ಅಂತಿಮ ದರ್ಶನಕ್ಕೆ ಹರಿದು ಬಂದ ಅಭಿಮಾನಿಗಳು : ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಪಾರ್ಥಿವ ಶರೀರ

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ: ರವೀಂದ್ರ ಕಲಾಕ್ಷೇತ್ರದಲ್ಲಿ ‌ಸಾರ್ವಜನಿಕರು, ಗಣ್ಯರು, ಅಭಿಮಾನಿಗಳು ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. 11 ಗಂಟೆಯಿಂದ ಇಲ್ಲಿ ಪಾರ್ಥಿವ ಶರೀರದ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಸರಿ ಸುಮಾರು 2 ಗಂಟೆಯವರೆಗೆ ಲೀಲಾವತಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನ ಪಡೆದುಕೊಳ್ಳಬಹುದಾಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದ್ ಬಸ್ತೋ ಕೈಗೊಳ್ಳಲಾಗಿದೆ.ಕನ್ನಡ ಚಿತ್ರರಂಗದಲ್ಲಿ ಬಹುಕಾಲ ಛಾಪು ಮೂಡಿಸಿದ್ದ ಹಿರಿಯ ನಟಿ ಲೀಲಾವತಿ ಅವರು ನಿನ್ನೆ ಸಂಜೆ ವಯೋಸಹಜ ಕಾಯಿಲೆಯಿಂದ […]

ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆ

ಕೊನೆಗೂ ಯಶ್ ಮುಂದಿನ ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿದೆ. ಬಹು ಸಮಯದ ಕುತೂಹಲದ ಬಳಿಕ ಟೀಸರ್ ಬಿಡುಗಡೆ ಹೊಂದಿದೆ. “ಟಾಕ್ಸಿಕ್” ಇದು ‘ಎ ಫೇರಿ ಟೇಲ್ ಫಾರ್ ಗ್ರೊವ್ನ್ ಅಪ್’ (ವಯಸ್ಕರಿಗಾಗಿ ಒಂದು ಕಾಲ್ಪನಿಕ ಕಥೆ) ಎಂಬ ಟ್ಯಾಗ್ ಲೈನ್ ನೊಂದಿಗೆ ಟೀಸರ್ ಬಿಡುಗಡೆಯಾಗಿದೆ. ಕೆಜಿಎಫ್ ನಟ ಯಶ್ ಪ್ರಭಾವಶಾಲಿ ಟೈಟಲ್ ಟೀಸರ್‌ನೊಂದಿಗೆ ಶೀರ್ಷಿಕೆ “ಟಾಕ್ಸಿಕ್” ಅನ್ನು ಘೋಷಿಸಿದ್ದಾರೆ. 2025 ಏಪ್ರಿಲ್ 10 ರಂದು ಚಿತ್ರ ಬಿಡುಗಡೆಯಾಗಲಿದೆ. ಕೆಲವು ಅರ್ಧ ಸುಟ್ಟ ಇಸ್ಪೀಟ್ ಕಾರ್ಡ್‌ಗಳು ಕತ್ತಲೆಯಲ್ಲಿ ಬೀಳುತ್ತಿರುವುದನ್ನು ವೀಡಿಯೊ […]

ಪ್ರತೀಕ್ ಶೆಟ್ಟಿ ಬತ್ತಳಿಕೆಯಿಂದ ಮತ್ತೊಂದು ಕಾಮಿಡಿ ಎಂಟರ್ ಟೈನರ್ ಶಾರ್ಟ್ ಫಿಲ್ಮ್ ‘ವಾಟರ್ ಮೆಲನ್’ ಬಿಡುಗಡೆ

