udupixpress
Home Trending ಜಾಲತಾಣದಲ್ಲಿ ಸದ್ದು ಮಾಡ್ತಿದೆ ಕುಡ್ಲದ ರಾಧೆ- ಕೃಷ್ಣರ ಜೋಡಿ ಫೋಟೋ : ಯಾರು ಈ ಮುದ್ದು...

ಜಾಲತಾಣದಲ್ಲಿ ಸದ್ದು ಮಾಡ್ತಿದೆ ಕುಡ್ಲದ ರಾಧೆ- ಕೃಷ್ಣರ ಜೋಡಿ ಫೋಟೋ : ಯಾರು ಈ ಮುದ್ದು ಹುಡುಗೀರು?

ಕಳೆದ ವರ್ಷ ಕೃಷ್ಣ ವೇಷಧಾರಿಯಾಗಿ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಎಲ್ಲ ಮನಸ್ಸು ಗೆದ್ದ ಕೇರಳ ಮೂಲದ ಯುವತಿ ವೈಷ್ಣವ ಕೆ. ಸುನೀಲ್. ಅವರ ಫೋಟೋ ನೋಡಿದ್ದೀರಿ,
ಆ ಫೋಟೋದಲ್ಲಿ ವೈಷ್ಣವ ಕೃಷ್ಣನ ಉಡುಪು ಧರಿಸಿ ನೃತ್ಯ ಮಾಡುತ್ತಾ ಮಡಿಕೆ ಒಡೆಯಲು ಯತ್ನಿಸುತ್ತಿದ್ದಳು ಆ ಕೇರಳದ ಯುವತಿ. ಈ ವರ್ಷವೂ ಅದಕ್ಕಿಂತಲೂ ಚೆಂದದ್ದೊಂದು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

   ಮಂಗಳೂರಿನ ರಾಧೆ-ಕೃಷ್ಣರ ಈ ಪೋಟೋ ವೈರಲ್ ಆಗಿದ್ದು ವಾಟ್ಸಾಪ್ ಫೇಸ್‌ಬುಕ್‌ ಗಳ ಸ್ಟೇಟಸ್ ವಾಲ್ ಪೋಸ್ಟ್ ಗಳಲ್ಲಿ ಕಾಣಿಸುತ್ತಿದೆ.

ಕೃಷ್ಣಾ ವೇಷಧಾರಿಯಾಗಿ ನಿರೀಕ್ಷಾ ಶೆಟ್ಟಿ, ರಾಧೆಯಾಗಿ ನವ್ಯಾ ಪೂಜಾರಿ, ಮೀರಳಾಗಿ ಅಂಕಿತ ಪಟ್ಲ ಈ ವೇಷದಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡವರು. ಈ ಕ್ಯೂಟ್ ನೆಸ್ ನೆಟ್ಟಿಗರ ಗಮನಸೆಳೆದಿದೆ. ಅಂದ ಹಾಗೆ  ಫೋಟೋಗ್ರಾಫರ್ ರಕ್ಷಿತ್ ಚಿನ್ನು  ಈ  ಫೋಟೋ ಕ್ಲಿಕ್ಕಿಸಿದ್ದಾರೆ.
-ರಾಮ್  ಅಜೆಕಾರ್