ಕಿರುತೆರೆಯ ಖ್ಯಾತ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ:

ಬೆಂಗಳೂರು: ಕನ್ನಡ ಕಿರುತೆರೆ ಹಾಗೂ ಸಿನಿಮಾರಂಗದ ಖ್ಯಾತ ನಟ ದಿಲೀಪ್ ರಾಜ್ ಅವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಮೂಲಕ ಕಿರುತೆರೆಗೆ ಭರ್ಜರಿ ಕಂಬ್ಯಾಕ್ ಮಾಡಿದ್ದ ದಿಲೀಪ್ ರಾಜ್, ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಈ ಧಾರಾವಾಹಿಯಲ್ಲಿ ಅವರು ನಿರ್ವಹಿಸಿದ್ದ ಪಾತ್ರಕ್ಕೆ ವೀಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. […]
‘ದೃಶ್ಯಂ 3’ ಕುರಿತು ಸಿಕ್ತು ಬಿಗ್ ಅಪ್ಡೇಟ್! ಚಿತ್ರದಲ್ಲಿ ಭಾರೀ ಬದಲಾವಣೆ?

ಭಾರತೀಯ ಚಿತ್ರರಂಗದಲ್ಲಿ ಭಾರೀ ಯಶಸ್ಸು ಕಂಡಿರುವ ‘ದೃಶ್ಯಂ’ ಸರಣಿಯ ಮುಂದಿನ ಭಾಗವಾದ ‘ದೃಶ್ಯಂ 3’ ಇದೀಗ ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಚಿತ್ರವು ವಿವಿಧ ಭಾಷಾ ಆವೃತ್ತಿಗಳಲ್ಲಿ ವಿಭಿನ್ನ ಕಥಾ ರೂಪದಲ್ಲಿ ಮೂಡಿಬರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬಾರಿಯ ಒಂದು ದೊಡ್ಡ ವಿಶೇಷವೆಂದರೆ ದೃಶ್ಯಂ 3 ಹಿಂದಿ, ಮಲಯಾಳಂ ಹಾಗೂ ಕನ್ನಡದಲ್ಲಿ ಪ್ರತ್ಯೇಕ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಬರಲಿದೆಯಂತೆ. ಹಿಂದಿ ಮತ್ತು ಮಲಯಾಳಂನಲ್ಲಿ ವಿಭಿನ್ನ ಕಥಾವಸ್ತು ಇತ್ತೀಚಿನ ಸಂದರ್ಶನದಲ್ಲಿ ಪನೋರಮಾ ಸ್ಟುಡಿಯೋದ ಅಭಿಷೇಕ್ ಪಾಠಕ್ Abhishek […]
ಓಟಿಟಿ ಗೆ ಲಗ್ಗೆ ಇಡುತ್ತಿದೆ ಧುರಂಧರ್ 2, ರಣವೀರ್ ಸಿಂಗ್ ಅಭಿಮಾನಿಗಳು ಫುಲ್ ಥ್ರಿಲ್ಲ್:ಯಾವಾಗ OTT ರಿಲೀಸ್?

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಬಹು ನಿರೀಕ್ಷಿತ ಆ್ಯಕ್ಷನ್ ಸಿನಿಮಾ ಧುರಂಧರ್ 2: ದಿ ರಿವೇಂಜ್ ಇದೀಗ ಒಟಿಟಿ ವೇದಿಕೆಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ಈ ಸಿನಿಮಾ ಡಿಜಿಟಲ್ ಬಿಡುಗಡೆಯ ಸುದ್ದಿ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ. ನಿರ್ದೇಶಕ ಆದಿತ್ಯ ಧರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಒಟಿಟಿ ಬಿಡುಗಡೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಅಧಿಕೃತ ಘೋಷಣೆಗೆ ಮುನ್ನವೇ ಚಿತ್ರದ […]
ದಾಂಪತ್ಯ ಜೀವನಕ್ಕೆ ಕಾಲಿಟ್ಟ “ಸು ಫ್ರಂ ಸೋ” ಖ್ಯಾತಿಯ ಜೆಪಿ ತುಮ್ಮಿನಾಡು

