ರಣದೀಪ್ ಹೂಡಾ ಅಭಿನಯದ ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವು ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜೀವನದ ಸ್ವಾತಂತ್ರ್ಯ ಸಂಗ್ರಾಮದ ಪಯಣವನ್ನು ಆಧರಿಸಿದೆ. ನಟನೆಯ ಜೊತೆಗೆ ಹೂಡಾ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ.
ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಸದ್ಯ ಟ್ರೆಡಿಂಗ್ ನಲ್ಲಿರುವ ಟ್ರೈಲರ್ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ರಣದೀಪ್ ಹೂಡಾ, “ಟ್ರೈಲರ್ ಗೆ ದೊರೆಯುತ್ತಿದೆ ಅಖಂಡ ಭಾರತದ ಅಖಂಡ ಪ್ರೀತಿ ಮತ್ತು ಸನ್ಮಾನ” ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಣದೀಪ್ ಹೂಡಾ ಅಭಿನಯದ ಸ್ವಾತಂತ್ರ್ಯ ವೀರ್ ಸಾವರ್ಕರ್ ಕ್ರಾಂತಿಕಾರಿ ನಾಯಕ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜೀವನಚರಿತ್ರೆಯಾಗಿದೆ. ಹೂಡಾ, ಸಾವರ್ಕರ್ ಪಾತ್ರವನ್ನು ನಿರ್ವಹಿಸಿದ್ದು ಮಾತ್ರವಲ್ಲದೆ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ.
ಸ್ವಾತಂತ್ರ್ಯ ವೀರ್ ಸಾವರ್ಕರ್ ಅವರ ಟ್ರೈಲರ್ ರಣದೀಪ್ ಹೂಡಾ ಅವರ ಪ್ರಬಲ ಸಂಭಾಷಣೆಯೊಂದಿಗೆ ಪ್ರಾರಂಭವಾಗುತ್ತದೆ. ಸಾವರ್ಕರ್ ಅವರು ಅಖಂಡ ಭಾರತಕ್ಕಾಗಿ ಹೇಗೆ ಹೋರಾಡಿದರು ಮತ್ತು ಭಾರತವನ್ನು ಸ್ವತಂತ್ರಗೊಳಿಸಲು ತಮ್ಮ ಸೈನ್ಯವನ್ನು ಹೇಗೆ ಕಟ್ಟಿದರು ಮತ್ತು ಅವರು ಬ್ರಿಟಿಷರನ್ನು ಭಾರತದಿಂದ ಓಡಿಸಲು ಹೇಗೆ ಶಕ್ತಿ ಮೀರಿ ಪ್ರಯತ್ನ ಮಾಡಿದರು ಎನ್ನುವುದರ ಮೇಲೆ ಬೆಳಕು ಚೆಲ್ಲಿದೆ.
ಚಿತ್ರ ಸ್ವಾತಂತ್ರ್ಯ ವೀರ್ ಸಾವರ್ಕರ್ ಮಾರ್ಚ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.