ಡಿಜಿಟಲ್ ಆರ್ಟ್ ಈ ಯುವಕನ ಹಾರ್ಟ್: ಶೃಂಗೇರಿ ಹುಡುಗ ಮನೋಜ್ ಶರ್ಮರ ಕಲಾಕೃತಿಗಳಿಗೆ ಯೂತ್ ಫುಲ್ ಫಿದಾ !

ಇದು”ಬಣ್ಣದ ಕನಸುಗಾರರು” ಸರಣಿಯ ಮೂರನೆಯ ಕಂತು. ಈ ಸರಣಿಯಲ್ಲಿ ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ತಾಂತ್ರಿಕ ಸಾಧ್ಯತೆಗಳು ಅಗಾಧವಾಗಿ ಬೆಳೆಯುತ್ತಾ ಇರುವಾಗ ಎಲ್ಲವೂ ಡಿಜಿಟಲೈಸ್ಡ್ ಆಗಿದೆ. ಓದು, ಬರಹ, ಕಲಿಕೆ, ಶಿಕ್ಷಣವೂ ಈಗಿನ ಲಾಕ್ ಡೌನ್ ಹಂತದಲ್ಲಿ ತಂತ್ರಜ್ಞಾನ ಅವಲಂಬಿಸುವಂತಾಗಿದೆ. […]
ಇವರು ಫೋಟೋದಲ್ಲಿ ಹೇಳುವ ಕತೆ ನೂರಾರು, ಇವರೇ ಬಣ್ಣದ ಕನಸುಗಾರ ಶರತ್ ನೆಲ್ಲಿಕಾರು

ಇದು”ಬಣ್ಣದ ಕನಸುಗಾರರು” ಸರಣಿಯ ಎರಡನೆಯ ಕಂತು. ಈ ಸರಣಿಯಲ್ಲಿ ಬರುವ ನಮ್ಮ ನಡುವಿನ ಯುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಕೈಯೊಳಗೆ ಕ್ಯಾಮರಾ ಸಿಕ್ಕ ತಕ್ಷಣ ಫೊಟೊಗ್ರಾಫರ್ ಅನ್ನಿಸಿಕೊಳ್ಳಲು ಬರುವುದಿಲ್ಲ. ಅದಕ್ಕೆ ಒಂದಷ್ಟು ಅಭಿರುಚಿ, ಆಸಕ್ತಿ, ಅಧ್ಯಯನ, ಹೊಸ ನೋಟ.. ಹೀಗೆ ಕಲಿಕೆ ಬೇಕಾಗುತ್ತದೆ. ಅಂತಹ ಕ್ರಿಯೆಯಲ್ಲಿ ತೊಡಗಿಸಿಕೊಂಡು, ಛಾಯಾಗ್ರಹಣ ಕ್ಷೇತ್ರದಲ್ಲಿ ಒಂದಷ್ಟು ಕೆಲಸ […]
ಎಲೆಯ ಮೇಲೆ ಎಂತೆಂತ ಕಲೆ ಅರಳಿಸ್ತಾರೆ ನೋಡಿ, ಇದು ಲೀಫ್ ಆರ್ಟಿಸ್ಟ್ “ಅಕ್ಷಯ್ ದೇವಾಡಿಗ” ಮೋಡಿ !