ಮಂಗಳೂರು: ತುಳು ಚಿತ್ರರಂಗದ ಖ್ಯಾತ ಕಲಾವಿದ, ಹಾಗೇ ಇತ್ತೀಚೆಗೆ ಫುಲ್ ಹಿಟ್ ಆದ ರಾಜ್ ಬಿ ಶೆಟ್ಟಿ ನಿರ್ಮಾಣದ “ಸು ಫ್ರಂ ಸೋ” ಚಿತ್ರದ ನಟ, ನಿರ್ದೇಶಕ ಜೆಪಿ ತುಮ್ಮಿನಾಡು ಅವರು ತಮ್ಮ ದೀರ್ಘಕಾಲದ ಗೆಳತಿ ರಶ್ಮಿಕಾ ಜೊತೆ ಮೇ 6ರಂದು ಮಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದಲ್ಲಿ ಪ್ರಕಾಶ್ ತುಮ್ಮಿನಾಡು ಸೇರಿದಂತೆ ಕುಟುಂಬ ಸದಸ್ಯರು, ಆಪ್ತರು ಮತ್ತು ಸ್ನೇಹಿತರು ಭಾಗವಹಿಸಿದ್ದರು. ಕಳೆದ ಎರಡು ದಿನಗಳಿಂದ ಮದುವೆ ಶಾಸ್ತ್ರಗಳು ನಡೆದಿದ್ದು, ಮಾಂಗಲ್ಯಧಾರಣೆಯ ಫೋಟೋಗಳು ಮತ್ತು ವಿಡಿಯೋಗಳು […]
ಹೊಂಬಾಳೆ ಫಿಲ್ಮ್ಸ್ ನಿಂದ ಸಿಕ್ತು ಬಿಗ್ ಅಪ್ ಡೇಟ್; ಸೆಟ್ಟೇರಲಿದೆ “ಮಹಾವತಾರ ಪರಶುರಾಮ”

ಕೆ.ಜಿ.ಎಫ್., ಕಾಂತಾರ, ಸಲಾರ್, ಮಹಾವತಾರ ನರಸಿಂಹ ಮುಂತಾದ ಸಿನಿಮಾಗಳ ಫುಲ್ ಫೇಮಸ್ ಆಗಿರುವ ‘ಹೊಂಬಾಳೆ ಫಿಲ್ಮ್ಸ್ʼ ಈಗ ಪರಶುರಾಮನ ಕಥೆಯನ್ನ ಕೈಗೆತ್ತಿಕೊಂಡಿದೆ. ಇದು ಕೇವಲ ಒಂದು ಸಿನಿಮಾವಲ್ಲ, ಬದಲಾಗಿ ಭಾರತದ ಸಾಂಸ್ಕೃತಿಕ ಬೇರುಗಳನ್ನ ಇಂದಿನ ಪೀಳಿಗೆಗೆ ತಲುಪಿಸುವ ಒಂದು ಬೃಹತ್ ಪ್ರಯತ್ನ. ವಿಷ್ಣುವಿನ ಅವತಾರಗಳಲ್ಲಿ ಅತ್ಯಂತ ಉಗ್ರ ಹಾಗೂ ಶಕ್ತಿಶಾಲಿ ಎನಿಸಿಕೊಂಡಿರುವ ಪರಶುರಾಮನ ಜೀವನದ ರೋಚಕ ಘಟ್ಟಗಳನ್ನ ಈ ಸಿನಿಮಾ ಒಳಗೊಂಡಿರಲಿದೆ. ಪರಶುರಾಮ ಜಯಂತಿಯ ವಿಶೇಷ ದಿನದಂದು Hombale Films ತನ್ನ ಹೊಸ ಮಹತ್ವಾಕಾಂಕ್ಷೆಯ ಸಿನಿಮಾ ‘ಮಹಾವತಾರ […]