ಮಿಂಚಿನ ಕಣ್ಣೋಟದಲ್ಲೇ ಕಾಡ್ತಾರೆ ಈ ಯಕ್ಷ ಕಲಾವಿದ: ಯಕ್ಷಲೋಕದಲ್ಲಿ “ಅಕ್ಷಯ” ಧೀಂಗಿಣ

ಇವರ ಕಣ್ಣೋಟ ನೋಡಿದರೆ ಯಕ್ಷಾಭಿಮಾನಿಗಳು ಥ್ರಿಲ್ಲಾಗುತ್ತಾರೆ. ರಂಗದಲ್ಲಿ ಕುಣಿದರೆ, ಮಾತನಾಡಿದರೆ ಒಂದು ಕ್ಷಣ ನಿಬ್ಬೆರಗಾಗಿ ಇವರ ಅಭಿನಯದ ಭಾವ-ಭಂಗಿಯಲ್ಲೇ ಕಳೆದುಹೋಗುತ್ತಾರೆ ಯಕ್ಷ ಪ್ರೇಮಿಗಳು, ಯಾರಪ್ಪ ಈ ಕಲಾವಿದ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ,ಮೂಡಬಿದ್ರೆಯ ಅಕ್ಷಯ್, ಹೌದು ಇವರೇ ಪ್ರಸ್ತುತ ಕಟೀಲು ಮೇಳದಲ್ಲಿ ಮಿಂಚುತ್ತಿರುವ, ಸ್ತ್ರಿವೇಷದಲ್ಲಿ ಸೈ ಎನಿಸಿಕೊಂಡಿರುವ ಯುವ ಕಲಾವಿದ. ಯಕ್ಷ ಧೀಂಗಿಣ.ಬದುಕಿಗೆ ತೋರಣ: ದಕ್ಷಯಜ್ಙದ ದಾಕ್ಷಾಯಿಣಿ, ಅಂಬೆ, ವಸ್ತ್ರಾಪಹಾರದ ದ್ರೌಪದಿ, ಚಂದ್ರಮತಿ, ಮಾನಿಷಾದದ ಸೀತೆ, ದೇವಿಮಹಾತ್ಮೆಯ ದೇವಿ, ಮಾಯಾ ಶೂರ್ಪನಖಿ, ಮಾನಿಷಾದದ ಸೈರಿಣಿ, ಪುನಃ […]

ಬಣ್ಣದ ಜಗತ್ತಿಗೆ ಜೀವ ಕೊಟ್ಟ ಹಿರಿಯಡ್ಕ ಯುವಕ: ಚಿತ್ರಕಲೆಯೇ ಇವರಿಗೆ ಪೂರ್ತಿಯ ಸೆಲೆ

ತುಳುನಾಡಿನ ಮಣ್ಣಿನ ಕಣ ಕಣಗಳಲ್ಲೂ ಜೀವವಿದೆ, ಸೆಳೆತವಿದೆ. ಇಲ್ಲಿ ಎಲೆ ಮರೆಯ ಕಾಯಿಯಂತೆ ತಮ್ಮ ಸಾಹಸ ಮಾಡುತ್ತಿರುವ ವ್ಯಕ್ತಿಗಳೂ ಇದ್ದಾರೆ. ಇಲ್ಲೊಬ್ಬರಿದ್ದಾರೆ ನೋಡಿ, ಅವರ ಹೆಸರು ಗಣೇಶ್ ಪ್ರಭು .ಹುಟ್ಟಿ ಬೆಳೆದದ್ದು ಉಡುಪಿ ಜಿಲ್ಲೆಯ ಹಿರಿಯಡ್ಕದ ಮೈಕಳ ಮನೆತನದಲ್ಲಿ, ವಿಧ್ಯಾರ್ಥಿ ಜೀವನದಿಂದಲೇ ಪೈಂಟಿಂಗ್, ಡ್ರಾಯಿಂಗ್ ಗಳಲ್ಲಿ ಅಪಾರ ಆಸಕ್ತಿ .ಅನೇಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ನೂರಾರು ಪ್ರಶಸ್ತಿ ಗಳನ್ನು ಪಡೆದ ಸಾಧಕ. ಅವರ ಯಶೋಗಾಥೆ ಇಲ್ಲಿದೆ ನೋಡಿ. ಬದುಕಲ್ಲಿ ಮಂದಹಾಸ ಮೂಡಿಸಿದ ಚಿತ್ರ ಹವ್ಯಾಸ ಕಾಲೇಜು ಜೀವನದಲ್ಲಿಯೇ […]

