ಬೆಂಗಳೂರು ರಸ್ತೆಯಲ್ಲಿ ಗಂಡಾತರದ ಗುಂಡಿಗಳು: ಬಿಬಿಎಂಪಿಗೆ ಎಚ್ಚರಿಕೆ ನೀಡಿದ ರಾಜ್ಯ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಸೋಮವಾರದಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಎಚ್ಚರಿಕೆ ನೀಡಿದ್ದು, ನ್ಯಾಯಾಲಯವು ನಾಗರಿಕ ಸಂಸ್ಥೆಯ ಮೇಲೆ ಕೂಗಾಡದೆ ಇರಬಹುದು, ಅದರರ್ಥ ನಗರದಲ್ಲಿ ಗುಂಡಿಗಳನ್ನು ಮುಚ್ಚುವುದನ್ನು ಖಾತ್ರಿಪಡಿಸುವ ಬಗ್ಗೆ ಅದು ಗಂಭೀರವಾಗಿಲ್ಲ ಎಂದಲ್ಲ ಎಂದು ಹೇಳಿದೆ. ಬಿಬಿಎಂಪಿ ತನ್ನ ಕೆಲಸದ ಬಗ್ಗೆ ಪ್ರಾಮಾಣಿಕವಾಗಿ ವರ್ತಿಸುವಂತೆಯೂ ಹೈಕೋರ್ಟ್ ಹೇಳಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠವು ಬಿಬಿಎಂಪಿ ವಕೀಲರಿಗೆ, “ನೀವು ತುರ್ತು ಅವಶ್ಯಕತೆಯನ್ನು ತಿಳಿಸಿರಿ, ಈ ಪರಿಸ್ಥಿತಿಯ ಗಂಭೀರತೆ ಮತ್ತು […]

ಭಾರತ್ ಜೋಡೋ ಯಾತ್ರೆ: ರಾಜ್ಯ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ?

ಬೆಂಗಳೂರು: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 30 ರಂದು ಕರ್ನಾಟಕಕ್ಕೆ ಪ್ರವೇಶಿಸಲಿದ್ದು, ಪಕ್ಷದ ರಾಜ್ಯ ಮುಖ್ಯಸ್ಥ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಭಿನ್ನಾಭಿಪ್ರಾಯವು ರಾಜ್ಯ ಘಟಕದಲ್ಲಿನ ದೋಷಗಳನ್ನು ಮತ್ತೆ ಬಹಿರಂಗಪಡಿಸಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕದ ಉದ್ದಗಲಕ್ಕೂ 22 ದಿನಗಳ ಕಾಲ ಸಂಚರಿಸಲಿದೆ. ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಬಣಗಳು ಒಂದಾಗಲು ಹೆಣಗಾಡುತ್ತಿರುವಂತೆ ತೋರುತ್ತಿದೆ. ರಾಜ್ಯದಲ್ಲಿ ಯಾತ್ರೆಯನ್ನು […]

ರಾಜ್ಯಾದ್ಯಂತ 15 ದಿನಗಳ ಬೃಹತ್ ಆರೋಗ್ಯ ಅಭಿಯಾನ: ಸಚಿವ ಸುಧಾಕರ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಾದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2, ಗಾಂಧಿ ಜಯಂತಿಯವರೆಗೆ 15 ದಿನಗಳ ಬೃಹತ್ ಆರೋಗ್ಯ ಅಭಿಯಾನವನ್ನು ರಾಜ್ಯ ಸರ್ಕಾರವು ಕೈಗೆತ್ತಿಕೊಳ್ಳುತ್ತಿದೆ. ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರ ಪ್ರಕಾರ, ಮಕ್ಕಳಿಂದ ಹಿಡಿದು ಮುದುಕರವರೆಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಈ ಉಪಕ್ರಮವು ಹೊಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಅಭಿಯಾನವನ್ನು ಉದ್ಘಾಟಿಸಲಾಗುವುದು. ಶುಕ್ರವಾರ ಎಲ್ಲ ಜಿಲ್ಲೆಗಳ ಡಿಎಚ್‌ಒಗಳು […]

