ವೇಷ ಹಾಕಿ ರಂಜಿಸ್ತಾರೆ, ಮಾನವೀಯತೆಗೆ ಮಿಡಿತಾರೆ : ರವಿ ಕಟಪಾಡಿಯ ಮಾನವೀಯ ಮುಖ

(ಉಡುಪಿ XPRESS-ನಮ್ಮೂರ ಸ್ಪೆಷಲ್ ವ್ಯಕ್ತಿ) ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಸುಮಾರು ಮಂದಿ ವೇಷ ಧರಿಸಿ ಜನರನ್ನು ರಂಜಿಸುವುದು ಸರ್ವೇ ಸಾಮಾನ್ಯ. ಆದರೆ ಇದು ಕೇವಲ ಸಂಭ್ರಮಕ್ಕೆ ಸೀಮಿತವಾಗದೇ ಮಾನವೀಯ ನೆಲೆಯಲ್ಲೂ ಆಚರಿಸಬಹುದು ಎಂದು ತೋರಿಸಿಕೊಟ್ಟವರು ಮಾತ್ರ ರವಿ ಕಟಪಾಡಿ ಅನ್ನೋ ಹೆಮ್ಮೆಯ ಕಲಾವಿದ. ರವಿ ಕಟಪಾಡಿ ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯವರು. ಕಟ್ಟಡ ಕಾರ್ಮಿಕರಾಗಿರುವ ಇವರು, ಬಡ ಕುಟುಂಬದಲ್ಲೇ ಬೆಳೆದರು. ಮಾನವೀಯತೆಗೆ ಮಿಡಿಯುವ ಈ ಕಲಾವಿದನ ಇನ್ನೊಂದು ಮುಖದ ಪರಿಚಯ ಇಲ್ಲಿದೆ. […]
ಈ ಯುವಕನ ಕೈಯಲ್ಲಿ ಅರಳುವ ಚಿತ್ರ ನೋಡಿದ್ರೆ ಬೆರಗಾಗ್ತೀರಿ! ಕಲೆಯ ಗಣಿ, ಬೈಲೂರಿನ ನಿಖಿತ್ ಆಚಾರ್ಯ

ಕಲೆ ಎನ್ನುವುದು ಎಲ್ಲರಿಗೂ ಸಿದ್ಧಿಸುವುದಿಲ್ಲ.ಅದು ಆಸಕ್ತಿಯಿಂದ, ಸತತ ಪರಿಶ್ರಮದಿಂದ ನಮ್ಮಲ್ಲಿ ಹುಟ್ಟಿಕೊಂಡರೆ ಮಾತ್ರ ಅದನ್ನು ಲೋಕಕ್ಕೆ ತೆರೆದಿಡಲು ಸಾಧ್ಯ. ಚಿತ್ರಕಲೆಯೂ ಸಾಮಾನ್ಯವಾದುದಲ್ಲ. ಕಲ್ಪನೆಯಲ್ಲಿದ್ದದ್ದನ್ನು ಕಾಗದದಲ್ಲೋ, ಗೋಡೆಯಲ್ಲೋ ಬಣ್ಣದೊಂದಿಗೆ ಮೂಡಿಸುವ ಪ್ರತಿಭೆಗೆ ಅದರದ್ದೇ ಆದ ಘನತೆ ಇದೆ. ಇಲ್ಲೊಬ್ಬ ಗ್ರಾಮೀಣ ಭಾಗದ ಯುವಕನಿದ್ದಾನೆ. ಚಿತ್ರಕಲೆಯ ಎಲ್ಲಾ ಪ್ರಕಾರಗಳಲ್ಲೂ ಸೈ ಅನ್ನಿಸಿಕೊಂಡು ಕಲೆಯನ್ನು ತನ್ನ ಬದುಕಿನ ಭಾಗವಾಗಿಸಿಕೊಂಡ ಈ ಯುವಕ ತಾನು ಮಾಡುವ ಚೆಂದ ಚೆಂದದ ಚಿತ್ರಗಳಿಂದಲೇ ಗಮನ ಸೆಳೆಯುತ್ತಿದ್ದಾರೆ. ಚಿತ್ರಕಲೆಯ ಅಪ್ಪಟ ಪ್ರತಿಭೆಯೇ ಬೈಲೂರಿನ ನಿಖಿತ್ ಆಚಾರ್ಯ, ಕಾಂತರಗೋಳಿ. […]
ಭರವಸೆ ಮೂಡಿಸ್ತಿದೆ ಶ್ರೀಕಾಂತರ ಯಕ್ಷ ಧೀಂಗಿಣ: ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿದ ಯುವ ಕಲಾವಿದನ ಕತೆ ಕೇಳಿ.

