ಮುಷ್ಕರ ಹಿಂಪಡೆಯಲು‌ ಸಾರಿಗೆ ನೌಕರರು ನಿರ್ಧಾರ: ಮಧ್ಯಾಹ್ನ ಸರ್ಕಾರಿ ಬಸ್ ಗಳು ರಸ್ತೆಗಿಳಿಯುವ ಸಾಧ್ಯತೆ

ಬೆಂಗಳೂರು: ದಿಢೀರ್ ನಡೆದ ಬೆಳವಣಿಗೆಯಿಂದಾಗಿ ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಹಿಂಪಡೆಯಲು ನಿರ್ಧರಿಸಿದ್ದಾರೆ. ಅಧಿಕೃತ ಘೋಷಣೆ ಮಾಡಲು ಮಾತ್ರ ಬಾಕಿ ಇದೆ. ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿದ್ದರು. ಭಾನುವಾರ ಸಂಜೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ್ ಸಹಿತ ಇತರ ಸಚಿವರೊಂದಿಗೆ ಸಾರಿಗೆ ನೌಕರರ ಮುಖಂಡರು ನಡೆಸಿದ ಸಭೆ ವಿಫಲಗೊಂಡಿತ್ತು. ಅಲ್ಲದೆ, ಸೋಮವಾರ […]

ತಮಿಳು ನೆಲದಲ್ಲಿ ರಾಮಾಯಣದ ಭವ್ಯ ಹೆಗ್ಗುರುತುಗಳಿವೆ; ಸಮಸ್ತ ತಮಿಳರು ಮಂದಿರ ನಿರ್ಮಾಣಕ್ಕಾಗಿ ಕೈಜೋಡಿಸಬೇಕು: ಪೇಜಾವರ ಶ್ರೀ ಕರೆ

ಚೆನ್ನೈ: ತಮಿಳು ನೆಲ, ಭಾಷೆ, ಸಂಸ್ಕೃತಿಯಲ್ಲೂ ರಾಮಾಯಣದ ಸಂದೇಶ ಹಾಗೂ ಮೌಲ್ಯಗಳು ಸಮೃದ್ಧವಾಗಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿವೆ. ಕಂಬ ರಾಮಾಯಣದಂಥ ಸಾಹಿತ್ಯ ಕೃತಿಗಳು, ಭರತನಾಟ್ಯ ದಂಥ ಶಿಷ್ಟ ಕಲೆ ಹಾಗೂ ಇಲ್ಲಿನ ಜನಪದೀಯ ಸಂಸ್ಕೃತಿಯಲ್ಲೂ ರಾಮಾಯಣದ ಹೆಗ್ಗುರುತುಗಳು ಸಮೃದ್ಧವಾಗಿ ಕಾಣಿಸುತ್ತಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ ಧನಿಷ್ಕೋಟಿ, ರಾಮಸೇತು, ರಾಮೇಶ್ವರದಂಥಹ ಪವಿತ್ರ ಸ್ಥಳಗಳು ತಮಿಳು ನೆಲದಲ್ಲೇ ಇರುವುದಂತೂ ರಾಮಾಯಣದೊಂದಿಗೆ ತಮಿಳಿನ ನಂಟಿಗೆ ಶ್ರೇಷ್ಠ ಸಾಕ್ಷಿಗಳಾಗಿವೆ ಎಂದು ಅಯೋಧ್ಯೆ ಶ್ರೀ ರಾಮಮಂದಿರ ತೀರ್ಥಕ್ಷೇತ್ರ ನಿರ್ಮಾಣ ಟ್ರಸ್ಟ್ ನ ಟ್ರಸ್ಟಿಯೂ ಆಗಿರುವ […]

ಮರಗಳ್ಳರಿಗೆ, ಕಾಡು ದೋಚುವವರಿಗೆ ಸಿಂಹಸ್ವಪ್ನರಾಗಿರುವ ದಕ್ಷ ಅರಣ್ಯಾಧಿಕಾರಿ ಮುನಿರಾಜ್ ಅವರಿಗೆ ಮುಖ್ಯಮಂತ್ರಿ ಪದಕ