“ಬಣ್ಣದ ಕನಸುಗಾರರ” ಬಗ್ಗೆ ಇಂದಿನಿಂದ udupixpress.com ನಲ್ಲಿ ಗಣಪತಿ ದಿವಾಣ ಬರಿತಾರೆ. “ಬಣ್ಣದ ಕನಸುಗಾರರು” ಸರಣಿಯಲ್ಲಿ ಬರುವ ನಮ್ಮ ನಡುವಿನ ಯುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ ಎನ್ನುವ ನಂಬಿಕೆ ಉಡುಪಿ XPRESS ತಂಡದ್ದು.ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಪೆನ್ಸಿಲ್ ಸ್ಕೆಚ್ ಗಳು, ಬಣ್ಣದ ಚಿತ್ರಗಳನ್ನು ನೀವು ನೋಡಿರುತ್ತೀರಿ. ಆದರೀಗ ಚಿತ್ರಕಲೆ ಎಂಬ ವಿಷಯ ಅಷ್ಟಕ್ಕೇ ಉಳಿದಿಲ್ಲ. ಇಂದಿನ ಯುವಜನತೆ […]
ಸುಮ್ ಸುಮ್ನೆ ಮನೆಯಿಂದ ಆಚೆ ಹೋಗುವವರಿಗೆ ಈ ಹುಡುಗ ಹೇಗೆ ಜಾಡಿಸಿದ್ದಾನೆ: ನೋಡಿ ಈ ವಿಡಿಯೋ

ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ಸುಮ್ಮ ಸುಮ್ಮನೆ ಆಚೆ ಹೋಗುವವರಿಗೆ ತುಮಕೂರಿನ ನಿಹಾಲ್ ರಾಜ್ ಹೇಗೆ ಬುದ್ದಿ ಹೇಳಿದ್ದಾನೆ ನೋಡಿ. ಇವನ್ನಿಲ್ಲಿ ಅಪ್ಪನಿಗೆ ಪಾಠ ಹೇಳಿದ್ದರೂ ಇದು ನಮಗೆಲ್ಲಾ ಪಾಠವೆ, ಇದೊಂದು ಜಾಗೃತಿಗೋಸ್ಕರ ಹರ್ಷರಾಜ್ ,ನಿಹಾಲ್ ರಾಜ್ ,ಗಾನ ಶ್ರುತಿ ಅವರು ಮಾಡಿದ ಪುಟ್ಟ ವಿಡಿಯೋ ತುಣುಕು.
ಕಾರ್ಕಳದ ಈ ಯುವಕನ ಕೈಯಲ್ಲರಳುತ್ತೆ ಬೆರಗಿನ ಚಿತ್ರಗಳು: “ಅನುಷ್” ಚಿತ್ರಕಲೆಯಲ್ಲೇ ಯಾವತ್ತೂ ಖುಷ್

ಈ ಯುವಕನ ಕೈಯಲ್ಲರಳುವ ಚಿತ್ರಗಳನ್ನು ನೋಡಿದರೆ ಮನಸ್ಸು ಬೆರಗಾಗುತ್ತದೆ. ವ್ಹಾ ವ್ಹಾ ಎಂತಹ ಚೆಂದ ಚಿತ್ರ ಬಿಡಿಸ್ತಾನಪ್ಪ ಈ ಹುಡುಗ ಎಂದು ನಮ್ಮ ಹುಬ್ಬೇರಿಬಿಡುತ್ತದೆ. ನಮ್ಮ ನಡುವೆಯೇ ಹಿತವಾದ ಕನಸು ಕಂಡು ಬದುಕುತ್ತಿರುವ ಪ್ರತಿಭೆಗಳು ತುಂಬಾ ಮಂದಿ ಇದ್ದರೂ, ಕೆಲವರಷ್ಟೇ ತಮ್ಮ ಕಠಿಣ ಪರಿಶ್ರಮದಿಂದ ಆ ಪ್ರತಿಭೆಯನ್ನು ಇನ್ನಷ್ಟು ಕರಗತ ಮಾಡಿಕೊಂಡಿರುತ್ತಾರೆ. ಅಂತಹ ಕೆಲವರಲ್ಲಿ ಕಾರ್ಕಳದ ಈ ಯುವಕ ಕೂಡ ಒಬ್ಬರು. ಇವರೇ ಚಿತ್ರ ಕಲಾವಿದ ಅನುಷ್. ಈ ಕಲಾವಿದನ ಪ್ರತಿಭೆಯನ್ನು ನೇೂಡಿದ್ರೆ ನೀವು ಬೆರಗಾಗುವುದು ಮಾತ್ರ […]