ನೀವು ಬುಕ್ ಮಾಡಿದ್ದ ಟ್ರೈನ್ ಮಿಸ್ ಆದ್ರೆ ಹೀಗೂ ಮಾಡ್ಬೋದು!

ಪ್ರಯಾಣದ ಗಡಿಬಿಡಿಯಲ್ಲಿ ಹಲವರು ಎದುರಿಸುವ ಸಾಮಾನ್ಯ ಸಮಸ್ಯೆ ಎಂದರೆ ಟ್ರೈನ್ ಮಿಸ್ ಆಗುವುದು. ಆದರೆ ಇಂತಹ ಸಂದರ್ಭದಲ್ಲಿ ಕೈಯಲ್ಲಿರುವ ಟಿಕೆಟ್‌ನೊಂದಿಗೆ ಮತ್ತೊಂದು ರೈಲಿನಲ್ಲಿ ಪ್ರಯಾಣಿಸಬಹುದೇ ಎಂಬ ಪ್ರಶ್ನೆ ಬಹುತೇಕ ಜನರಲ್ಲಿ ಮೂಡುತ್ತದೆ. ಈ ಬಗ್ಗೆ ಭಾರತೀಯ ರೈಲ್ವೆ ನಿಯಮಗಳು ಸ್ಪಷ್ಟ ಸೂಚನೆ ನೀಡಿವೆ. ರಿಸರ್ವೇಷನ್ ಟಿಕೆಟ್ ಇದ್ದರೆ ಏನು? ಕನ್ಫರ್ಮ್ ರಿಸರ್ವೇಷನ್ ಟಿಕೆಟ್ ಹೊಂದಿದ್ದರೆ, ನೀವು ಟ್ರೈನ್ ಮಿಸ್ ಮಾಡಿದ ಬಳಿಕ ಅದೇ ಟಿಕೆಟ್ ಮೂಲಕ ಬೇರೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಇರುವುದಿಲ್ಲ. ಹೀಗೆ ಪ್ರಯಾಣಿಸಿದರೆ ಟಿಟಿಇ […]

ಶೃಂಗೇರಿ ವಿಧಾನಸಭಾ ಕ್ಷೇತ್ರದತ್ತ ಮತದಾರರ ಚಿತ್ತ, ಅಂಚೆ ಮತಗಳ ಮರುಎಣಿಕೆ, ಕಾದಿದೆಯಾ ಟ್ವಿಸ್ಟ್?

ಶೃಂಗೇರಿ: ಹೈಕೋರ್ಟ್ ನಿರ್ದೇಶನದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಕಾರ್ಯ ಮೇ 2ರಂದು ನಡೆಯಲಿದೆ. ಐಡಿಎಸ್‌ಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮರುಎಣಿಕೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ಮರುಎಣಿಕೆಯಲ್ಲಿ ಏನಾಗಲಿದೆ? ಯಾವ ಅಭ್ಯರ್ಥಿಗೆ ಜಾಸ್ತಿ ಮತಗಳು ಬಿದ್ದಿದೆ ಎನ್ನುವುದು ಬಹಿರಂಗವಾಗಲಿದೆ. ಹಾಗಾಗಿ ಶೃಂಗೇರಿ ವಿಧಾನಸಭಾ ಕ್ಷೇತ್ರದತ್ತ ಮತದಾರರ ಚಿತ್ತ ಮರುಎಣಿಕೆಯತ್ತ ವಾಲಿದೆ. ಮೇ 2ರಂದು ಬೆಳಿಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಗೌರವ್ ಶೆಟ್ಟಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. […]

ಉಡುಪಿ- ದ.ಕ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ, ಪರಿಸರ, ಅರಣ್ಯ ನಾಶದಿಂದ ಭವಿಷ್ಯ ಘೋರ ! ವರದಿ ಹೇಳಿದ್ದೇನು?

ಉಡುಪಿ/ದ.ಕ: ರಾಜ್ಯದ ಅತ್ಯಧಿಕ ಮಳೆಯ ಪ್ರದೇಶಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಈ ಬಾರಿ ಪರಿಸ್ಥಿತಿ ಭೀಕರವಾಗಿದೆ. ಹೆಸರಿಗೆ ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುತ್ತಿರುವ ಮಂಗಳೂರು ಮತ್ತು ಇಡೀ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಅಲ್ಲದೇ ಸಾಮಾನ್ಯವಾಗಿ ಮಳೆಯ ಸಮೃದ್ಧಿಯಿಂದ ಪ್ರಸಿದ್ಧಿಯಾಗಿರುವ ದ.ಕ ಜಿಲ್ಲೆಯಲ್ಲಿ ಈಗ ಬಿಸಿಲಿನ ತೀವ್ರತೆ ಹೆಚ್ಚಾಗಿ ಜನರನ್ನು ಕಂಗೆಡಿಸಿದೆ. ನೀರಿನ ಮೂಲಗಳೇ ಮಾಯ:ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ತಾಪಮಾನ 35ರಿಂದ 36 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದ್ದು, ಅದರ ಪರಿಣಾಮವಾಗಿ […]

