ಮೊಳಗುತಿದೆ ವೇಣಿಯವರ ಗಾನ ವಾಣಿ

ಯಕ್ಷಗಾನಕಲೆ ಸದಾ ಒಂದಿಲ್ಲೊಂದು ಕಡೆನಮ್ಮನ್ನು ನಾನಾ ರೂಪವಾಗಿ ಸೆಳೆಯುತ್ತಲೇ ಇರುತ್ತದೆ. ಯಕ್ಷಗಾನ ನಾಟ್ಯ  ವೈಭವ ಯಕ್ಷಗಾನ ರೂಪಕ,ಯಕ್ಷಗಾನ ಗೊಂಬೆಯಾಟ, ಏಕವ್ಯಕ್ತಿ ಯಕ್ಷಗಾನ ಹೀಗೆ ಯಕ್ಷಗಾನಅನ್ನೋ  ಚೈತನ್ಯಶಾಲಿ ಕಲೆಗೆ ಎಲ್ಲೆಗಳಿಲ್ಲ, ಇದುಅದರ ಹಿರಿಮೆ ಹಾಗೂ ಎಲ್ಲದರಲ್ಲೂತನ್ನನ್ನು ತಾನು ಒಳಗೊಳ್ಳುತ್ತದೆ ಎನ್ನುವುದಕ್ಕೆದೊಡ್ಡ ಉದಾಹರಣೆ. ಇದೀಗ ಯಕ್ಷಲೋಕಕ್ಕೆ ಹೊಸಸೇರ್ಪಡೆ ಯಕ್ಷದಾಸ-ಗಾನ-ವೈಭವ.ಕಾರ್ಕಳದ ವೇಣಿ ಸುಬ್ರಮಣ್ಯ ಭಟ್ಯಕ್ಷದಾಸ-ಗಾನ-ವೈಭವವನ್ನು ಕರ್ನಾಟಕದಾದ್ಯಂತ ಪ್ರಚುರ ಪಡಿಸುತ್ತಿದ್ದಾರೆ. ವಿಜಯದಾಸ, ಪುರಂದರ ದಾಸ, ಮೊದಲಾದ ಜನಪ್ರಿಯ ಕೀರ್ತನಕಾರರ ಕೀರ್ತನೆಗಳನ್ನು ತಮ್ಮ ಯಕ್ಷಗಾನ ಭಾಗವತಿಕೆಯ ಶೈಲಿಯಲ್ಲಿ, ಚಂಡೆ, ಮದ್ದಳೆ, ತಾಳಗಳ ಹಿನ್ನೆಲೆಯಲ್ಲಿ ಹಾಡಿ, ಅತ್ತ ಯಕ್ಷಗಾನ ಭಾಗವತಿಕೆಯನ್ನೂ ಇತ್ತ ಹಾಡುಗಾರಿಕೆಯನ್ನೂ ಕಲಾಸಕ್ತರ ಕಣ್ಮನಗಳಲ್ಲಿ  ವಿಶಿಷ್ಟವಾಗಿ ಸೆಳೆಯುವಂತೆ ಮಾಡಿದ್ದಾರೆ. ವೇಣಿ ಸುಬ್ರಹ್ಮಣ್ಯ ಭಟ್, ಎಳವೆಯಿಂದಲೇ ಸಂಗೀತವನ್ನು ಅಭ್ಯಾಸ ಮಾಡುತ್ತಲೇ ರಾಗಲೋಕದ ಬೆಚ್ಚನೆಯ ಕಾವು ಪಡೆದವರು. ವೃತ್ತಿಯಲ್ಲಿ ಕೃಷಿಕ ಹಾಗೂ ಚಾಲಕರಾದರೂ ಯಕ್ಷಗಾನವನ್ನು ಪ್ರವೃತ್ತಿಯಾಗಿಸುತ್ತ, ಭಾಗವತಿಕೆಯಲ್ಲಿಯೇ ಇದೀಗ ತಮ್ಮ ಕಲಾಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.ಯಕ್ಷಗಾನದ ಹಿಮ್ಮೇಳ ವಾದಕರಾದ ಮುರಳೀಧರ  ಭಟ್ಕಟೀಲು, ಆನಂದ ಗುಡಿಗಾರ, ರಾಮಕೃಷ್ಣಕಾಮತ್ ನಿಡ್ಡೋಡಿ,  ರವಿರಾಜಜೈನ್ ಇವರ ಜೊತೆ, ಶ್ರೀನಿವಾಸವೆಂಕಟರಮಣ ಯಕ್ಷ-ದಾಸ-ಗಾನ ಮಂಡಳಿ ಆರಂಭಿಸಿ ಬೆಂಗಳೂರು, ಕಾಸರಗೋಡು,ಹಾಗೂ ರಾಜ್ಯದ ವಿವಿದೆಡೆ ಕಾರ್ಯಕ್ರಮಗಳನ್ನುನೀಡುತ್ತಾ ಯಕ್ಷ-ಗಾನ -ದಾಸವೈಭವವನ್ನು ಯುವ ಜನತೆಯಲ್ಲಿಯೂ ಪಸರಿಸುತ್ತಿದ್ದಾರೆ.

