ಕರಾವಳಿ ಸ್ಪೆಷಲ್ ಚಗಟೆ ಸೊಪ್ಪಿನ ಪಲ್ಯ ಮಾಡಿ ತಿಂದಿದ್ದೀರಾ? ಮಳೆಗಾಲದ ಬೆಸ್ಟ್ ರೆಸಿಪಿ ಇದು

ಮಳೆಗಾಲದಲ್ಲಿ ಕರಾವಳಿ ಭಾಗದಲ್ಲಿ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಈ ಚಗಟೆ ಸೊಪ್ಪು (ತೋಜಂಕ್ ಸೊಪ್ಪು) ಬೆಳೆಯುತ್ತದೆ. ಈ ಸೊಪ್ಪಿನ ಪಲ್ಯ ಆರೋಗ್ಯಕ್ಕೂ ಒಳ್ಳೇದು. ರುಚಿಗೂ ಅದ್ಬುತ. ಇದು ಮಳೆಗಾಲಕ್ಕೆ ಹೇಳಿ ಮಾಡಿಸಿದ ಪಲ್ಯ ಒಮ್ಮೆ ಟ್ರೈ ಮಾಡಿ
ಮಾಡಲು ಬೇಕಾಗುವ ಸಾಮಗ್ರಿಗಳು:
ಕೊತಂಬರಿ ಬೀಜ- 2 ಚಮಚ
ಜಿರಿಗೆ- 1/2 ಚಮಚ
ಬೆಳ್ಳುಳ್ಳಿ- 5 ಎಸಳು
ಸಾಸಿವೆ- 1/2 ಚಮಚ
ಉದ್ದಿನಬೇಳೆ- 1/2 ಚಮಚ
ಕೆಂಪುಮೆಣಸು- 8
ಎಣ್ಣೆ- 4 ಚಮಚ
ಕರಿಬೇವು- 8 ಎಲೆ
ಚಗಟೆ ಸೊಪ್ಪು
ಸ್ವಲ್ಪ ಹಲಸಿನ ಬೀಜ
ಮಾಡುವ ವಿಧಾನ:
ಮೊದಲಿಗೆ ಉದ್ದಿನಬೇಳೆ- 1/2 ಚಮಚ, ಕೊತಂಬರಿ ಬೀಜ- 2 ಚಮಚ, ಸಾಸಿವೆ- 1/2 ಚಮಚ, ಉದ್ದಿನಬೇಳೆ 1/2 ಚಮಚ ಹಾಕಿ ಎಲ್ಲವನ್ನು ಮಿಕ್ಸಿಯಲ್ಲಿ ನೀರು ಹಾಕದೇ ಪುಡಿ ಮಾಡಿ.
ನಂತರ ಚಗಟೆ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿ, ಇದರ ಜೊತೆ ಕತ್ತರಿಸಿದ( ಜಜ್ಜಿದ) ಹಲಸಿನ ಬೀಜವನ್ನು ಪ್ರತ್ಯೇಕ ಗ್ಯಾಸ್ ನಲ್ಲಿ ಉಪ್ಪು, ಸ್ವಲ್ಪ ನೀರು ಹಾಕಿ,  ಬೇಯಲು ಇಡಿ. ಬೆಂದ ನಂತರ ಇದಕ್ಕೆ ಪುಡಿಮಾಡಿದ ಮಸಾಲೆಯನ್ನು ಹಾಗೂ ತೆಂಗಿನ ತುರಿಯನ್ನು ಹಾಕಿ ಮಿಕ್ಸ್ ಮಾಡಿ.
ಆಮೇಲೆ ಒಗ್ಗರಣೆಗೆ ತಯಾರಿಸಿ (ಒಗ್ಗರಣೆಗೆ: ಎಣ್ಣೆ ಬಿಸಿಯಾದ ಮೇಲೆ ಸಾಸಿವೆ, ಬೆಳ್ಳುಳ್ಳಿ, ಕೆಂಪು ಮೆಣಸು-2, ಕರಿಬೇವು ಹಾಕಿ.) ನಂತರ ಅದಕ್ಕೆ ಪಲ್ಯವನ್ನು ಹಾಕಿ ಚೆನ್ನಾಗಿ ಕೆದಕಿರಿ. ಈಗ ಸ್ಪೆಷಲ್ ಚಗಟೆ ಸೊಪ್ಪಿನ ಪಲ್ಯ ರೆಡಿ.
ಇದನ್ನು ನಾವು ಅನ್ನ ಇಲ್ಲದೆ ಬರೀ ಪಲ್ಯವನ್ನು ಕೂಡ ತಿನ್ನಬಹುದು. ಬಹಳ ರುಚಿಕರವಾಗಿರುತ್ತದೆ ಹಾಗೂ ಇದು ಆರೋಗ್ಯಕ್ಕೂ ಸಹ ಬಹಳ ಒಳ್ಳೆಯದು.
ಬಿ. ಶಕುಂತಲಾ