ಕರಾವಳಿಯ ಗಂಡುಕಲೆಯಾದ ಯಕ್ಷಗಾನವು ಇತರ ಎಲ್ಲಾ ಕಲೆಗಳಿಗಿಂತ ಭಿನ್ನವಾಗಿದ್ದು ತನ್ನದೇ ಆದ ವೈಶಿಷ್ಟ್ಯತೆಯಿಂದ ಎಲ್ಲರ ಮನದಲ್ಲಿ ಹಾಸು ಹೊಕ್ಕಾಗಿದೆ. ಎಲೆಮರೆಕಾಯಿಯಂತಿರುವ ಅನೇಕ ಪ್ರತಿಭೆಗಳು ಯಕ್ಷಗಾನದ ಮೂಲಕವೇ ವೇದಿಕೆಗೆ ಅಡಿ ಇಡುತ್ತಿವೆ. ಇಂತದ್ದೇ ನಮ್ಮ ದೇಶಿ ಸೊಗಡಿನ ಅಪ್ಪಟ ಕಲಾ ಪ್ರತಿಭೆ ಶ್ರೀಕಾಂತ್ ಪೆಲತ್ತೂರು. ಬಾಲ್ಯದಲ್ಲಿಯೇ ಯಕ್ಷಗಾನದ ವೇಷಭೂಷಣ, ಗೆಜ್ಜೆ, ಹೆಜ್ಜೆಗೆ ಸೋತು ಅದನ್ನು ಹಿಂಬಾಲಿಸಿ ಯಕ್ಷಗಾನದ ಕಲೆಯ ಗೀಳಿಗೆ ತೆರೆದು ಕೊಂಡವರು ಶ್ರೀಕಾಂತ್. ಯಕ್ಷಗಾನ ರಂಗದಲ್ಲಿ ಹತ್ತುವರ್ಷಗಳ ಸುಧೀರ್ಘ ಪಯಾಣ ಇವರದ್ದು. ರವೀಂದ್ರನಾಯಕ್ ಮತ್ತು ರಂಜಿತಾ ನಾಯಕ್ […]
ಬಾಲ್ಯದಲ್ಲೇ ಯಕ್ಷರಂಗದಲ್ಲಿ ಗೆಜ್ಜೆ ಕಟ್ಟಿದ್ರು ಕಾರ್ಕಳದ ಎಳ್ಳಾರೆ ಹುಡ್ಗ: ಈ ಬಾಲ ಪ್ರತಿಭೆಯ ಕತೆ ಕೇಳಿ

ಯಕ್ಷಗಾನ “ಯಕ್ಷಗಾನಂ ವಿಶ್ವಗಾನಂ” ಎನ್ನುವಂತೆ ಯಕ್ಷಗಾನ ಕಲೆಯು ವಿಶ್ವದಲ್ಲಿ ಅತ್ಯಂತ ಪ್ರಸಿದ್ದವಾಗಿದೆ. ಯಕ್ಷಗಾನದ ಉಭಯ ತಿಟ್ಟುಗಳಲ್ಲಿ ಹಲವಾರು ಬಾಲ ಕಲಾವಿದರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇಂತಹ ಕಲಾವಿದರಲ್ಲಿ ಅನುಜಿತ್ ನಾಯಕ್ ಎಳ್ಳಾರೆ ಕೂಡ ಒಬ್ಬರು. ಬಾಲ ಕಲಾವಿದನಾಗಿ ಯಕ್ಷಗಾನ ಕ್ಷೇತ್ರದಲ್ಲಿ ಈಗಾಗಲೇ ಮಿಂಚುತ್ತಿರುವ ಅನುಜಿತ್ ಕನಸು ಕಂಗಳ ಹುಡುಗ. ಕನಸುಕಂಗಳ ಹುಡುಗ: ಕಾರ್ಕಳ ತಾಲೂಕಿನ ಎಳ್ಳಾರೆಯ ಶ್ರೀ ನಿವಾಸ್ ನಾಯಕ್, ಜ್ಯೋತಿ ನಾಯಕ್ ದಂಪತಿಗಳ ಪುತ್ರ ಅನುಜಿತ್, ತನ್ನ ಅಣ್ಣ ಮುಂಬೈ ಯಕ್ಷರಂಗದ ಶ್ರೇಷ್ಠ ಕಲಾವಿದ […]
ಕನ್ನಡದ ಕೋಟ್ಯಾಧಿಪತಿಯಲ್ಲಿ ಪವರ್ ಸ್ಟಾರ್ ನ್ನು ಬೆರಗುಗೊಳಿಸಿದ ಕರಾವಳಿಯ power boy ವೈಭವ ಶೆಟ್ಟಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರೂಪಣೆಯ ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಷೋ ದೇಶಾದ್ಯಂತ ಮನೆಮಾತಾಗಿದೆ. ಮನೋರಂಜನೆಯ ಜತೆ ಜತೆಗೆ ಮನೋವಿಕಾಸ, ಸಾಮಾನ್ಯಜ್ಞಾನ ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಪ್ರಸಿದ್ಧಿಪಡೆದಿದೆ. ಕನ್ನಡ ಕೋಟ್ಯಾಧಿಪತಿಯಲ್ಲಿ ಭಾಗವಹಿಸಿ ಪವರ್ ಸ್ಟಾರ್ ಎದುರು ಪವರ್ ಪುಲ್ ಹಾಟ್ ಸೀಟ್ ನಲ್ಲಿ ಕುಳಿತು ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಸಾವಿರ- ಹತ್ತುಸಾವಿರ, ಲಕ್ಷ ಹೀಗೆ ಕಾಂಚಾನವನ್ನು ಜೇಬಿಗಿಳಿಸಿಕೊಳ್ಳಬೇಕು ಎನ್ನುವುದು ಎಲ್ಲರ ಕನಸಾಗಿರುತ್ತದೆ. ಆದರೆ ಈ ಅವಕಾಶ ಲಕ್ಷದಲ್ಲಿ ಒಬ್ಬರಿಗೆ ಸಿಗುವಂತದ್ದು. ಆದರೆ […]