ಶಿಶು ಆಹಾರದಲ್ಲೂ ‘ಮಿಸ್‌ ಬ್ರ್ಯಾಂಡಿಂಗ್’! ಈ ಆಹಾರ ಮಕ್ಕಳಿಗೆ ಕೊಡುವ ಮೊದಲು ಎಚ್ಚರ, ಬೆಂಗಳೂರಿನ ಬ್ರಿಟೀಷ್ ಲೈಫ್‌ಸೈನ್ಸ್‌ಗೆ FSSAI ಶಾಕ್

ಬೆಂಗಳೂರು: ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಇದೀಗ ಶಿಶು ಆಹಾರ ಉತ್ಪನ್ನಗಳ ಮೇಲೂ ನಿಗಾ ವಹಿಸಿದೆ. ಬೆಂಗಳೂರಿನ M/s British Lifesciences Pvt. Ltd. ಸಂಸ್ಥೆಯಲ್ಲಿ ನಡೆದ ತಪಾಸಣೆ ವೇಳೆ ಮಿಸ್‌ಬ್ರಾಂಡೆಡ್‌ (Misbranded) ಶಿಶು ಆಹಾರ ಉತ್ಪನ್ನಗಳು ಪತ್ತೆಯಾಗಿದ್ದು, ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಿಶು ಆಹಾರ ವಶಕ್ಕೆ ಶಿಶು ಆಹಾರ ಉತ್ಪನ್ನಗಳ ಸುರಕ್ಷತೆ ಹಾಗೂ ಲೇಬಲಿಂಗ್‌ ನಿಯಮಗಳ ಪಾಲನೆ […]

Indigo Flight: ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲೇ ಪೈಲಟ್‌ ಅಸ್ವಸ್ಥ ಫ್ಲೈಟ್​ ತುರ್ತು ಭೂಸ್ಪರ್ಶ

ವಿಮಾನ ನಿಲ್ದಾಣದಿಂದ ಟೇಕ್​ ಆಫ್​ ಆಗಿ ಕೆಲ ದೂರ ಕ್ರಮಿಸಿದ ಬಳಿ ಪೈಲಟ್-ಇನ್-ಕಮಾಂಡ್ ಅಸ್ವಸ್ಥರಾಗಿದ್ದರು. ಓಮನ್ (ಸೆ.03): ದೋಹಾದಿಂದ ಬೆಂಗಳೂರಿಗೆ (Bengaluru) ಬರುತ್ತಿದ್ದ ಇಂಡಿಗೋ 6E 1302 ವಿಮಾನ ಹಾರಾಟ ಮಾಡುತ್ತಿರುವಾಗಲೇ ಪೈಲಟ್‌ಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಪೈಲಟ್​ ದಿಢೀರ್​ ಅಸ್ವಸ್ಥಗೊಂಡಿದ್ದು,  ಎಚ್ಚತ್ತೆ ಟೀಮ್​​ ಕೂಡಲೇ ವಿಮಾನವನ್ನು ಮಸ್ಕತ್‌ಗೆ ತಿರುಗಿಸಿ (Muscat) ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದಿಂದ ಟೇಕ್​ ಆಫ್​ ಆಗಿ ಕೆಲ ದೂರ ಕ್ರಮಿಸಿದ ಬಳಿ ಪೈಲಟ್-ಇನ್-ಕಮಾಂಡ್ ಅಸ್ವಸ್ಥರಾಗಿದ್ದರು. ಅವರಿಗೆ ತಕ್ಷಣ […]

Darshan: ದರ್ಶನ್​ಗೆ ಡಬಲ್ ಶಾಕ್! ದಾಸನಿಂದ ದೂರ ದೂರ ಅಂತಿರೋ ಡಿಗ್ಯಾಂಗ್, ಚಿತ್ರದುರ್ಗ ಜೈಲಿಗೆ ಶಿಫ್ಟ್