ಎಲ್ಲಿಂದ ಬರ್ತಿರೋ ನೀವೆಲ್ಲಾ, ಜಾಬ್ ಮಾರ್ಲೆ ಮುಂತಾದ ಕಿರುಚಿತ್ರಗಳಿಂದ ಗಮನಸೆಳೆದಿರುವ ಪ್ರತೀಕ್ ಶೆಟ್ಟಿ ತಂಡದಿಂದ ಮತ್ತೊಂದು ಎಂಟರ್ ಟೈನರ್ ಕಿರುಚಿತ್ರ ‘ವಾಟರ್ ಮೆಲನ್’ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಯುವಕರ ಗಮನ ಸೆಳೆಯುತ್ತಿದೆ. ಸಿನಿಮಾ ಸೈಕಲ್ ಪ್ರೊಡಕ್ಷನ್ಸ್ & ಭಾಗ್ಯರತ್ನ ಪಿಕ್ಚರ್ಸ್ ಬ್ಯಾನರ್ಸ್ ಅಡಿಯಲ್ಲಿ ಮೂಡಿಬಂದಿರುವ ಕಿರು ಚಿತ್ರದಲ್ಲಿ ಪ್ರತೀಕ್, ಶ್ರೀ ಭವ್ಯ, ಸುಪ್ರೀತ್ ಕಾಟಿ ಮುಂತಾದವರು ನಟಿಸಿದ್ದಾರೆ. ರಾಜ್ ಕನಕ ಕಥೆ ಬರೆದು ನಿರ್ದೇಶಿಸಿದ್ದಾರೆ. ಸಿನಿಮಾ ಸೈಕಲ್ ಸಂಸ್ಥೆ ಸಹಯೋಗದಲ್ಲಿ ಭಾಗ್ಯಮ್ಮ ಉಜ್ಜಿನಪ್ಪ ನಿರ್ಮಾಣ ಮಾಡಿದ್ದಾರೆ. ಕೂಲ್ […]

ಆಸ್ಪತ್ರೆಗೆ ದಾಖಲು : ಕನ್ನಡದ ಹಿರಿಯ ನಟ ಮಂಡ್ಯ ರಮೇಶ್ ದಿಢೀರ್ ಅಸ್ವಸ್ಥ

ಸ್ಯಾಂಡಲ್‌ವುಡ್‌ನ ಖ್ಯಾತ ಕಾಮಿಡಿಯನ್‌ ಹಾಗೂ ಹಿರಿಯ ನಟ ಮಂಡ್ಯ ರಮೇಶ್‌ ಅವರು ದಿಢೀರ್ ಅಸ್ವಸ್ಥರಾಗಿದ್ದು.. ಅವರನ್ನು ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ..ಸದ್ಯ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಇದೀಗ ಈ ಬಗ್ಗೆ ಮಂಡ್ಯ ರಮೇಶ್ ಅವರ ಪತ್ನಿ ಸರೋಜಾ ಹೆಗಡೆ ಮಾಹಿತಿ ನೀಡಿದ್ದು, ವೈದ್ಯರ ಸಲಹೆ ಮೇರೆಗೆ ನಾಳೆ ಆಸ್ಪತ್ರೆಯಿಂದ ನಟ ಮಂಡ್ಯ ರಮೇಶ್​ ಡಿಸ್ಚಾರ್ಜ್​​ ಆಗಲಿದ್ದಾರೆ ಎನ್ನಲಾಗಿದೆ.. ಸದ್ಯ ರಮೇಶ್​ ಅವರು ಸೂಕ್ತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಗುಣಮುಖವಾಗುವ ಹಂತದಲ್ಲಿದ್ದಾರೆ ಎನ್ನುವುದು […]

ಮಳೆ ಹುಡುಗಿ ಪೂಜಾ ಗಾಂಧಿಯ ಗೃಹಸ್ಥ ಜೀವನದ ಶುಭಾರಂಭ

ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ತಮ್ಮ ದೀರ್ಘ ಕಾಲದ ಗೆಳೆಯ ಉದ್ಯಮಿ ವಿಜಯ್ ಘೋರ್ಪಡೆ ಅವರನ್ನು ಕುವೆಂಪು ಅವರ ಮಂತ್ರ ಮಾಂಗಲ್ಯ ಪದ್ಧತಿಯ ಅನುಸಾರ ಮದುವೆಯಾಗಿ ಗೃಹಸ್ಥ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಪೂಜಾ ಗಾಂಧಿ ಹಾಗೂ ವಿಜಯ್ ಘೋರ್ಪಡೆ ಅವರ ವಿವಾಹ ಮಹೋತ್ಸವ ಜರುಗಿದ್ದು ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು, ಮಂತ್ರ ಮಾಂಗಲ್ಯ ಪದ್ಧತಿಯಂತೆ ಪೂಜಾ ಗಾಂಧಿ ಮತ್ತು ವಿಜಯ್ ಘೋರ್ಪಡೆ ಹೊಸ ಬಾಳಿಗೆ ನಾಂದಿ ಹಾಡಿದ್ದಾರೆ. ಪೂಜಾ […]