ರುಚಿ ರುಚಿ ಕರ್ನಾಟಕ ಸ್ಟೈಲ್ ಬಿರಿಯಾನಿ ಮಾಡೋದು ಹೀಗೆ

ರುಚಿಕರ ಬಿರಿಯಾನಿ.ಪಕ್ಕಾ ಕರ್ನಾಟಕ ಶೈಲಿಯಲ್ಲಿ ಮಾಡೋದು ಹೇಗೆ ಅಂತ ನೋಡೋಣ ಬನ್ನಿ.

ಬೇಕಾಗುವ ಪದಾರ್ಥಗಳು

  • ಎಣ್ಣೆ- 1 ಬಟ್ಟಲು
  • ಕೋಳಿ ಮಾಂಸ- ಅರ್ಧ ಕೆಜಿ
  • ಹಸಿಮೆಣಸಿನ ಕಾಯಿ- 5
  • ಈರುಳ್ಳಿ- ಉದ್ದಕ್ಕೆ ಹೆಚ್ಚಿದ್ದು ಸ್ವಲ್ಪ
  • ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
  • ಕೊತ್ತಂಬರಿ ಸೊಪ್ಪು- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
  • ಟೊಮ್ಯಾಟೋ- ಸಣ್ಣಗೆ ಕತ್ತರಿಸಿದ್ದು 2
  • ಅಚ್ಚ ಖಾರದ ಪುಡಿ- 1 ಚಮಚ
  • ಗರಂ ಮಸಾಲೆ ಪುಡಿ – ಅರ್ಧ ಚಮಚ
  • ಅಕ್ಕಿ- 1 ಬಟ್ಟಲು (ನೆನೆಸಿದ್ದು)
  • ನಿಂಬೆಹಣ್ಣು- 1 (ರಸ)
  • ಮೊಸರು- ಅರ್ಧ ಬಟ್ಟಲು
  • ಉಪ್ಪು-ರುಚಿಗೆ ತಕ್ಕಷ್ಟು
  • ಪುದೀನಾ ಸೊಪ್ಪು-ಸ್ವಲ್ಪ

ಹೀಗೆ ಮಾಡಿ:

ಒಲೆಯ ಮೇಲೆ ಪಾತ್ರೆಯೊಂದನ್ನು ಇಟ್ಟು ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಿರಿ. ನಂತರ ಶುಂಠಿ, ಬೆಳ್ಳುಳ್ಳಿ, ಟೊಮೆಟೋ ಹಾಕಿ ಕೆಂಪಗಾದ ಬಳಿಕ ಕೊತ್ತಮಂಬರಿ ಸೊಪ್ಪು, ಪುದೀನಾ, ಅಚ್ಚ ಖಾರದ ಪುಡಿ, ಗರಂ ಮಸಾಲೆ ಪುಡಿ, ನಿಂಬೆ ಹಣ್ಣಿನ ರಸ ಹಾಗೂ ಮೊಸರು ಹಾಕಿ 5 ನಿಮಿಷ ಬಿಡಿ.

ಬಳಿಕ ಉಪ್ಪು ಹಾಗೂ ಮಾಂಸವನ್ನು ಹಾಕಿ 10 ನಿಮಿಷ ಚೆನ್ನಾಗಿ ಬೇಯಲು ಬಿಡಿ. ಮತ್ತೊಂದೆಡೆ ಒಲೆಯ ಮೇಲೆ ಪಾತ್ರೆಯೊಂದಕ್ಕೆ ನೀರು, ಉಪ್ಪು, ಸ್ವಲ್ಪ ಪುದೀನಾ ಸೊಪ್ಪು ಹಾಗೂ ಅಕ್ಕಿಯನ್ನು ಹಾಕಿಡಿ. ಅಕ್ಕಿ 3/4 ಭಾಗದಷ್ಟು ಬೆಂದ ಬಳಿಕ ಬಸಿದು ಅನ್ನವನ್ನು ಸಿದ್ಧಪಡಿಸಿಕೊಳ್ಳಿ.

ಆ ಬಳಿಕ ಸ್ವಲ್ಪ ಅನ್ನು ತೆಗೆದು ತಟ್ಟೆಯೊಂದಕ್ಕೆ ಹಾಕಿ ಈಗಾಗಲೇ ಮಾಡಿಕೊಂಡ ಮಸಾಲೆಯನ್ನು ಸ್ವಲ್ಪ ಹಾಕಿ ನಂತರ ಮತ್ತೆ ಸ್ವಲ್ಪ ಅನ್ನವನ್ನು ಹಾಕಿ ಲೇಯರ್ ಲೇಯರ್ ರೀತಿ ಹಾಕಿ ಮಧ್ಯಮ ಉರಿಯಲ್ಲಿ ಅನ್ನ ಪೂರ್ತಿ ಬೇಯುವವವರೆ 5-6 ನಿಮಿಷ ಬಿಡಿ. ನಂತರ ನಿಧಾನವಾಗಿ ಮಸಾಲೆ ಜೊತೆಗೆ ಅನ್ನವನ್ನು ಮಿಶ್ರಣ ಮಾಡಿದರೆ, ರುಚಿಕರವಾದ ಟೇಸ್ಟಿ ಬಿರಿಯಾನಿ ರೆಡಿಯಾಗುತ್ತೆ