ಸ್ವಚ್ಛ ಕಲಬುರಗಿಗಾಗಿ ರಂಗೋಲಿ ಅಭಿಯಾನ: ಮಹಾನಗರ ಪಾಲಿಕೆಯ ಹೊಸ ಉಪಾಯ

ಕಲಬುರಗಿ: ನಗರವನ್ನು ಸ್ವಚ್ಛವಾಗಿಡಲು ಕಲಬುರಗಿ ಮಹಾನಗರ ಪಾಲಿಕೆ ಹೊಸ ಉಪಾಯವನ್ನು ಮಾಡಿದೆ, ‘ಸ್ವಚ್ಛ ಕಲಬುರಗಿ’ಗಾಗಿ ನಗರದಲ್ಲಿ ರಂಗೋಲಿ ಅಭಿಯಾನಕ್ಕೆ ಚಾಲನೆ ನೀಡಿದೆ. ಜನರು ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಲ್ಲಿಸಲು ಮಹಾನಗರ ಪಾಲಿಕೆಯು ವಿನೂತನ ಉಪಾಯವನ್ನು ಕಂಡುಕೊಂಡಿದೆ.

ಸಾರ್ವಜನಿಕರು ಕಸ ಎಸೆಯುವ ಸ್ಥಳಗಳನ್ನು ಸ್ವಚ್ಛಗೊಳಿಸಿದ ಬಳಿಕ ಆ ಸ್ಥಳದಲ್ಲಿ ರಂಗೋಲಿ ಬಿಡಿಸಿ ಸ್ವಚ್ಛತೆಯ ಮಹತ್ವವನ್ನು ತಿಳಿಸಲಾಗುತ್ತಿದೆ.

ನಾವು ಜನರು ಕಸ ಎಸೆಯುವ ಸ್ಥಳಗಳನ್ನು ಗುರುತಿಸುತ್ತೇವೆ. ಬೆಳಗಿನ ಸುತ್ತಿನ ಸಮಯದಲ್ಲಿ, ನಗರಪಾಲಿಕೆಯ ಸಿಬ್ಬಂದಿಗಳು ಕಸವನ್ನು ಸಂಗ್ರಹಿಸುತ್ತಾರೆ ಮತ್ತು ಆ ಪ್ರದೇಶವನ್ನು ಸ್ವಚ್ಛಗೊಳಿಸುವ ಸಂದೇಶವನ್ನು ನೀಡುವ ರಂಗೋಲಿಯನ್ನು ಬಿಡಿಸುತ್ತಾರೆ. ಇಂತಹ ಪ್ರದೇಶಗಳ ಸಂಖ್ಯೆ ಕಡಿಮೆಯಾಗಲು ಈ ಅಭಿಯಾನವು ಸಹಕಾರಿಯಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ಹೇಳಿದ್ದಾರೆ ಎಂದು ಮಾಧ್ಯಮ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.

ಚಿತ್ರಕೃಪೆ: ಎ.ಎನ್.ಐ