ಕಾರ್ಕಳದ ಈ ಯುವಕನ ಕೈಯಲ್ಲರಳುತ್ತೆ ಬೆರಗಿನ ಚಿತ್ರಗಳು: “ಅನುಷ್” ಚಿತ್ರಕಲೆಯಲ್ಲೇ ಯಾವತ್ತೂ ಖುಷ್

ಈ ಯುವಕನ ಕೈಯಲ್ಲರಳುವ ಚಿತ್ರಗಳನ್ನು ನೋಡಿದರೆ ಮನಸ್ಸು ಬೆರಗಾಗುತ್ತದೆ. ವ್ಹಾ ವ್ಹಾ ಎಂತಹ ಚೆಂದ ಚಿತ್ರ ಬಿಡಿಸ್ತಾನಪ್ಪ ಈ ಹುಡುಗ ಎಂದು ನಮ್ಮ ಹುಬ್ಬೇರಿಬಿಡುತ್ತದೆ. ನಮ್ಮ ನಡುವೆಯೇ ಹಿತವಾದ ಕನಸು ಕಂಡು ಬದುಕುತ್ತಿರುವ ಪ್ರತಿಭೆಗಳು ತುಂಬಾ ಮಂದಿ ಇದ್ದರೂ, ಕೆಲವರಷ್ಟೇ ತಮ್ಮ ಕಠಿಣ ಪರಿಶ್ರಮದಿಂದ ಆ ಪ್ರತಿಭೆಯನ್ನು ಇನ್ನಷ್ಟು  ಕರಗತ ಮಾಡಿಕೊಂಡಿರುತ್ತಾರೆ. ಅಂತಹ ಕೆಲವರಲ್ಲಿ ಕಾರ್ಕಳದ ಈ ಯುವಕ ಕೂಡ ಒಬ್ಬರು. ಇವರೇ ಚಿತ್ರ ಕಲಾವಿದ ಅನುಷ್.

ಈ ಕಲಾವಿದನ ಪ್ರತಿಭೆಯನ್ನು ನೇೂಡಿದ್ರೆ ನೀವು ಬೆರಗಾಗುವುದು ಮಾತ್ರ ಖಚಿತ. ಚಿತ್ರಕಲೆಯ ಪ್ರ ತಿಭೆಯನ್ನು ಮೈಗೂಡಿಸಿಕೊಂಡಿರುವ ಕಲಾವಿದನ ಈ ಚಿತ್ರಗಳು ಒಂದೊಂದು ಕಥೆ ಹೇಳುತ್ತವೆ.

  

ಮೂಲತಃ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದವರಾಗಿರುವ ಅನುಷ್ ಪ್ರಸ್ತುತ ಮಂಗಳೂರಿನ ‌ಖಾಸಗಿ ಕಾಲೇಜಿನ ಆರ್ಟಿಟೆಕ್ ವಿಧ್ಯಾರ್ಥಿ. ಬಿಡುವಾದಾಗಲೆಲ್ಲಾ ಚಂದದ ಚಿತ್ರಗಳನ್ನು ಬಿಡಿಸೋದು ಅನುಷ್ ಅವರ ಹವ್ಯಾಸ. ಒಂದು ವಿಧದಲ್ಲಿ ಚಿತ್ರವೇ ಇವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸರಕು. ಅದೇ ಇವರ ಬಾಳಿನ ಬೆಳಕು.

ಚಿತ್ರ ಅನ್ನೋ ಜೀವಂತಿಕೆ:  