ಕರಾವಳಿಯ ಈ ಯುವಕನ ಸ್ವರ ಕೇಳಿದ್ರೆ ಕಿವಿ ಇಂಪಾಗುತ್ತೆ :  ಮೈ ಮನದಲ್ಲೂ ಹರಿಯುವ ರಜತ್ ಮಯ್ಯನ ಗಾನಸುಧೆ

ಈತನ ಕಂಠಸಿರಿ ಕೇಳಿದರೆ ಮೈ ಮನಸ್ಸು ತುಂಬಿಕೊಳ್ಳುತ್ತದೆ, ಇವನ ಹಾಡು ಕೇಳುತ್ತಲೇ ಹೋದಂತೆಲ್ಲ ಕಿವಿಯಲ್ಲಿ ಅದೆಂತದ್ದೋ ರೋಮಾಂಚನ, ನೀವೂ ಝಿ ಕನ್ನಡ ವಾಹಿನಿಯ ಸಂಗೀತ ಕಾರ್ಯಕ್ರಮದಲ್ಲಿ ಈತನ ಸ್ವರ ಕೇಳಿ ಆನಂದದ ಪಟ್ಟಿರುತ್ತೀರಿ, ಅಬ್ಬಾ, ಎಂಥಾ ಹಾಡ್ತಾನೆ  ಈ ಹುಡುಗ ಅಂತ ಹುಬ್ಬೇರಿಸಿರುತ್ತೀರಿ.  ಸುಮಧುರ ಗಾಯಕ, ಕರಾವಳಿಯ ರಜತ್ ಮಯ್ಯ ಅನ್ನೋ ಯುವಕನ ಬಗ್ಗೆಯೇ ನಾವ್ ಹೇಳ್ತಿರೋದು. “ರಜತ” ಗಾನ ಮೊಳಗುತಿದೆ: ರಜತ್ ಮಯ್ಯ  ಬೆಳ್ತಂಗಡಿ ತಾಲೂಕಿನ ಉಜಿರೆಯವರು. ಉಜಿರೆಯ ರಮೇಶ್ ಮಯ್ಯ ಹಾಗೂ ಶ್ರೀಮತಿ ಲತಾ […]

ಮೊಳಗುತಿದೆ ವೇಣಿಯವರ ಗಾನ ವಾಣಿ

ಯಕ್ಷಗಾನಕಲೆ ಸದಾ ಒಂದಿಲ್ಲೊಂದು ಕಡೆನಮ್ಮನ್ನು ನಾನಾ ರೂಪವಾಗಿ ಸೆಳೆಯುತ್ತಲೇ ಇರುತ್ತದೆ. ಯಕ್ಷಗಾನ ನಾಟ್ಯ  ವೈಭವ ಯಕ್ಷಗಾನ ರೂಪಕ,ಯಕ್ಷಗಾನ ಗೊಂಬೆಯಾಟ, ಏಕವ್ಯಕ್ತಿ ಯಕ್ಷಗಾನ ಹೀಗೆ ಯಕ್ಷಗಾನಅನ್ನೋ  ಚೈತನ್ಯಶಾಲಿ ಕಲೆಗೆ ಎಲ್ಲೆಗಳಿಲ್ಲ, ಇದುಅದರ ಹಿರಿಮೆ ಹಾಗೂ ಎಲ್ಲದರಲ್ಲೂತನ್ನನ್ನು ತಾನು ಒಳಗೊಳ್ಳುತ್ತದೆ ಎನ್ನುವುದಕ್ಕೆದೊಡ್ಡ ಉದಾಹರಣೆ. ಇದೀಗ ಯಕ್ಷಲೋಕಕ್ಕೆ ಹೊಸಸೇರ್ಪಡೆ ಯಕ್ಷದಾಸ-ಗಾನ-ವೈಭವ.ಕಾರ್ಕಳದ ವೇಣಿ ಸುಬ್ರಮಣ್ಯ ಭಟ್ಯಕ್ಷದಾಸ-ಗಾನ-ವೈಭವವನ್ನು ಕರ್ನಾಟಕದಾದ್ಯಂತ ಪ್ರಚುರ ಪಡಿಸುತ್ತಿದ್ದಾರೆ. ವಿಜಯದಾಸ, ಪುರಂದರ ದಾಸ, ಮೊದಲಾದ ಜನಪ್ರಿಯ ಕೀರ್ತನಕಾರರ ಕೀರ್ತನೆಗಳನ್ನು ತಮ್ಮ ಯಕ್ಷಗಾನ ಭಾಗವತಿಕೆಯ ಶೈಲಿಯಲ್ಲಿ, ಚಂಡೆ, ಮದ್ದಳೆ, ತಾಳಗಳ ಹಿನ್ನೆಲೆಯಲ್ಲಿ ಹಾಡಿ, […]