ನವೆಂಬರ್ ನಿಂದ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರು: ಮಧು ಬಂಗಾರಪ್ಪ

ಮೈಸೂರು: ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ನವೆಂಬರ್​ನಿಂದ ಪೂರೈಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಿದ್ದಾರೆ. ಅವರು ಮಂಗಳವಾರ ಮೈಸೂರಿನಲ್ಲಿ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮಕ್ಕೆ‌ ಚಾಲನೆ ನೀಡಿ ಮಾತನಾಡಿದರು. ಶಾಲೆಗಳಲ್ಲಿ ಮುಕ್ತವಾಗಿ ಎಲ್ಲಾ ವ್ಯವಸ್ಥೆ ಬಳಸಿಕೊಳ್ಳಬಹುದು. ಹಲವು ಶಾಲೆಗಳಿಗೆ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗುತ್ತಿಲ್ಲ, ಉಚಿತವಾಗಿ ವಿದ್ಯುತ್​ ಹಾಗೂ ನೀರು ನೀಡಿದರೆ ಎಲ್ಲಾ ಸರ್ಕಾರಿ ಶಾಲೆಗಳಿಗೆ […]

ಮಂಡ್ಯ ಹನುಮ ಧ್ವಜ ತೆರವು ಪ್ರಕರಣ: ಜಿಲ್ಲಾಧಿಕಾರಿ ಸಂಧಾನ ಯಶಸ್ವಿ; ಬಂದ್ ಗೆ ತಾತ್ಕಾಲಿಕ ತಡೆ

ಮಂಡ್ಯ: ಮಂಡ್ಯ ಕೆರೆಗೋಡು ಹನುಮ ಧ್ವಜ ತೆರವು ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿದ್ದು, ವಿವಾದ ಸಂಬಂಧ ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ನಾಳೆ(ಫೆ.7) ನಡೆಯಬೇಕಿದ್ದ ಮಂಡ್ಯ ಬಂದ್ ಅನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಫೆ.9ಕ್ಕೆ ಭಜರಂಗದಳ ಬಂದ್ ಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಭಜರಂಗದಳ ಬಂದ್ ಕರೆ ವಿರೋಧಿಸಿ ಫೆ.7 ಕ್ಕೆ ಸಮಾನ ಮನಸ್ಕರ ವೇದಿಕೆ ಬಂದ್​ಗೆ ಕರೆ ಕೊಟ್ಟಿತ್ತು. ಸಮಾನ ಮನಸ್ಕರ ವೇದಿಕೆಗೆ ದಲಿತ ಪರ ಸಂಘಟನೆ, […]

ಇಂದಿನಿಂದ ರಸ್ತೆಗಳಲ್ಲಿ ಓಡಾಡಲಿದೆ ಕ.ರಾ. ರ.ಸಾ.ಸಂಸ್ಥೆಯ ಅಶ್ವಮೇಧ ಕ್ಲಾಸಿಕ್ ಹೈ ಟೆಕ್ ಬಸ್ಸುಗಳು

ಬೆಂಗಳೂರು: ಇಂದಿನಿಂದ ರಾಜ್ಯದ ರಸ್ತೆಗಳಲ್ಲಿ ನೂತನ 100 ಅಶ್ವಮೇಧ ಕ್ಲಾಸಿಕ್ (Ashvamedha Classic) ಬಸ್‌ಗಳು ಕಾರ್ಯಾರಂಭ ಮಾಡಲಿದ್ದು, ಬೆಂಗಳೂರಿನ ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಹೊಸ ಬಸ್‌ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಅಶ್ವಮೇಧ ಬಸ್‌ಗಳು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಒಟ್ಟು 800 ಬಸ್‌ಗಳ ಪೈಕಿ ಇಂದು 100 ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮುಂದಿನ ಹಂತದಲ್ಲಿ ಇನ್ನುಳಿದ ಬಸ್‌ಗಳು ಸೇರ್ಪಡೆಗೊಳ್ಳಲಿವೆ. […]

ಚುನಾವಣಾ ‘ಗ್ಯಾರಂಟಿ’, ‘ಭಾಗ್ಯ’ಗಳ ಆಮಿಷಕ್ಕೆ ವಿರಾಮ ಕೋರಿ ಅರ್ಜಿ ಸಲ್ಲಿಕೆ: ನೋಟಿಸ್ ಜಾರಿ ಮಾಡಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಚುನಾವಣೆ ವೇಳೆ ಮತದಾರರಿಗೆ ‘ಗ್ಯಾರಂಟಿ’, ‘ಭಾಗ್ಯ’ಗಳ ಆಮಿಷವೊಡ್ಡಿ ಮತ ಪಡೆಯುವ ರಾಜಕೀಯ ಪಕ್ಷಗಳ ಮಾದರಿಗೆ ಕರ್ನಾಟಕ ರಾಜ್ಯ ಅವಕಾಶ ಮಾಡಿಕೊಟ್ಟಿದ್ದು, ಇಂತಹ ನಡೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂಬ ಮನವಿಗೆ ಹೈಕೋರ್ಟ್‌ ಸ್ಪಂದಿಸಿದೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ಮತದಾರರಿಗೆ ‘ಗ್ಯಾರಂಟಿ’ ರೂಪದಲ್ಲಿ ಆಮಿಷ ನೀಡಲಾಗಿದ್ದು, ಅಂತಹ ಅಕ್ರಮಗಳನ್ನು ತಡೆಯುವಂತೆ ಆಯಾ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ […]

ಫೆ. 14 ರಂದು ಶಬರಿಮಲೆಯಲ್ಲಿ ಕುಂಭಮಾಸ ಪೂಜೆ

ತಿರುವನಂತಪುರ: ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯ ಗರ್ಭಗುಡಿ ಕುಂಭಮಾಸ ಪೂಜೆಯ ಪ್ರಯುಕ್ತ ಫೆ. 13ರಂದು ತೆರೆದುಕೊಳ್ಳಲಿದೆ. ಸಂಜೆ 5 ಗಂಟೆಗೆ ತಂತ್ರಿವರ್ಯರಾದ ಕಂಠಾರರ್ ಮಹೇಶ್ ಮೋಹನ್ ಉಪಸ್ಥಿತಿಯಲ್ಲಿ ಮೇಲ್ಶಾಂತಿ ಪಿ.ಎನ್. ಮಹೇಶ್ ಗರ್ಭಗುಡಿಯ ಬಾಗಿಲು ತೆರೆದು ದೀಪ ಬೆಳಗಿಸಲಿದ್ದಾರೆ. ಫೆ.14ರ ಬೆಳಗ್ಗೆ 5:30ಕ್ಕೆ ಮಹಾಗಣಪತಿ ಹೋಮದೊಂದಿಗೆ ಪೂಜೆಗಳು ಆರಂಭವಾಗಲಿದ್ದು, ಫೆ. 18ರವರೆಗೆ ಪ್ರತಿದಿನ ಉದಯಾಸ್ತಮಯ ಪೂಜೆ, ಪಡಿಪೂಜೆ, ಕಲಶಾಭಿಷೇಕ, ಪುಷ್ಪಾಭಿಷೇಕ, ಅಪ್ಪಾಭಿಷೇಕ ನಡೆಯಲಿದೆ. ಈ ಅವಧಿಯಲ್ಲಿ ಭೇಟಿ ನೀಡುವ ಭಕ್ತರಿಗಾಗಿ […]