ಬೆಂಗಳೂರು ಪೊಲೀಸರಿಂದ ಚಂದನ ಚೋರರ ಬಂಧನ: ಒಟ್ಟು 3 ಕೋಟಿ ರೂ. ಮೌಲ್ಯದ ಸೊತ್ತು ವಶ

ಬೆಂಗಳೂರು: ಎಂಟು ಚಂದನ ಚೋರರನ್ನು ಬಂಧಿಸಿರುವ ಹೈಗ್ರೌಂಡ್ಸ್ ಪೊಲೀಸರು, ಒಟ್ಟು 3 ಕೋಟಿ ರೂ. ಮೌಲ್ಯದ 730 ಕೆಜಿ ಶ್ರೀಗಂಧ ಮತ್ತು 170 ಕೆಜಿ ಶ್ರೀಗಂಧದ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಗೋವಿಂದ ಸ್ವಾಮಿ, ಕೆ.ಮಧು ಅಲಿಯಾಸ್ ಮಾದ, ವೆಂಕಟೇಶ್, ವರದರಾಜು, ರಮಾಚಂದ್ರ, ವಸೀಮ್ ಬೇಗ್, ರಾಮಚಂದ್ರಪ್ಪ, ನಂಜೇಗೌಡ ಮುಂತಾದವರ ತಂಡವು ಆಗಸ್ಟ್ 1 ರಂದು ಗಾಲ್ಫ್ ಕ್ಲಬ್ ಆವರಣದಲ್ಲಿರುವ ಶ್ರೀಗಂಧದ ಮರವನ್ನು ಕಡಿದು ಹಾಕಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಹಾಯಕ ಪೊಲೀಸ್ […]

ಸ್ವಚ್ಛ ಕಲಬುರಗಿಗಾಗಿ ರಂಗೋಲಿ ಅಭಿಯಾನ: ಮಹಾನಗರ ಪಾಲಿಕೆಯ ಹೊಸ ಉಪಾಯ

ಕಲಬುರಗಿ: ನಗರವನ್ನು ಸ್ವಚ್ಛವಾಗಿಡಲು ಕಲಬುರಗಿ ಮಹಾನಗರ ಪಾಲಿಕೆ ಹೊಸ ಉಪಾಯವನ್ನು ಮಾಡಿದೆ, ‘ಸ್ವಚ್ಛ ಕಲಬುರಗಿ’ಗಾಗಿ ನಗರದಲ್ಲಿ ರಂಗೋಲಿ ಅಭಿಯಾನಕ್ಕೆ ಚಾಲನೆ ನೀಡಿದೆ. ಜನರು ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಲ್ಲಿಸಲು ಮಹಾನಗರ ಪಾಲಿಕೆಯು ವಿನೂತನ ಉಪಾಯವನ್ನು ಕಂಡುಕೊಂಡಿದೆ. ಸಾರ್ವಜನಿಕರು ಕಸ ಎಸೆಯುವ ಸ್ಥಳಗಳನ್ನು ಸ್ವಚ್ಛಗೊಳಿಸಿದ ಬಳಿಕ ಆ ಸ್ಥಳದಲ್ಲಿ ರಂಗೋಲಿ ಬಿಡಿಸಿ ಸ್ವಚ್ಛತೆಯ ಮಹತ್ವವನ್ನು ತಿಳಿಸಲಾಗುತ್ತಿದೆ. ನಾವು ಜನರು ಕಸ ಎಸೆಯುವ ಸ್ಥಳಗಳನ್ನು ಗುರುತಿಸುತ್ತೇವೆ. ಬೆಳಗಿನ ಸುತ್ತಿನ ಸಮಯದಲ್ಲಿ, ನಗರಪಾಲಿಕೆಯ ಸಿಬ್ಬಂದಿಗಳು ಕಸವನ್ನು ಸಂಗ್ರಹಿಸುತ್ತಾರೆ ಮತ್ತು ಆ ಪ್ರದೇಶವನ್ನು […]