ಇವರ ಕೈಚಳಕದಿಂದ ಹೊರ ಬರುವ ಒಂದೊಂದು ಚಿತ್ರಗಳು ಅಪೂರ್ವವಾಗಿದೆ. ಚಿತ್ರಗಳನ್ನು ನೋಡುತ್ತಿದ್ದರೆ ಆ ಚಿತ್ರದಲ್ಲಿರುವ ವ್ಯಕ್ತಿ, ವಸ್ತು ನಮ್ಮ ಕಣ್ಣೆದುರೇ ದುತ್ತೆಂದು ಮೂಡಿದಂತೆನ್ನಿಸುತ್ತದೆ.  ಜೀವಂತ ಕೂಡ ಅನ್ನಿಸುತ್ತೆ. ತುಳುನಾಡ ಕಲೆಯಾದ ಯಕ್ಷಗಾನದ ವಿವಿಧ ಭಂಗಿಗಳು, ವ್ಯಕ್ತಿ ಚಿತ್ರ, ಪರಿಸರ ಚಿತ್ರ ಮೊದಲಾದ ಚಿತ್ರವನ್ನು ಬಿಡಿಸುವ  ಅನುಷ್, ವಿದ್ಯಾರ್ಥಿ ಜೀವನದಲ್ಲಿಯೇ ಚಿತ್ರಕಲೆಯಲ್ಲಿ ಪರಿಣತಿ ಸಾಧಿಸುತ್ತಿದ್ದಾರೆ.

ಪ್ರತಿಭೆ ಯಾರಲ್ಲಿ ಇಲ್ಲ  ಹೇಳಿ? ಎಲ್ಲರಲ್ಲೂ ಇದೆ, ಆದರೆ ಅದನ್ನು ಸಮರ್ಥವಾಗಿ ಬಳಸಿ‌ಕೊಳ್ಳುವ ಉತ್ಸಾಹಬೇಕು ಅಷ್ಟೇ. ಅದನ್ನ ಸರಿಯಾಗಿ ಬಳಸಿರುವ ಇವರು ಬರೀ ಚಿತ್ರ ಮಾತ್ರವಲ್ಲ ಇಂಟರ್ನೆಟ್ ಮೂಲಕ ಪ್ರಾಣಿಗಳ ಮೇೂಡೆಲ್ ಕೂಡ ರಚಿಸಿ ಹೆಸರುವಾಸಿ ಪಡೆದಿದ್ದಾರೆ. ಇವರ ಈ  ಪ್ರತಿಭೆಗೆ ಹಲವು ಪ್ರಶಸ್ತಿಗಳು ಕೂಡ ದೊರೆತಿದೆ.
ಯಾವುದೇ ರೀತಿಯ ಫೋಟೊವನ್ನು ನೀಡಿದರೂ ತಮ್ಮ ಕೈಚಳಕದಿಂದ ಅದನ್ನು ಚಿತ್ರಕಲೆಯಾಗಿಸಿ  ಕಲೆಗೊಂದು ಅಲೆ ಉಕ್ಕಿಸುತ್ತಾರೆ ಈ ಕಲಾವಿದ.

ಚಿತ್ರಕಲೆ ನನ್ನ ಹವ್ಯಾಸ ನಾನು ಬಾಲ್ಯದಿಂದಲೂ ಇದನ್ನು ನನ್ನಲ್ಲಿ ಪೋಷಿಸಿಕೊಂಡು ಬಂದಿದ್ದೇನೆ.ಚಿತ್ರ ಬಿಡುಸುವುದು ನನಗೆ  ಮಾನಸಿಕವಾಗಿ ನೆಮ್ಮದಿ ಮತ್ತು ತಾಳ್ಮೆ ನೀಡುತ್ತಿದೆ ಅನ್ನತ್ತಾರೆ ಅನುಷ್.

ಒಟ್ಟಾರೆ ಚಿತ್ರ ಕಲೆ ನನ್ನ ಬದುಕಿನ ಸೆಲೆ ಅನ್ನುವ ಅನುಷ್ ಗೆ ಚಿತ್ರಕಲೆಯಲ್ಲಿ ಇನ್ನಷ್ಟು ಯಶಸ್ಸು ಸಿಗಲಿ, ಇನ್ನಷ್ಟು ಸಾಧನೆಯಿಂದ ಅವರು ಮುನ್ನುಗ್ಗಲಿ ಎಂದು ಹಾರೈಸೋಣ. ಅನುಷ್ ಸಂಪರ್ಕ:7760867749

ಬರಹ-ಮಹಮ್ಮದ್ ಅಲ್ಪಾಜ್
ಕಾರ್ಕಳ