ಬೆಂಗಳೂರು: ಮಕ್ಕಳನ್ನು ಮನೆಗೆ ಕರೆದೊಯ್ದ ಪೋಷಕರು, ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ

ಬೆಂಗಳೂರು: ನಗರದ 15 ಶಾಲೆಗಳ ಆಡಳಿತ ಮಂಡಳಿಯ ಇ-ಮೇಲ್​ಗೆ ಬೆದರಿಕೆ ಸಂದೇಶಗಳು ಬಂದಿವೆ.ರಾಜಧಾನಿ ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ದುಷ್ಕರ್ಮಿಗಳು ಇಂದು ಬೆದರಿಕೆ ಹಾಕಿದ್ದಾರೆ. ನಗರದ ಕೆಲವು ಶಾಲೆಗಳಿಗೆ ಇಂದು ಬೆಳಗ್ಗೆ ಇಮೇಲ್ ಮೂಲಕ ‘ಬಾಂಬ್ ಬೆದರಿಕೆ’ ಕರೆಗಳನ್ನು ಕಳುಹಿಸಲಾಗಿದೆ. ಈ ಬಗ್ಗೆ ನಮ್ಮ ಬಾಂಬ್ ಪತ್ತೆ ದಳದವರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಈವರೆಗಿನ ತಪಾಸಣೆಯಿಂದ ಇವು ಸುಳ್ಳು ಕರೆಗಳೆಂದು ಕಂಡುಬರುತ್ತಿದೆ. ಆದಾಗ್ಯೂ ಇಮೇಲ್ ಕಳುಹಿಸಿದ ವ್ಯಕ್ತಿಗಳ ಪತ್ತೆಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ನಗರ […]

ಸಿಎಂ ಸಿದ್ದರಾಮಯ್ಯ : ಮುಂದಿನ ಐದು ವರ್ಷಗಳಲ್ಲಿ ಭಾರತ, ಕರ್ನಾಟಕ ಏಡ್ಸ್ ಮುಕ್ತವಾಗಲಿ

ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನ 2023 ಮತ್ತು 25ನೇ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, “ಇಂದು ವಿಶ್ವ ಏಡ್ಸ್ ದಿನ. ಈ ಸಾಂಕ್ರಾಮಿಕ ರೋಗ ತಡೆಯುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ರೋಗ 1986ರಲ್ಲಿ ಭಾರತದಲ್ಲಿ ಹಾಗೂ 1987ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಗಿತ್ತು” ಎಂದರು.”ಮುಂದಿನ ಐದು ವರ್ಷಗಳಲ್ಲಿ ಭಾರತ ಹಾಗೂ ಕರ್ನಾಟಕ ಏಡ್ಸ್ ಮುಕ್ತ ದೇಶ, ರಾಜ್ಯ ಆಗಲಿ. ಈ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾಗಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಏಡ್ಸ್ […]

ಚಿತ್ರೀಕರಣದ ವೇಳೆ ಕ್ವಾರಿಗೆ ಬಿದ್ದು ನಟ ಮಂಡ್ಯ ರಮೇಶ್ ಮೂಳೆ ಮುರಿತ: ಆಸ್ಪತ್ರೆಯಲ್ಲಿ ಚೇತರಿಕೆ

ಬೆಂಗಳೂರು: ಖಾಸಗಿ ಚಾನಲ್ ಒಂದರ ಧಾರಾವಾಹಿ ಚಿತ್ರೀಕರಣದ ವೇಳೆಯಲ್ಲಿ ಹಿರಿಯ ನಟ ಮಂಡ್ಯ ರಮೇಶ್ ಕಾಲು ಜಾರಿ ಬಿದ್ದಿದ್ದು, ತೀವ್ರ ಗಾಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಧಾರಾವಾಹಿ ಚಿತ್ರೀಕರಣದ ವೇಳೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣಲಿರುವ ಹೊಸ ಧಾರಾವಾಹಿ ‘ಆಸೆ’ ಶೂಟಿಂಗ್ ವೇಳೆ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಮೇಶ್ ಕಾಲು ಜಾರಿ ಬಿದ್ದಿದ್ದಾರೆ. ಘಟನೆಯಲ್ಲಿ ನಟ […]