ಮೊಬೈಲ್ ಗೇಮ್ ಆಡಬೇಡ ಎಂದದ್ದಕ್ಕೆ ಬಾಲಕ ಆತ್ಮಹತ್ಯೆ! ಪೋಷಕರ ಹಿತವಚನವೇ ಮುಳುವಾಯ್ತು

ಹುಬ್ಬಳ್ಳಿ: ಮೊಬೈಲ್‌ನಲ್ಲಿ ಆನ್‌ಲೈನ್‌ ಗೇಮ್‌ ಆಡುತ್ತಿದ್ದ 14 ವರ್ಷದ ಬಾಲಕ ಸಮರ್ಥ ಪಟಿಕೆ, ಪೋಷಕರ ಹಿತವಚನ ಸಹಿಸದೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಂಗೇರಿಯ ಉದಯನಗರದ ನಿವಾಸಿ ಸಮರ್ಥ್ ಕಳೆದ ಕೆಲವು ದಿನಗಳಿಂದ ‘ಫ್ರೀಫೈರ್’ಆನ್‌ಲೈನ್ ಗೇಮ್‌ಗಳಿಗೆ ವಿಪರೀತ ಅಡಿಕ್ಟ್ ಆಗಿದ್ದ. ರಾತ್ರಿ ಸತತವಾಗಿ ಗೇಮ್ ಆಡುತ್ತಿದ್ದ ಮಗನಿಗೆ ತಾಯಿ ಬುದ್ಧಿವಾದ ಹೇಳಿದ್ದಾರೆ. ‘ಮೊಬೈಲ್ ಸಾಕು ಮಾಡು, ಓದಿಕೊಳ್ಳುವ ಕಡೆ ಗಮನ ಕೊಡು’ ಎಂದು ಹೇಳಿ ಆತನ ಕೈಲಿದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಸಮರ್ಥ್, ತಕ್ಷಣ ತನ್ನ […]

ರಾಜ್ಯದಲ್ಲಿ ತೀವ್ರ ಉಷ್ಣಾಂಶದ ಏರಿಕೆ: ಆರೋಗ್ಯ ಇಲಾಖೆ ಎಚ್ಚರಿಕೆ! ಸಾರ್ವಜನಿಕರಿಗೆ ನೀಡಿದ ಸೂಚನೆಗಳೇನು?

ಕರ್ನಾಟಕದಲ್ಲಿ ಈ ಬಾರಿ ಬಿಸಿಲಿನ ತೀವ್ರತೆ ಗಣನೀಯವಾಗಿ ಹೆಚ್ಚಾಗಿದೆ. ಹಲವರು ಇಂತಹ ಉಷ್ಣತೆಯನ್ನು ಹಿಂದೆ ಅನುಭವಿಸಿಲ್ಲ ಎನ್ನುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ. ಕೆಲ ಪ್ರದೇಶಗಳಲ್ಲಿ ಉಷ್ಣಾಂಶವು ಉತ್ತರ ಭಾರತದ ಮಟ್ಟವನ್ನೇ ಮೀರಿಸುವಂತಾಗಿದೆ.ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಹಾಗೂ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ. ಹೀಟ್ ಸ್ಟ್ರೋಕ್ ನಿಯಂತ್ರಣಕ್ಕೆ ವಿಶೇಷ ಕ್ರಮಗಳು ಆರೋಗ್ಯ ಇಲಾಖೆ ನೀಡಿರುವ ಪ್ರಮುಖ ನಿರ್ದೇಶನಗಳು: ಸಾರ್ವಜನಿಕರಿಗೆ ನೀಡಿದ ಸೂಚನೆಗಳೇನು? ಜಿಲ್ಲಾವಾರು ಉಷ್ಣಾಂಶ (ಗರಿಷ್ಟ) ರಾಜ್ಯದಲ್ಲಿ ಬಿಸಿಲಿನ ತೀವ್ರತೆ ದಿನೇ ದಿನೇ ಹೆಚ್ಚುತ್ತಿರುವುದರಿಂದ, […]