ಕರಿಯ ಕಲ್ಲಲ್ಲಿ ಹಾಡಿನ ಸೊಲ್ಲು:

ಇತ್ತೀಚೆಗೆವ್ಯವಹಾರಿಕ ಮನೋಭಾವವನ್ನು ಬದಿಗೊತ್ತಿ ಮನೆ ಮನೆಭಜನೆ ಅಭಿಯಾನವನ್ನುಆರಂಭಿಸಿದ ಭಟ್ಟರು, ಪ್ರತೀ ಮನೆಯಲ್ಲಿಯೂ ಇರುಳ ಹೊತ್ತಿಗೆ ಭಜನಾ ಸಂಸ್ಕೃತಿ ಹರಡಬೇಕು, ನಾದ ಎನ್ನುವುದು ಮನೆಯ ಪರಿಸರವನ್ನೇ ಸಹನೀಯವಾಗಿಸುತ್ತದೆ, ನೋವಿಗೂ ನಾದವೇ ಮುಲಾಮು ಎನ್ನುವ ಕಳಕಳಿಯಿಂದ ತಮ್ಮನ್ನು ಆಮಂತ್ರಿಸಿದ ಮನೆಮನೆಗೆ ತೆರಳಿ ಭಜನಾ ಕಾರ್ಯಕ್ರಮ ನೀಡುತ್ತಿದ್ದಾರೆ. ಈಗಾಗಲೇ ಹಲವೆಡೆ ಮನೆಮನೆಭಜನೆ ಕಾರ್ಯಕ್ರಮ ನೀಡಿ ಮನೆಮಂದಿಗೆಲ್ಲಾ ಭಜನೆಯ ಪ್ರೀತಿಯನ್ನು ಬೆಳೆಸಿದ್ದಾರೆ. ಯಾವುದೇ ಆಡಂಭರಗಳಿಲ್ಲದೇ, ಯಾವುದೇ ಮೈಕು, ಗದ್ದಲಗಳಿಲ್ಲದೇ ಸಹಜವಾಗಿ ಭಜನಾ ಕಾರ್ಯಕ್ರಮ  ನಡೆಸಿಕೊಡುತ್ತಿದ್ದಾರೆ. ಸಂಗೀತವನ್ನು ವ್ಯಾವಹಾರಿಕ ಮನೋಭಾವದಿಂದ ನೋಡದ  ಭಟ್ಟರು, ಮನೆಯವರು ಕಾಣಿಕೆ ರೂಪವಾಗಿ ನೀಡಿದ್ದನ್ನು ಮನಸ್ವಿಯಾಗಿ ಸ್ವೀಕರಿಸಿ ಮನೆಮನೆಯಲ್ಲಿಯೂ ಭಜನೆ ದೀಪ ಹಚ್ಚುತ್ತಿದ್ದಾರೆ.

ಗಾನ ವೈಭವ:

ಯಕ್ಷ-ದಾಸ-ಗಾನ-ವೈಭವದಲ್ಲಿ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ..ನೀನ್ಯಾಕೋ ನಿನ್ನ ಹಂಗ್ಯಾಕೋ.. ಕರುಣದಿ ಕಣ್ಣುತೆರೆಯೇ ಮೊದಲಾದ ಕೀರ್ತನೆಗಳು ಯಕ್ಷ-ಗಾನವಾಗಿ ರಂಗೆದ್ದಿದೆ. ಆಕಾಶವಾಣಿ ಕಲಾವಿದರಾಗಿ ಈಗಾಗಲೇ ಗುರುತಿಸಿಕೊಂಡು ರಾಗದ ಬೆನ್ನೇರಿ ಹೊರಟಿರುವ, ಯಕ್ಷ-ದಾಸ-ಗಾನದ ನಾದೋಪಾಸನೆಯಲ್ಲಿ ನಿರತರಾಗಿರುವ ವೇಣಿ ಭಟ್ಟರು ರಾಜ್ಯಾದಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ನಮ್ಮೂರವರೇ ಆದ ವೇಣಿ ಸುಬ್ರಹ್ಮಣ್ಯ ಭಟ್ವ ಅವರ ಗಾನ ಪಯಣಕ್ಕೊಂದು ನಿಮ್ಮ ಪ್ರೋತ್ಸಾಹವಿರಲಿ. ಅವರಸಂಪರ್ಕ:9686122605