ನಂದೇಶ್ವರ: ಸಂಸ್ಕೃತ ಭಾಷೆ ಮಾತನಾಡಿ ದೇಶದ ಗಮನ ಸೆಳೆದ ನಂದೇಶ್ವರ ಗ್ರಾಮ

ಚಿಕ್ಕೋಡಿ : ಭಾರತ ದೇಶದ ಪರಂಪರೆಯಲ್ಲಿ ಮಠ – ಮಂದಿರಗಳು ತನ್ನದೇ ಆದಂತಹ ಪ್ರಮುಖ ಪಾತ್ರ ವಹಿಸಿವೆ. ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಸಮಾಜಕ್ಕೆ ಕೊಡುಗೆಗಳನ್ನು ನೀಡಿ, ತನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಶಿಕ್ಷಣ, ಅನ್ನದಾಸೋಹ, ಸಂಸ್ಕೃತಿ, ಉತ್ತಮ ವಿಚಾರಧಾರೆ, ಭಕ್ತಿ ಭಂಡಾರಗಳನ್ನು ಸಾರುತ್ತ ಮಠಗಳ ಚಾರಿತ್ರ್ಯವನ್ನು ಇತಿಹಾಸ ಪುಟಗಳಲ್ಲಿ ಉಳಿಯುವಂತೆ ಹಲವು ಮಠಾಧೀಶರು ಕೂಡಾ ಕಾರ್ಯ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಜನರ ದೈನಂದಿನ ವ್ಯವಹಾರ ಸಂಸ್ಕೃತದಲ್ಲಿಯೇ ನಡೆಯುತ್ತಿದೆ. ಆಧುನಿಕ ಯುಗದಲ್ಲಿ ಹಲವು ಮಠಾಧೀಶರುಗಳ ನಡುವೆ […]

ದಕ್ಷಿಣ ಕನ್ನಡ: ಪುತ್ತೂರು ಪ್ರವೇಶಿಸಿದ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮಂದಿರದ ಅಕ್ಷತೆ

ಪುತ್ತೂರು(ದಕ್ಷಿಣ ಕನ್ನಡ): ರಥ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿ ಮೂಲಕ ಆಗಮಿಸಿತುಶ್ರೀ ರಾಮನ ಪ್ರತಿಷ್ಠಾಪನೆ ಮಹೋತ್ಸವದ ಹಿನ್ನೆಲೆ ಅಯೋಧ್ಯೆಯಿಂದ ಅಕ್ಷತೆ ಹೊತ್ತ ರಥ ಪುತ್ತೂರಿಗೆ ಆಗಮಿಸಿದೆ. ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಮಂದಿರದಲ್ಲಿ ಜ.22 ರಂದು ನಡೆಯಲಿರುವ ಶ್ರೀ ರಾಮನ ಪ್ರತಿಷ್ಠಾಪನೆ ಮಹೋತ್ಸವದ ಹಿನ್ನೆಲೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ದೇಶಾದ್ಯಂತ ಏಕಕಾಲದಲ್ಲಿ ನಡೆಯುತ್ತಿರುವ ಅಕ್ಷತೆ ವಿತರಣೆ ಕಾರ್ಯಕ್ರಮದ ಭಾಗವಾಗಿ ಅಯೋಧ್ಯೆಯಿಂದ ಅಕ್ಷತೆ ಹೊತ್ತ ರಥ ಇಂದು ಪುತ್ತೂರನ್ನು ಪ್ರವೇಶಿಸಿದೆ. ರಾಮದೇವರ ಪ್ರತಿಷ್ಠಾಪನೆಯ ದಿನ […]