ಮಣ್ಣಿಲ್ಲದೇ ನಿಮ್ಮ ಮನೆಯೊಳಗೇ, ಬಾಲ್ಕನಿ, ಟೆರೇಸ್ ಗಳಲ್ಲಿ ಗಿಡ ಬೆಳೆಸಬಹುದು! ಸುಲಭ ವಿಧಾನ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ತರಕಾರಿ, ಹಣ್ಣುಗಳ ಬೆಲೆ ಏರಿಕೆಯಾಗುತ್ತಿದೆ ಮಾತ್ರವಲ್ಲದೇ ರಾಸಾಯನಿಕಗಳ ಬಳಕೆ ಅತಿಯಾಗುತ್ತಿದೆ. ಹಾಗಾಗಿ ಪೇಟೆಗಳಲ್ಲೂ ಮನೆಯ ಸುತ್ತಮುತ್ತ ಜಾಗ ಇಲ್ಲದಿದ್ದರೂ, ಬಾಲ್ಕನಿ, ಟೆರೇಸ್ ಗಾರ್ಡನಿಂಗ್ ಕಾನ್ಸೆಪ್ಟ್ ಹೆಚ್ಚಾಗುತ್ತಿದೆ. ಆದರೆ ಮಣ್ಣು ಇಲ್ಲದೇ ಅಥವಾ ಕಡಿಮೆ ಮಣ್ಣಿನ ಬಳಕೆಯಿಂದ ಗಿಡ ಬೆಳಸಲು ಸಾಧ್ಯವಿದೆ. ಮಣ್ಣಿಗೆ ಪರ್ಯಾಯವಾಗಿ ಅಥವಾ ಮಣ್ಣಿನೊಂದಿಗೆ ಮಿಶ್ರಣವಾಗಿ ಬಳಸಬಹುದಾದ ಕೋಕೋಪೀಟ್, ಗಿಡಗಳ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಿದೆ. ವಿಶೇಷವಾಗಿ ಕಡಿಮೆ ಜಾಗದಲ್ಲಿ ಗಿಡಗಳನ್ನು ಬೆಳೆಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಕೋಕೋಪೀಟ್ ಎಂದರೇನು? ತೆಂಗಿನಕಾಯಿಯ ಸಿಪ್ಪೆಯಿಂದ ನಾರು […]

ನಿಮ್ಮ ತಿಂಗಳ ಸಂಬಳ ಎಷ್ಟೇ ಇರಲಿ, ಈ ಸರಳ ಸೂತ್ರ ಪಾಲಿಸಿದರೆ ಭವಿಷ್ಯಕ್ಕೆ ಉಳಿತಾಯ ಮಾಡಬಹುದು!

ತಿಂಗಳಿಗೆ 15-20 ಸಾವಿರದ ಒಳಗೆ ಸಂಬಳ ಪಡೆಯುವವರು ತಿಂಗಳ ಕೊನೆಯಲ್ಲಿ ಕೈಯಲ್ಲಿ ಹಣ ಉಳಿಯುವುದಿಲ್ಲ ಎಂದು ಚಿಂತೆಪಡುತ್ತಿರುತ್ತಾರೆ. ಆದರೆ ಆದಾಯ ಕಡಿಮೆ ಇದ್ದರೂ ಸರಿಯಾದ ರೀತಿಯಲ್ಲಿ ಹಣವನ್ನು ನಿರ್ವಹಿಸಿದರೆ ದಿನನಿತ್ಯದ ಖರ್ಚು, ಉಳಿತಾಯ ಮತ್ತು ಭವಿಷ್ಯದ ಅಗತ್ಯಗಳನ್ನು ಸಮತೋಲನಗೊಳಿಸಬಹುದು. ಸಂಬಳ ಬಂದ ತಕ್ಷಣವೇ ಎಲ್ಲ ಹಣವನ್ನು ಖರ್ಚು ಮಾಡುವ ಬದಲು ಮೊದಲೇ ಒಂದು ಬಜೆಟ್ ರೂಪಿಸಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಿಮ್ಮ ಸಂಬಳ ಎಷ್ಟೇ ಇರಲಿ ಅದರಲ್ಲಿ ಸಣ್ಣ ಮೊತ್ತವನ್ನು ಉಳಿತಾಯಕ್ಕೆ ನೀವು ಮೀಸಲಿಡಲೇಬೇಕು. ಸಂಬಳ ಕೈಗೆ […]

ಮನೆಯಲ್ಲೇ ರೆಡಿ ಮಾಡಿ ಈ ಸ್ಪ್ರೇ! ಜಿರಳೆಗೆ ಹೇಳಿ ಗುಡ್ ಬೈ….

