ಉಸೇನ್ ಬೋಲ್ಟ್ ಓಟ ಮೀರಿಸಿದ ಶ್ರೀನಿವಾಸ ಗೌಡ: ಕಂಬಳದ ಓಟಗಾರನಿಗೆ ಭಾರೀ ಪ್ರಶಂಸೆ

ಮಂಗಳೂರು: ಜಗತ್ತಿನಲ್ಲಿ ಅತ್ಯಂತ ವೇಗದ ಓಟಗಾರರ ಅಂದ್ರೆ ತಟ್ಟನೆ ನೆನಪಿಗೆ ಬರುವುದು ಉಸೇನ್ ಬೋಲ್ಟ್. ವೇಗದ ಓಟದಲ್ಲಿ ಈತನದ್ದು ವಿಶ್ವದಾಖಲೆ. ಆದ್ರೆ ಈತನನ್ನು ಮೀರಿಸಿದ ಓಟಗಾರ ಇದ್ದಾನೆ ಅದು ಕಡಲ ನಗರಿ ನಮ್ಮ ಮಂಗಳೂರಿನಲ್ಲಿ. ಅದು ಬರೀ ಕಾಲಿನಲ್ಲಿ. ಕೆಸರು ಗದ್ದೆಯಲ್ಲಿ. ಜನಪದ ಕ್ರೀಡೆ ಕಂಬಳ ಕೂಟದಲ್ಲಿ. ಹೌದು ಉಸೇನ್ ಬೋಲ್ಟ್ 2009ರಲ್ಲಿ 100 ಮೀಟರ್ ಓಟವನ್ನು ಕೇವಲ 9.58 ಕ್ರಮಿಸಿದ್ದು ವಿಶ್ವದಾಖಲೆ. ಆದರೆ ಈ ದಾಖಲೆ ಮೀರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಮಿಜಾರು ಶ್ರೀನಿವಾಸ […]

ಒಮ್ಮೆ ಬನ್ನಿ ಕೆಮ್ಮಣ್ಣುವಿಗೆ: ಮನಮೋಹಕ ಪರಿಸರದ ನಡುವೆ ಕಯಾಕಿಂಗ್ ಮಾಡಿ ,ಖುಷಿ ಪಡಿ

ಕಯಾಕಿಂಗ್ ಮಾಡಬೇಕೆಂಬ ಆಸೆಯಾಗಿದೆಯೇ ? ಬನ್ನಿ ಉಡುಪಿಯ ಕೆಮ್ಮಣ್ಣಿಗೆ. ಪ್ರಕೃತಿಯ ರಮಣೀಯತೆಯ ಮಡಿಲಿಗೆ. ಕೆಮ್ಮಣ್ಣು ಪರಿಸರದ ತಿಮ್ಮನ ಕುದುರು ದ್ವೀಪ ಸ್ವರ್ಣನದಿಯ ಮುಖಜಭೂಮಿ. ಹತ್ತಿರದಲ್ಲೆ ಡೆಲ್ಟಾ ಬೀಚ್ ನ ವಿಹಂಗಮ ದೃಶ್ಯ. ಇಲ್ಲಿಯ ಪರಿಸರದ ಅಪೂರ್ವ ನೋಟ ಪ್ರವಾಸಿಗರ  ಕಣ್ಣಿಗೆ ಹಬ್ಬ.  ಬನ್ನಿ ಕಯಾಕಿಂಗ್ ಮಾಡಿ: ಇಲ್ಲಿನ  ನೀರಿನ ಮಟ್ಟ, ದೋಣಿ ವಿಹಾರ, ಮೀನುಗಾರಿಕೆ ಮತ್ತು ಇತರ ಚಟುವಟಿಕೆಗಳಿಗೆ ಸುರಕ್ಷಿತವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತೂಗು ಸೇತುವೆ ನಿರ್ಮಿಸಿರುವುರಿಂದ ಪ್ರವಾಸಿಗರಿಗೆ ದ್ವೀಪಪ್ರದೇಶಕ್ಕೆ ಸಾಗಲು ಪ್ರಯೋಜನವಾಗಿದೆ. ಒಂದೆಡೆ ತಳುಕು […]

ಕಾಲಿಗೆ ಕೋಳ ಬಿಗಿದು ಪಂಚಗಂಗಾವಳಿ ನದಿಯಲ್ಲಿ ಈಜಿದ ಛಲಗಾರ: ದಾಖಲೆ ಬರೆದ್ರು ಖಾರ್ವಿಕೇರಿಯ ಸಂಪತ್

