ಬೆಂಗಳೂರು ರಸ್ತೆಯಲ್ಲಿ ಗಂಡಾತರದ ಗುಂಡಿಗಳು: ಬಿಬಿಎಂಪಿಗೆ ಎಚ್ಚರಿಕೆ ನೀಡಿದ ರಾಜ್ಯ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಸೋಮವಾರದಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಎಚ್ಚರಿಕೆ ನೀಡಿದ್ದು, ನ್ಯಾಯಾಲಯವು ನಾಗರಿಕ ಸಂಸ್ಥೆಯ ಮೇಲೆ ಕೂಗಾಡದೆ ಇರಬಹುದು, ಅದರರ್ಥ ನಗರದಲ್ಲಿ ಗುಂಡಿಗಳನ್ನು ಮುಚ್ಚುವುದನ್ನು ಖಾತ್ರಿಪಡಿಸುವ ಬಗ್ಗೆ ಅದು ಗಂಭೀರವಾಗಿಲ್ಲ ಎಂದಲ್ಲ ಎಂದು ಹೇಳಿದೆ.

ಬಿಬಿಎಂಪಿ ತನ್ನ ಕೆಲಸದ ಬಗ್ಗೆ ಪ್ರಾಮಾಣಿಕವಾಗಿ ವರ್ತಿಸುವಂತೆಯೂ ಹೈಕೋರ್ಟ್ ಹೇಳಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠವು ಬಿಬಿಎಂಪಿ ವಕೀಲರಿಗೆ, “ನೀವು ತುರ್ತು ಅವಶ್ಯಕತೆಯನ್ನು ತಿಳಿಸಿರಿ, ಈ ಪರಿಸ್ಥಿತಿಯ ಗಂಭೀರತೆ ಮತ್ತು ತುರ್ತುಸ್ಥಿತಿಯನ್ನು ಅವರಿಗೆ (ಬಿಬಿಎಂಪಿ ಆಯುಕ್ತರಿಗೆ) ತಿಳಿಸಿ. ನಾವು ಕೂಗಾಡುತ್ತಿಲ್ಲವೆಂದರೆ ನಾವು ಗಂಭೀರವಾಗಿಲ್ಲ ಎಂದು ಅರ್ಥವಲ್ಲ” ಎಂದಿದ್ದಾರೆ.

ಪ್ರತಿದಿನ ತುಂಬುತ್ತಿರುವ ಗುಂಡಿಗಳ ಸಂಖ್ಯೆಯನ್ನು ನವೀಕರಿಸಲಾಗುತ್ತಿದ್ದು, ಒಟ್ಟು 2,010 ಗುಂಡಿಗಳನ್ನು ಭರ್ತಿ ಮಾಡಲಾಗಿದ್ದು, ಸೆಪ್ಟೆಂಬರ್ 14 ರವರೆಗೆ ಕೇವಲ 221 ಗುಂಡಿಗಳು ಮಾತ್ರ ಉಳಿದಿವೆ ಎಂದು ಬಿಬಿಎಂಪಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಶ್ನಿಸಿದ ಹೈಕೋರ್ಟ್ “ನೀವು ಅದನ್ನು ತಾತ್ಕಾಲಿಕವಾಗಿ ಯಾವಾಗ ಭರ್ತಿ ಮಾಡಬಹುದು ಎಂಬುದನ್ನು ಹೇಳಬೇಕು. ನೀವು 221 ಅನ್ನು ಸಂಖ್ಯೆಯಾಗಿ ನೀಡುತ್ತಿದ್ದೀರಿ. ನಿಮ್ಮನ್ನು ಪ್ರಾಮಾಣಿಕರಾಗಿರಲು ನಾವು ಕೇಳುತ್ತಿದ್ದೇವೆ. ಎಷ್ಟು ಗುಂಡಿಗಳಿವೆ?” ಎಂದಾಗ ಪ್ರಮುಖ ರಸ್ತೆಗಳಲ್ಲಿ 221 ಗುಂಡಿಗಳು ಎಂದು ವಕೀಲರು ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ಒತ್ತಡ ಹೇರಿ ಪ್ರಶ್ನಿಸಿದಾಗ ಒಳರಸ್ತೆಗಳಲ್ಲಿ ಸರಿಸುಮಾರು 2,500 ಗುಂಡಿಗಳಿವೆ ಎಂದಿದ್ದಾರೆ.

ಈ ಬಗ್ಗೆ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿ, ಒಳರಸ್ತೆಯಲ್ಲಿರುವ 2,500 ರಸ್ತೆಗಳನ್ನು ಮುಚ್ಚಲು ಟೆಂಡರ್ ಕರೆಯದಿರುವ ಬಗ್ಗೆಯೂ ಪ್ರಶ್ನಿಸಿದೆ.

427.12 ಕಿಲೋಮೀಟರ್ ರಸ್ತೆಗಳನ್ನು ಬಿಸಿ ಕಾಂಕ್ರೀಟ್ ಮಿಶ್ರಣದಿಂದ ಪುನರುಜ್ಜೀವನಗೊಳಿಸಲಾಗುತ್ತಿದೆ. ಕಾಮಗಾರಿ ಆದೇಶದ ನಂತರ ನಾಲ್ಕು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದಾಗ ನ್ಯಾಯಾಲಯವು ನಿರ್ದಿಷ್ಟ ದಿನಾಂಕವನ್ನು ಕೋರಿದೆ. 2023 ರ ಜನವರಿ 21 ರೊಳಗೆ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಕಡೆಯ ವಕೀಲರಿಂದ ಉತ್ತರಿಸಲಾಗಿದೆ. ಕಾಮಗಾರಿಗಳನ್ನು ಗಡುವಿನೊಳಗೆ ಪೂರೈಸದಿದ್ದರೆ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ನ್ಯಾಯಾಲಯ ಹೇಳಿದೆ ಎಂದು ಸುದ್ದಿ ಸಂಸ್ಥೆ ಪಿ.ಟಿ.ಐ ವರದಿ ಮಾಡಿದೆ.