ಬೆಂಗಳೂರು: 2018-19 ಸಾಲಿನ ಅರಣ್ಯ ಸಂರಕ್ಷಣೆ ವಿಭಾಗದಲ್ಲಿ  ಮುಖ್ಯಮಂತ್ರಿ ಪದಕವನ್ನು ದಕ್ಷ ಅರಣ್ಯಾಧಿಕಾರಿ, ಈ ಹಿಂದೆ ಹೆಬ್ರಿ ಅರಣ್ಯಾಧಿಕಾರಿಯಾಗಿ ಮರಗಳ್ಳರಿಗೆ ಸಿಂಹಸ್ವಪ್ನರಾಗಿದ್ದ ಮುನಿರಾಜ್ ಅವರಿಗೆ ನೀಡಲಾಗಿದೆ. ಶಿರಸಿ ಸಮೀಪದ ಅರಣ್ಯ ಇಲಾಖೆಯ ವ್ಯಾಪ್ತಿಯ 500 ಎಕರೆ ಒತ್ತುವರಿ ತೆರವು, ದೊಡ್ಡಬಳ್ಳಾಪುರ 400 ಎಕರೆ ಜಾಗವನ್ನು ಒತ್ತುವರಿ ತೆರವುಗೊಳಿಸಿ ಭ್ರಷ್ಟ ರಾಜಕಾರಣಿಗಳಿಗೆ, ಮರಗಳ್ಳರಿಗೆ  ಸಿಂಹಸ್ವಪ್ನವಾಗಿ ಕಾಡುತ್ತಿದ್ದವರು ಮುನಿರಾಜ್.ಇದೀಗ ಈ ದಕ್ಷ ಅಧಿಕಾರಿಯ ಸಾಧನೆ ಗುರುತಿಸಿ ಮುಖ್ಯಮಂತ್ರಿ ಪದಕವನ್ನು ಅರಣ್ಯ ಅಧಿಕಾರಿಗೆ ಮೊದಲನೆಯ ಬಾರಿ ನೀಡಲಾಗಿದೆ. ವಿಧಾನ ಸೌದದ ಬಾಂಕ್ವೆಟ್ […]

ಯುವ ಜನತೆಗೆ ಓದುವ ಹುಚ್ಚು ಹತ್ತಿಸಿದ ರವಿ ಬೆಳಗೆರೆ ಇನ್ನಿಲ್ಲ

ಬೆಂಗಳೂರು: ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರು ಟ್ಯಾಬ್ಲಾಯ್ಡ್ ನ ನ ಸ್ಥಾಪಕ ರವಿ ಬೆಳೆಗೆರೆ (62)  ಶುಕ್ರವಾರ ಮಧ್ಯರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಳಗೆರೆ ಅಕ್ಷರ ಮಾಂತ್ರಿಕ ಎಂದೇ ಖ್ಯಾತರಾಗಿದ್ದರು.ಈ ಕಾಲದ ಯುವಜನತೆಯ ಮೆಚ್ಚಿನ ಲೇಖಕರಾಗಿದ್ದರು. 1958 ರ ಮಾರ್ಚ್ 15 ರಂದು ಬಳ್ಳಾರಿಯಲ್ಲಿ ಜನಿಸಿದ್ದ ರವಿ ಬೆಳೆಗೆರೆ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ನಂತರ ಪತ್ರಿಕೋದ್ಯಮ ವೃತ್ತಿ ಪ್ರಾರಂಭಿಸಿದ್ದ ಅವರು, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ […]

ಕುತಂತ್ರ, ಬೆದರಿಕೆಗಳಿಗೆ ಹೆದರುವ ಮಗನೇ ಅಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: “ರಾಜಕೀಯ ಕುತಂತ್ರಕ್ಕೆ ಈ ಡಿ.ಕೆ. ಶಿವಕುಮಾರ್ ಹೆದರುವ ಮಗನೇ ಅಲ್ಲ. ಯಾವುದೇ ಒತ್ತಡಕ್ಕೆ ಹೆದರುವ ಮಗ ಅಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಇಂದು ಸಿಬಿಐ ತನಿಖೆ ಅಂತ್ಯಗೊಂಡ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 30 ವರ್ಷದ ರಾಜಕಾರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. 2017ರಲ್ಲಿ ಗುಜರಾತ್ ಚುನಾವಣೆ ವೇಳೆ ಐಟಿ ಪ್ರಕರಣ ದಾಖಲಿಸಿತು. 2019ರಲ್ಲಿ ಇಡಿ ಕೇಸ್ ಹಾಕಿ ಜೈಲಿಗೆ ಕಳುಹಿಸಿದರು. ಇದೀಗ 2020ರಲ್ಲಿ ಮತ್ತೆ ಸಿಬಿಐ […]