ಆಸ್ಕರ್ 2024 : ಓಪನ್‌ಹೈಮರ್‌ ಗೆ ಏಳು ಪ್ರಶಸ್ತಿ; ನಟ ಸಿಲಿಯನ್ ಮರ್ಫಿ; ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಗೂ ಆಸ್ಕರ್ ಗರಿ

ಓಪನ್‌ಹೈಮರ್‌ನ ನಾಯಕ, ಪ್ರಸಿದ್ಧ ಹಾಲಿವುಡ್ ನಟ ಸಿಲಿಯನ್ ಮರ್ಫಿಗೆ 2024ನೇ ಸಾಲಿನ ಆಸ್ಕರ್‌ (Oscar Awards) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಓಪನ್‌ಹೈಮರ್‌ನಲ್ಲಿನ (OPPENHEIMER) ಪಾತ್ರಕ್ಕಾಗಿ ಸಿಲಿಯನ್ ಮರ್ಫಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಇದರೊಂದಿಗೆ ಓಪನ್‌ಹೈಮರ್‌ನ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಈ ಬಾರಿ ಒಪೆನ್‌ಹೈಮರ್‌ನ ಚಿತ್ರವು ಏಳು ಆಸ್ಕರ್‌ ಪ್ರಶಸ್ತಿಗಳನ್ನ ಪಡೆದುಕೊಂಡಿದೆ.

ಓಪನ್‌ಹೈಮರ್‌ ಸಿನಿಮಾ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಕೂಡ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕ್ರಿಸ್ಟೋಫರ್‌ ನೋಲನ್‌ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಸಿಲಿಯನ್ ಮರ್ಫಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಇದೇ ಮೊದಲು. ಹೆಚ್ಚುವರಿಯಾಗಿ, ಅವರು ತಮ್ಮ ಮೊದಲ ನಾಮನಿರ್ದೇಶನದಲ್ಲಿ ತಮ್ಮ ಮೊದಲ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿಯನ್ನು ಸಿಲಿಯನ್ ಜಗತ್ತಿನಾದ್ಯಂತ ಶಾಂತಿ ಸ್ಥಾಪನೆಗಾಗಿ ಶ್ರಮಿಸುವವರಿಗೆ ಅರ್ಪಿಸಿದ್ದಾರೆ.

ಒಟ್ಟು ಪ್ರಶಸ್ತಿ ಗೆದ್ದ ವಿಭಾಗಗಳು:
ಅತ್ಯುತ್ತಮ ಪೋಷಕ ನಟ
ಅತ್ಯುತ್ತಮ ಚಲನಚಿತ್ರ ಸಂಕಲನ
ಅತ್ಯುತ್ತಮ ಛಾಯಾಗ್ರಹಣ
ಅತ್ಯುತ್ತಮ ಮೂಲ ಸ್ಕೋರ್
ಅತ್ಯುತ್ತಮ ನಟ
ಅತ್ಯುತ್ತಮ ನಿರ್ದೇಶಕ
ಅತ್ಯುತ್ತಮ ಚಿತ್ರ