ದಾಸನ ಬಿಡುತ್ತಿಲ್ಲ ಸಂಕಷ್ಟ! ಮಾಫಿ ಸಾಕ್ಷಿ ಶಾಕ್ ನಂತರ ದರ್ಶನ್​ಗೆ ಈಗ ಡಬಲ್ ಶಾಕ್, ಅಷ್ಟಕ್ಕೂ ಆಗಿದ್ದೇನು ಈಗಾಗಲೇ ಮಾಫಿ ಸಾಕ್ಷಿ (Approver) ಶಾಕ್​​ನಲ್ಲಿರುವ ದರ್ಶನ್​ಗೆ ಇನ್ನೊಂದು ಶಾಕ್ ಸಿಕ್ಕಿದೆ. ಚಿತ್ರದುರ್ಗದ  (Chitradurga) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ  (Renukaswamy Case) ಸಂಬಂಧಿಸಿದಂತೆ ಈಗಾಗಲೇ ಸಮಸ್ಯೆಯಲ್ಲಿರುವ ದರ್ಶನ್​ಗೆ ಪ್ರದೋಷ್​ನ (Pradosh) ಮಾಫಿ ಸಾಕ್ಷಿ ಟ್ವಿಸ್ಟ್ ದೊಡ್ಡ ತಲೆನೋವಾಗಿದೆ. ಇನ್ನೇನು ಹೇಳಿಕೆ ದಾಖಲಿಸಬೇಕು ಎನ್ನುವಷ್ಟರಲ್ಲಿ ಹೇಗೋ ಹೈಕೋರ್ಟ್ ಮೊರೆ ಹೋಗಿ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲು ಸದ್ಯ ಮುಂದೂಡಲಾಗಿದೆ. […]

ಕೆಪಿಎಸ್ಸಿ ಪರೀಕ್ಷಾ ಹಗರಣ: ಡಿಗ್ರಿಯಲ್ಲಿ ಎರೆಡೆರಡು ಬಾರಿ ಫೇಲ್, ಆದ್ರೆ ಪಶುವೈದ್ಯಾಧಿಕಾರಿ ಪರೀಕ್ಷೆಯಲ್ಲಿ ಟಾಪ್‌ !

ಬೆಂಗಳೂರು: ಡಿಗ್ರಿಯಲ್ಲಿ ಎರೆಡೆರಡು ಬಾರಿ ಫೇಲ್ ಆಗಿದ್ದ ಅಭ್ಯರ್ಥಿಯೊಬ್ಬ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ (Veterinary Recruitment Scam) ಡಿಸ್ಟಿಂಕ್ಷನ್‌ನಲ್ಲಿ ಪಾಸ್‌ ಆಗಿದ್ದು ತನಿಖೆ ನಡೆಸುತ್ತಿರುವ ಅಧಿಕಾರಿಗಳೇ ಸುಸ್ತಾಗಿದ್ದಾರೆ. ವೆಟರ್ನರಿ ಡಿಗ್ರಿಯಲ್ಲಿ ಅಭ್ಯರ್ಥಿ ಸುಗರೇಶ್ ಜಾಕ್ ಎರೆಡೆರಡು ಬಾರಿ ಫೇಲ್‌ ಆಗಿದ್ದ. ಆದರೆ ಪಶುವೈದ್ಯಾಧಿಕಾರಿ ಪರೀಕ್ಷೆಯಲ್ಲಿ ಟಾಪ್‌ 2ನಲ್ಲಿ ರ‍್ಯಾಂಕಿಂಗ್ ಬಂದಿದ್ದ. ಸುಗುರೇಶ್ ಎಕ್ಸಾಂ ಮಿರಾಕಲ್‌ಗೆ ಸಿಐಡಿ (CID) ಅಧಿಕಾರಿಗಳು ದಂಗಾಗಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರಣರಾದವರೇ 350 ಅಂಕ ದಾಟಿಲ್ಲ. ಸುಗುರೇಶ್ ಮಾತ್ರ ರ‍್ಯಾಂಕ್‌ ಬಂದಿರೋದು ಅಚ್ಚರಿಗೆ ಕಾರಣವಾಗಿದೆ. ʻ […]

ಕಾಲೇಜು ವಿದ್ಯಾರ್ಥಿ ಅಪಹರಣ, ಹಲ್ಲೆ ಆರೋಪ: ಖ್ಯಾತ ನಟ ದುನಿಯಾ ವಿಜಯ್ ಪುತ್ರನ ವಿರುದ್ಧ ಎಫ್‌ಐಆರ್

ಬೆಂಗಳೂರು: ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಕಾರಿನಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪದಡಿ ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಲ್ಲೆಗೊಳಗಾದ ಮನೀಶ್ ಗೌಡ ನೀಡಿದ ದೂರಿನ ಆಧಾರದ ಮೇಲೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಮ್ರಾಟ್ ವಿಜಯ್ ಸೇರಿದಂತೆ ಸಮೃದ್ಧ್ ಸಿಂಹ, ವಿಶ್ವಾಸ್ ಸುಚಿ, ಸ್ಕಂದ ವೆಂಕಟೇಶ್ ಹಾಗೂ ಸಮೀದ್ ವಿರುದ್ಧ ವಿವಿಧ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ಏನಿದು ಪ್ರಕರಣ? ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ […]