ರಾಮನ ಅಸ್ತಿತ್ವ ಪ್ರಶ್ನಿಸಿದ ಡಿಎಂಕೆ ನಾಯಕ ಎಂ ಕರುಣಾನಿಧಿ ತವರೂರಿನಲ್ಲೇ ಶತಮಾನ ಹಳೆಯ ಕೋದಂಡ ರಾಮನ ವಿಗ್ರಹ ಪತ್ತೆ!!

ಚೆನ್ನೈ: ಡಿಎಂಕೆ ನಾಯಕ ಎಂ ಕರುಣಾನಿಧಿ ಅವರ ತವರೂರು ತಿರುವರೂರಿನಲ್ಲಿ ಮನೆ ನಿರ್ಮಾಣ ಕಾಮಗಾರಿಗಾಗಿ ಉತ್ಖನನದ ಸಂದರ್ಭದಲ್ಲಿ ಪತ್ತೆಯಾದ ಶತಮಾನಗಳಷ್ಟು ಹಳೆಯದಾದ ಕೋದಂಡ ರಾಮನ ವಿಗ್ರಹದ ದೃಶ್ಯಗಳು ಹೊರಹೊಮ್ಮಿವೆ. ಈ ಉತ್ಖನನವು ದ್ರಾವಿಡ, ಎಡಪಂಥೀಯ ಮತ್ತು ಇತರ ರಾಜಕೀಯ ಬಣಗಳ ರಾಮ ಕೇವಲ ಉತ್ತರ ಭಾರತಕ್ಕೆ ಸಂಬಂಧಿಸಿದ ಪೌರಾಣಿಕ ವ್ಯಕ್ತಿ ಎನ್ನುವ ನಿರಂತರ ಪ್ರತಿಪಾದನೆಗಳನ್ನು ಪ್ರಶ್ನಿಸುತ್ತಿದೆ. ಈ ಘಟನೆಯ ನಂತರ ತಿರುವರೂರು ಜಿಲ್ಲೆಯ ಪೆರುಮಾಲಕರಂ ಗ್ರಾಮವು ಇದ್ದಕ್ಕಿದ್ದಂತೆ ಜನರ ಗಮನ ಸೆಳೆದಿದೆ. ಸ್ಥಳೀಯ ಹೂವಿನ ಅಂಗಡಿ ಮಾಲೀಕ […]

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರಿನ ಇಬ್ಬರನ್ನು ವಶಕ್ಕೆ ಪಡೆದ ಎನ್‌ಐಎ

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಬ್ಬರು ಶಂಕಿತರನ್ನು ಬಂಧಿಸಿದೆ ಎಂದು ಮೂಲಗಳು ಮಂಗಳವಾರ ಖಚಿತಪಡಿಸಿವೆ. ಈ ಇಬ್ಬರು ಶಂಕಿತರು ಶಂಕಿತ ಬಾಂಬರ್‌ನೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಎನ್‌ಐಎ ಅಧಿಕಾರಿಗಳು ಶಂಕಿತರನ್ನು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕರೆದೊಯ್ದಿದ್ದಾರೆ. ಆದರೆ, ಈ ಬಗ್ಗೆ ಎನ್‌ಐಎ ಇನ್ನಷ್ಟೇ ಹೇಳಿಕೆ ನೀಡಬೇಕಿದೆ. ತನಿಖಾ ಸಂಸ್ಥೆಗಳು, ಎನ್‌ಐಎ ಮತ್ತು ರಾಜ್ಯ ವಿಶೇಷ ವಿಭಾಗದ ಸಿಸಿಬಿ ತಂಡಗಳು ವಿವಿಧ ರಾಜ್ಯಗಳಲ್ಲಿ ವ್ಯಾಪಕ ಶೋಧ […]

