ ಟೊಮೆಟೋ ಪ್ಯೂರಿಯನ್ನು ಹಾಕಿ ಕುದಿಯಲು ಬಿಡಿ. ಮಿಶ್ರಣ ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಸೇರಿಸಿ ಕುದಿಸಿದರೆ ರುಚಿಕರವಾದ ನುಗ್ಗೇಕಾಯಿ ದಾಲ್ ಸವಿಯಲು ಸಿದ್ಧ.