ಬಣ್ಣದ ಜಗತ್ತಿಗೆ ಜೀವ ಕೊಟ್ಟ ಹಿರಿಯಡ್ಕ ಯುವಕ: ಚಿತ್ರಕಲೆಯೇ ಇವರಿಗೆ ಪೂರ್ತಿಯ ಸೆಲೆ

ತುಳುನಾಡಿನ ಮಣ್ಣಿನ ಕಣ ಕಣಗಳಲ್ಲೂ ಜೀವವಿದೆ, ಸೆಳೆತವಿದೆ. ಇಲ್ಲಿ ಎಲೆ ಮರೆಯ ಕಾಯಿಯಂತೆ ತಮ್ಮ ಸಾಹಸ ಮಾಡುತ್ತಿರುವ ವ್ಯಕ್ತಿಗಳೂ ಇದ್ದಾರೆ.

ಇಲ್ಲೊಬ್ಬರಿದ್ದಾರೆ ನೋಡಿ, ಅವರ ಹೆಸರು ಗಣೇಶ್ ಪ್ರಭು .ಹುಟ್ಟಿ ಬೆಳೆದದ್ದು ಉಡುಪಿ ಜಿಲ್ಲೆಯ ಹಿರಿಯಡ್ಕದ ಮೈಕಳ ಮನೆತನದಲ್ಲಿ, ವಿಧ್ಯಾರ್ಥಿ ಜೀವನದಿಂದಲೇ ಪೈಂಟಿಂಗ್, ಡ್ರಾಯಿಂಗ್ ಗಳಲ್ಲಿ ಅಪಾರ ಆಸಕ್ತಿ .ಅನೇಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ನೂರಾರು ಪ್ರಶಸ್ತಿ ಗಳನ್ನು ಪಡೆದ ಸಾಧಕ. ಅವರ ಯಶೋಗಾಥೆ ಇಲ್ಲಿದೆ ನೋಡಿ.

ಬದುಕಲ್ಲಿ ಮಂದಹಾಸ ಮೂಡಿಸಿದ ಚಿತ್ರ ಹವ್ಯಾಸ

ಕಾಲೇಜು ಜೀವನದಲ್ಲಿಯೇ  ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಡ್ರಾಯಿಂಗ್ ಕ್ಷೇತ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಗಣೇಶ್, ಚಿನ್ನದ ಪದಕವನ್ನು ಪಡೆದರು. ಕಲೆ ಅಂದ್ರೆ ಇವರಿಗೆ ಅದೇನೋ ಸೆಳೆತ.

ಗೆಳೆಯರು ಕೊಡುತ್ತಿದ್ದ ಸ್ಪೂರ್ತಿ ಹಾಗೂ ಸ್ವಯಂ ಪ್ರಯತ್ನವೇ ಇವರ ಚಿತ್ರಕಲೆಯ ದಿಕ್ಕನ್ನು ಬದಲಾಯಿಸಿತು. ಕ್ರಮೇಣ ಚಿತ್ರಕಲೆಯಲ್ಲಿ ಇವರು ಹಿಡಿತ ಸಾಧಿಸಿದರು. ಅಲಂಕಾರಿಕ ಡಿಸೈನ್ ಗಳನ್ನು ಬಿಡಿಸಿದರು. ಮರಳುಶಿಲ್ಪಗಳನ್ನೂ ತಯಾರಿಸಿದರು. ಚಿತ್ರಕಲೆಯ ಜೊತೆಜೊತೆಗೆ ಚೆಂಡೆ ವಾದನದಲ್ಲಿಯೂ ತೊಡಗಿಸಿಕೊಂಡು, ಮುಂಬೈ ಚೆನೈ ನಾಗ್ಪುರ, ವಾರಣಾಸಿ ಗಳಲ್ಲಿ ಪ್ರದರ್ಶನ ನೀಡಿದರು.

ಲೈಫ್ ಇಸ್ “ಕಲರ್” ಫುಲ್:

ಗಣೇಶ್, ಮಣಿಪಾಲದ  ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರೂ ಬಣ್ಣದ ಲೋಕದಲ್ಲಿಯೇ ಕಳೆದುಹೋದವರು. ಕಾಪು, ಬೈಂದೂರು ಕಾರ್ಕಳ ತಾಲೂಕಿನಾದ್ಯಂತ ಐನೂರಕ್ಕೂ ಹೆಚ್ಚು ಮನೆಗಳಲ್ಲಿ ಮಿಕ್ಕಿ ಮೌಸ್‌, ಕೃಷ್ಣ ರಾಧೆಯರ ಸಲ್ಲಾಪದ ಚಿತ್ರಗಳು, ಕಾಡಿನ ಪ್ರಾಣಿಗಳ ಚಿತ್ರಗಳು, ಅಲಂಕಾರಿಕ ವಸ್ತುಗಳನ್ನು ನಾಜೂಕಾಗಿ ಬಿಡಿಸಿದ್ದಾರೆ. Gardening ಕಲೆಯಲ್ಲಿ ವಿವಿಧ ರೀತಿಯ ಆಯಾಮಗಳನ್ನು ಬಳಸಿಕೊಂಡು ತ್ರೀಡಿ  ಎಫೆಕ್ಟ್ಸ್ ಬಳಸಿ, ಹೊಸತನ ಚೆಲ್ಲಿದ್ದಾರೆ. ಬಿಡುವಿನ ವೇಳೆಯಲ್ಲಿ ಇವರಿಗೆ  ಚಿತ್ರಕಲೆಯೇ ಶಕ್ತಿ,

 

ಮಂಗಳೂರು, ಬೆಂಗಳೂರು ನಗರದ ಲ್ಲಿ ಅವರ ಚಿತ್ರಗಳಿಗೆ ಹೆಚ್ಚಿನ ಬೇಡಿಕೆಯಿದ್ದರೂ ಅವರಿಂದ ಪೂರೈಸಲಾಗುತ್ತಿಲ್ಲ. ಸಮಯದ ಅಭಾವದಿಂದ ಅದನ್ನೆಲ್ಲಾ ಪೂರೈಸಲಾಗುತ್ತಿಲ್ಲ ಎನ್ನುತ್ತಾರೆ ಗಣೇಶ್.  ನಮ್ಮೂರಿನ ಹೆಮ್ಮೆಯ ಈ ಕಲಾವಿದನಿಂದ ಇನ್ನಷ್ಟು ಹೊಸ ಕಲಾತ್ಮಕ ಕಸೂತಿಗಳು,ಚಿತ್ರಗಳು,ಮೂಡಿಬರಲಿ ಎನ್ನುವುದು ಹಾರೈಕೆ.ನಿಮ್ಮ ಪ್ರೋತ್ಸಾಹ ಈ ಪ್ರತಿಭೆಗಿರಲಿ. ಅವರ ಸಂಪರ್ಕ:9902819626

-ರಾಮ್ ಅಜೆಕಾರು