ವ್ಯಾಪಾರ ಗತಿಶೀಲತೆ ಮತ್ತು ಸುಸ್ಥಿರ ಅಭಿವೃದ್ಧಿಯ 5 ನೇ ಅಂತರರಾಷ್ಟ್ರೀಯ ಸಮ್ಮೇಳನ

ಬೆಂಗಳೂರು: ವ್ಯಾಪಾರ ಗತಿಶೀಲತೆ ಮತ್ತು ಸುಸ್ಥಿರ ಅಭಿವೃದ್ಧಿಯ (ICBD 5.0) ಕುರಿತಾದ 5 ನೇ ಅಂತರರಾಷ್ಟ್ರೀಯ ಸಮ್ಮೇಳನವು ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಬ್ಯುಸಿನೆಸ್‌ನ ಪ್ರಮುಖ ಕಾರ್ಯಕ್ರಮವಾಗಿದ್ದು, ಮಾರ್ಚ್ 14 ರಂದು ಆಯೋಜಿಸಲಾಗಿತ್ತು. ಈ ಸಮ್ಮೇಳನವನ್ನು ಮೈಲ್ಸ್ ಎಜುಕೇಶನ್, ಟೈಟಾನ್, ಎಲ್.ಟಿ.ಐ.ಮೈಂಡ್ ಟ್ರೀ ಮತ್ತು ವರ್ಟೆಕ್ಸ್ ವೆಂಚರ್ಸ್ ಪ್ರಾಯೋಜಿಸಿದೆ. ವಿವಿಧ ಸಂಸ್ಥೆಗಳ ಒಟ್ಟು 60 ಸಂಶೋಧನಾ ಪ್ರಬಂಧ ನಿರೂಪಕರು, ಶಿಕ್ಷಣತಜ್ಞರು, ಸಂಶೋಧನಾ ವಿದ್ವಾಂಸರು, ಉದ್ಯಮ ವೃತ್ತಿಪರರು, ವಿಶ್ವದಾದ್ಯಂತ ಉನ್ನತ ಶಿಕ್ಷಣದ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. […]

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ: ಕ್ಯಾಪ್ ನಿಂದ ದೊರೆಯಿತೇ ಆರೋಪಿಯ ಸುಳಿವು?

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಗೆ (NIA) ಸ್ಫೋಟಕ ಮಾಹಿತಿ ದೊರೆತಿದ್ದು, ಆರೋಪಿಗೂ ಚೆನ್ನೈಗೂ ಸಂಬಂಧ ಇದೆ ಎನ್ನಲಾಗಿದೆ. ಸ್ಫೋಟದಿಂದ ಕೆಲ ದೂರದಲ್ಲಿ ಶಂಕಿತ ಆರೋಪಿ ತನ್ನ ಕ್ಯಾಪ್ ಬಿಟ್ಟು ಹೋಗಿದ್ದು, ಪೊಲೀಸರು ಈ ಕ್ಯಾಪ್‌ ಮೂಲವನ್ನು ಬೇಧಿಸಿದ್ದಾರೆ. ಇದನ್ನು ಆತ ಚೆನ್ನೈನ ಮಾಲ್‌ ಒಂದರಲ್ಲಿ ಖರೀದಿ ಮಾಡಿದ್ದ ಎನ್ನುವ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ ಎನ್ನಲಾಗಿದೆ. ಚೆನ್ನೈನ ಮಾಲ್‌ನಲ್ಲಿ ಶಂಕಿತ ಟೋಪಿ ಖರೀದಿಸುತ್ತಿದ್ದ ವೇಳೆ ಆತನ ಜೊತೆ ಮತ್ತೊಬ್ಬ […]

5, 8, 9,11 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅಸ್ತು: ಸೋಮವಾರದಿಂದ ಪರೀಕ್ಷೆ ಸಾಧ್ಯತೆ

ಬೆಂಗಳೂರು: ರಾಜ್ಯದ 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆ (Board Exams) ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್(Karnataka High Court) ವಿಭಾಗೀಯ ಪೀಠ ತೀರ್ಪು ಪ್ರಕಟಿಸಿದೆ. 5, 8, 9,11 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ. ಸ್ಥಗಿತಗೊಂಡಿದ್ದ ಪರೀಕ್ಷೆ ಮುಂದುವರೆಸಲು ಹೈಕೋರ್ಟ್ ಆದೇಶ ಹೊರಡಿಸಿದೆ. ಮುಂದಿನ ಪರೀಕ್ಷೆಯ ವೇಳೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಲು ಹೈಕೋರ್ಟ್ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ನ್ಯಾ. ಕೆ. ಸೋಮಶೇಖರ್, ನ್ಯಾ. ಕೆ. ರಾಜೇಶ್ ರೈ […]