ಮರಗಳ್ಳರಿಗೆ, ಕಾಡು ದೋಚುವವರಿಗೆ ಸಿಂಹಸ್ವಪ್ನರಾಗಿರುವ ದಕ್ಷ ಅರಣ್ಯಾಧಿಕಾರಿ ಮುನಿರಾಜ್ ಅವರಿಗೆ ಮುಖ್ಯಮಂತ್ರಿ ಪದಕ

ಬೆಂಗಳೂರು: 2018-19 ಸಾಲಿನ ಅರಣ್ಯ ಸಂರಕ್ಷಣೆ ವಿಭಾಗದಲ್ಲಿ  ಮುಖ್ಯಮಂತ್ರಿ ಪದಕವನ್ನು ದಕ್ಷ ಅರಣ್ಯಾಧಿಕಾರಿ, ಈ ಹಿಂದೆ ಹೆಬ್ರಿ ಅರಣ್ಯಾಧಿಕಾರಿಯಾಗಿ ಮರಗಳ್ಳರಿಗೆ ಸಿಂಹಸ್ವಪ್ನರಾಗಿದ್ದ ಮುನಿರಾಜ್ ಅವರಿಗೆ ನೀಡಲಾಗಿದೆ.

ಶಿರಸಿ ಸಮೀಪದ ಅರಣ್ಯ ಇಲಾಖೆಯ ವ್ಯಾಪ್ತಿಯ 500 ಎಕರೆ ಒತ್ತುವರಿ ತೆರವು, ದೊಡ್ಡಬಳ್ಳಾಪುರ 400 ಎಕರೆ ಜಾಗವನ್ನು ಒತ್ತುವರಿ ತೆರವುಗೊಳಿಸಿ ಭ್ರಷ್ಟ ರಾಜಕಾರಣಿಗಳಿಗೆ, ಮರಗಳ್ಳರಿಗೆ  ಸಿಂಹಸ್ವಪ್ನವಾಗಿ ಕಾಡುತ್ತಿದ್ದವರು ಮುನಿರಾಜ್.ಇದೀಗ ಈ ದಕ್ಷ ಅಧಿಕಾರಿಯ ಸಾಧನೆ ಗುರುತಿಸಿ ಮುಖ್ಯಮಂತ್ರಿ ಪದಕವನ್ನು ಅರಣ್ಯ ಅಧಿಕಾರಿಗೆ ಮೊದಲನೆಯ ಬಾರಿ ನೀಡಲಾಗಿದೆ.

ವಿಧಾನ ಸೌದದ ಬಾಂಕ್ವೆಟ್ ಹಾಲ್ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮುನಿರಾಜ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

16 ವರ್ಷಗಳ ಕಾಲ ಸೇವೆ ಸಲ್ಲಿಸಿ ದಕ್ಷ ಅಧಿಕಾರಿಯಾದ ಮುನಿರಾಜ್ ಅವರು, ಕೋಲಾರ ಚಿಂತಾಮಣಿ , ಹೆಬ್ರಿ , ಹುಲೈಕಲ್, ಹಿರೆಗುತ್ತಿ , ಶಿರಸಿ ಮೊದಲಾದೆಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಆದರೆ ಅಧಿಕಾರಿಯ ಕಾರ್ಯ ದಕ್ಷತೆ ಮತ್ತು ಕರ್ತವ್ಯ ನಿಷ್ಠೆಗೆ ಬೆಲೆ ಕೊಡದ ರಾಜಕಾರಣಿಗಳು ಇವರನ್ನು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಕಳೆದ 17 ವರ್ಷದ ಅವಧಿಯಲ್ಲಿ 16 ಬಾರಿ ವಿವಿಧ ಪ್ರದೇಶಗಳಿಂದ ವರ್ಗಾವಣೆ ಮಾಡಿದ್ದಾರೆ. ಹೆಬ್ರಿಯಲ್ಲಿಯೂ ರಾಜಕಾರಣಿಗಳು ಇವರಿಗೆ ಬೆಂಬಲ ನೀಡದೇ ಅಲ್ಲಿಂದ ಇವರನ್ನು ವರ್ಗಾವಣೆಗೊಳ್ಳಲು ಸಹಕರಿಸಿದ್ದರು. ಈ ಕುರಿತು ಉಡುಪಿXPRESS ಬಹಳಷ್ಟು ಸಲ ವರದಿ ಮಾಡಿತ್ತು. ಇದೀಗ ದಕ್ಷ ಅಧಿಕಾರಿಗೆ ಪದಕ ದೊರಕಿದೆ.ಅವರಿಗೆ ಇನ್ನಷ್ಟು ಸಾಧನೆ ಮಾಡುವಂತಾಗಲಿ,ಪ್ರಸ್ತುತ ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮುನಿರಾಜ್ ಅವರು ರಾಜ್ಯದ ಅರಣ್ಯ ಸಂರಕ್ಷಣೆಗೆ ಪ್ರಮುಖ ಪಾತ್ರ ವಹಿಸಲಿ ಅನ್ನೋದು ನಮ್ಮ ಹಾರೈಕೆ.