ಅಡುಗೆಮನೆಯಲ್ಲಿ ಜಿರಳೆಗಳ ಕಾಟ ಶುರುವಾದರೆ ಅದನ್ನು ನಿಯಂತ್ರಿಸುವುದು ಸುಲಭದ ಕೆಲಸವಲ್ಲ. ವಿಶೇಷವಾಗಿ ರಾತ್ರಿ ವೇಳೆ ಅಡುಗೆಮನೆಯ ಲೈಟ್‌ ಆಫ್ ಮಾಡಿದ ಬಳಿಕ ಜಿರಳೆಗಳು ಹೊರಬಂದು ಓಡಾಡುವುದು ಸಾಮಾನ್ಯ. ಆಹಾರ, ನೀರು ಮತ್ತು ಬೆಚ್ಚಗಿನ ಜಾಗಗಳು ಸಿಕ್ಕರೆ ಜಿರಳೆಗಳು ಬೇಗ ಹೆಚ್ಚಾಗಬಹುದು. ಜಿರಳೆಗಳು ಆಹಾರ ಮತ್ತು ಅಡುಗೆಮನೆಯ ಮೇಲ್ಮೈಗಳನ್ನು ಕಲುಷಿತಗೊಳಿಸುವ ಸಾಧ್ಯತೆ ಇರುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ. ಜಿರಳೆಗಳನ್ನು ನಿಯಂತ್ರಿಸಲು ಹಲವರು ಕೀಟನಾಶಕ ಸ್ಪ್ರೇಗಳನ್ನು ಬಳಸುತ್ತಾರೆ. ಆದರೆ ಇವುಗಳನ್ನು ಬಳಸುವಾಗ ಮಕ್ಕಳು, ಸಾಕುಪ್ರಾಣಿಗಳು ಮತ್ತು ಉಸಿರಾಟದ […]

ಎದೆಹಾಲುಣಿಸುವಾಗ ಮೊಬೈಲ್ ಸ್ಕ್ರೀನ್ ನೋಡೋ ತಾಯಂದಿರೇ, ಈ ಎಚ್ಚರಿಕೆ ಇರಲಿ!

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದೆ. ಊಟ ಮಾಡುವಾಗ, ವಿಶ್ರಾಂತಿ ಪಡೆಯುವಾಗ ಮಾತ್ರವಲ್ಲದೆ, ಕೆಲ ತಾಯಂದಿರು ಮಗುವಿಗೆ ಎದೆಹಾಲುಣಿಸುವ ಸಮಯದಲ್ಲೂ ಮೊಬೈಲ್‌ನಲ್ಲಿ ಚಾಟ್ ಮಾಡುವುದು, ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್ ಮಾಡುವುದು ಅಥವಾ ವಿಡಿಯೋ ನೋಡುವುದನ್ನು ರೂಢಿಸಿಕೊಂಡಿರುತ್ತಾರೆ. ಆದರೆ, ಹಾಲುಣಿಸುವಂತಹ ಅಮೂಲ್ಯ ಸಮಯದಲ್ಲಿ ತಾಯಿಯ ಗಮನ ಮೊಬೈಲ್‌ಗಿಂತ ಮಗುವಿನ ಮೇಲಿರುವುದು ಹೆಚ್ಚು ಮುಖ್ಯ ಎನ್ನುತ್ತಾರೆ ತಜ್ಞರು. ಎದೆಹಾಲು ಕೇವಲ ಆಹಾರವಲ್ಲ ಮಗುವಿಗೆ ಎದೆಹಾಲು ಪೌಷ್ಟಿಕ ಆಹಾರ ನೀಡುವುದರ ಜೊತೆಗೆ, ತಾಯಿ ಮತ್ತು ಮಗುವಿನ […]

ಸಂತೋಷಕರ ದಾಂಪತ್ಯ ನಿಮ್ಮದಾಗಬೇಕೆ? ಪ್ರತಿ ರಾತ್ರಿ ಮಲಗುವ ಮೊದಲು ಹೀಗೆ ಮಾಡಿ

ಮದುವೆ ಎನ್ನುವುದು ಕೇವಲ ಇಬ್ಬರು ವ್ಯಕ್ತಿಗಳ ಸಂಬಂಧವಲ್ಲ, ಅದು ಪ್ರೀತಿ, ನಂಬಿಕೆ, ಗೌರವ ಮತ್ತು ಪರಸ್ಪರ ಅರ್ಥೈಸಿಕೊಳ್ಳುವಿಕೆಯ ಮೇಲೆ ನಿಂತಿರುವ ಒಂದು ಸುಂದರ ಪಯಣ. ಈ ಪಯಣ ಸದಾ ಸಂತೋಷದಿಂದ ಸಾಗಬೇಕಾದರೆ ದೊಡ್ಡ ದೊಡ್ಡ ತ್ಯಾಗಗಳು ಅಥವಾ ದುಬಾರಿ ಉಡುಗೊರೆಗಳ ಅಗತ್ಯವಿಲ್ಲ. ಪ್ರತಿದಿನ ಮಾಡುವ ಕೆಲವು ಸಣ್ಣ ಅಭ್ಯಾಸಗಳೇ ದಾಂಪತ್ಯ ಜೀವನವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ವಿಶೇಷವಾಗಿ ರಾತ್ರಿ ಮಲಗುವ ಮೊದಲು ಕೆಲವೇ ನಿಮಿಷಗಳನ್ನು ಪರಸ್ಪರರಿಗಾಗಿ ಮೀಸಲಿಡುವುದು, ಸಂಬಂಧದಲ್ಲಿ ಆತ್ಮೀಯತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ. ತಜ್ಞರ […]