-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಇಲ್ಲಿನ ಖಾರ್ವಿಕೇರಿಯ ಈಜು ಪ್ರತಿಭೆ ಕುಂದಾಪುರ ಭಂಡಾರ್ಸ್‍ಕಾರ್ಸ್ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಸಂಪತ್ ಡಿ ಖಾರ್ವಿ ಕಾಲಿಗೆ ಸರಪಳಿ ಕಟ್ಟಿ 25ಕಿಮೀ ಈಜುವ ಮೂಲಕ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಭಾನುವಾರ ಮಧ್ಯಾಹ್ನ 2ಗಂಟೆಗೆ ಬಸ್ರೂರು ರೈಲು ಸೇತುವೆ ಬಳಿಯಿಂದ ನದಿಗೆ ಇಳಿದು ಈಜಲು ಆರಂಭಿಸಿದ ಸಂಪತ್ ಸಂಜೆ 5ಗಂಟೆ 5ನಿಮಿಷಕ್ಕೆ 25ಕಿ.ಮೀ ದೂರದ ಗಂಗೊಳ್ಳಿ ಬಂದರುವಿಗೆ ತಲುಪಿದ್ದಾರೆ. ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಖಾರ್ವಿಯವರು ಸಂಪತ್ ಅವರ ಕಾಲುಗಳಿಗೆ ಮಧ್ಯಾಹ್ನ […]

ಮಾಳದ ಈ ಯುವ ಕಲಾವಿದನ ಕುಂಚದಲ್ಲಿ ಅರಳೋ ಚಿತ್ರ ನೋಡಿದ್ರೆ ಹುಬ್ಬೇರಿಸ್ತೀರಿ !:

ಈ ಚಿತ್ರ ಕಲಾವಿದನ ಕುಂಚದಲ್ಲಿ ಅರಳಿದ ಚಿತ್ರಗಳನ್ನು ನೋಡ್ತಾ ಇದ್ರೆ ನೀವು ಮೈಮರೆತು ಬಿಡುತ್ತೀರಿ, ಈ ಕಲಾವಿದನ ಜಾಣ್ಮೆ ಯಿಂದ ಅರಳುವ ಚಿತ್ರ ಬಲು ಚಂದವೋ ಚಂದ. ಇಂತಹ ಬೆರಗಿನ ಚಿತ್ರ ಬಿಡಿಸುವ ದೇಶಿ ಕಲೆಯ ಅಪ್ಪಟ ಕಲಾಕಾರನೇ ಸಂತೋಷ್ ಮಾಳ. ಸಂತೋಷ್ ಮೂಲತಃ ಕಾರ್ಕಳ ತಾಲೂಕಿನ ಮಾಳ ಗ್ರಾಮದವರು. ವೃತ್ತಿಯ ಜೊತೆಗೆ ಇವರಿಗೆ ಚಿತ್ರವೂ ಒಂದು ಚಂದದ ಹವ್ಯಾಸ. ತುಳುನಾಡಿನ ಯಕ್ಷಗಾನ, ಜನಪದ, ಗ್ರಾಮೀಣ ಸೊಗಡಿನ  ಚಿತ್ರಗಳು ಇವರ ಕುಂಚದಲ್ಲಿ ಅರಳಿದೆ. ಆ ಎಲ್ಲಾ ಚಿತ್ರಗಳು […]

ಕುಂದಾಪುರ: ಹಳ್ಳಿಗಾಡಿನ ಈ ಯುವಕ ವಿಶ್ವದ ಗಮನ ಸೆಳೆದ್ರು: ವಿಶ್ವನಾಥ ಗಾಣಿಗರ ಸಾಧನೆಯ ಕತೆ ಕೇಳಿ

-ಶ್ರೀಕಾಂತ ಹೆಮ್ಮಾಡಿ  ಬಾಲ್ಯದಲ್ಲಿ ಕಿತ್ತುತಿನ್ನುವ ಬಡತನವೇ ತಮ್ಮ ಸಾಧನೆಗೆ ಅಡ್ಡಿಯಾಯಿತು ಎಂದು ಹೇಳುವ ಮಂದಿ ಹಲವರಿದ್ದಾರೆ. ಆದರೆ ಬಡತನಕ್ಕೆ ಸೆಡ್ಡು ಹೊಡೆದು ಅದ್ಭುತ ಕ್ರೀಡಾಳುವಾಗಿ ರೂಪುಗೊಂಡು ದೇಶದ ಗಮನವನ್ನೇ ಸೆಳೆದ ಈ ಹಳ್ಳಿಗಾಡಿನ ಯುವಕನ ಯಶೋಗಾಥೆಯನ್ನು ಕೇಳಿದರೆ ನೀವೂ ಕೂಡ ಶಹಬ್ಬಾಸ್ ಎನ್ನುತ್ತೀರಿ. ಹಾಗಾದರೆ ಯಾರು ಆ ಸಾಧಕ.. ಆತ ಮಾಡಿರುವ ಸಾಧನೆಯಾದರು ಏನು ಅಂತೀರಾ ಇಲ್ಲಿದೆ ಆ ಸಾಧಕನ ಯಶೋಗಾಥೆ. ಹಳ್ಳಿ ಹುಡುಗನ ಯಶೋಗಾಥೆ: ಇತ್ತೀಚೆಗಷ್ಟೇ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಅಥ್ಲೆಟಿಕ್ಸ್‌ನ ಪವರ್‌ಲಿಫ್ಟಿಂಗ್‌ನಲ್ಲಿ ಎರಡು ಚಿನ್ನ […]