ಕಾಫಿ ಮಾಡಿದ ಮೇಲೆ ಉಳಿದ ಕಾಫಿ ಪುಡಿನಾ ಏನ್ ಮಾಡ್ತೀರಿ?

ಕಾಫಿ ಕುಡಿಯದಿದ್ದರೆ ಬಹಳಷ್ಟು ಮಂದಿಯ ದಿನಚರಿಯೇ ಸಾಗದು.ಒಂದು ದಿನ ಕಾಫಿ ಮಿಸ್ಸಾದರೂ ಏನನ್ನೋ ಕಳೆದುಕೊಳ್ಳುವವರಂತೆ ಮೂಡ್ ಔಟ್ ಆಗಿಬಿಡುತ್ತೇವೆ.ಆದರೆ ಕೆಲವರಿಗೆ ಕಾಫಿ ಅಂದರೆ ಅಲರ್ಜಿ.ಕಾಫಿಯ ಸುದ್ದಿಯೇ ಬೇಡ ಎನ್ನುವವರು ಇದ್ದಾರೆ.  ಕಾಫಿ ಬೇಡ ಅನ್ನೋದೇನೋ ಸರಿ, ಆದರೆ ಕಾಫಿ ಮಾಡಿ ಉಳಿದ ಪುಡಿ ಕೆಲವೊಮ್ಮೆ ನಿಮ್ಮ ಆರೋಗ್ಯ ಕಾಪಾಡಲು ಬೇಕೇ ಬೇಕು ಎನ್ನುವುದು ಗೊತ್ತಾ?

ಯಸ್. ಕಾಫಿ ಮಾಡಿ ಉಳಿದ ಪುಡಿಯನ್ನು ತುಂಬಾ ಮಂದಿ ಕಸದ ಬುಟ್ಟಿಗೋ, ಗಿಡಮರಗಳ ಬುಡಕ್ಕೋ ಎಸೆದು ಬಿಡುತ್ತಾರೆ. ಆದರೆ ಕಾಫಿ ಪುಡಿಯಿಂದ ನಿಮ್ಮ ಚರ್ಮ ಸಂಬಂಧಿ ಕೆಲ ಸಮಸ್ಯೆಗಳಿಗೆ ಪರಿಹರ ಕೊಡಬಹುದು.

ಚಂದದ ಚರ್ಮಕ್ಕೆ ಕಾಫಿ ಪುಡಿ:

ಬಳಸಿದ ಕಾಫಿ ಪುಡಿಯನ್ನು ಹೊರಗೆ ಎಸೆಯುವ ಬದಲು ನಿಮ್ಮ ಚರ್ಮದ ಅಂದವನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಿ.ಚರ್ಮದಲ್ಲಿರುವ ಸತ್ತ ಕೋಶಗಳನ್ನು ತೆಗೆದುಹಾಕುತ್ತದೆ. ಕಾಫಿ ಪುಡಿಯನ್ನು ಚರ್ಮದ ಮೇಲೆ ಸ್ಕ್ರಬ್ ಮಾಡಿಕೊಳ್ಳುವುದರಿಂದ ಕಾಫಿ ಪುಡಿಯಲ್ಲಿರುವಂತಹ ಸಣ್ಣ ಸಣ್ಣ ಮಣಿಗಳು ಚರ್ಮದಲ್ಲಿನ ಸತ್ತ ಜೀವಕೋಶಗಳನ್ನು, ಧೂಳನ್ನು ಹಾಗೂ ಚರ್ಮದ ರಂಧ್ರಗಳಲ್ಲಿ ಸೇರಿಕೊಂಡು ಮೇಧೋರಸವನ್ನು ತೆಗೆದುಹಾಕುತ್ತದೆ.

ಚರ್ಮದಲ್ಲಿನ ಕಪ್ಪು ಚುಕ್ಕೆಗಳನ್ನು ಕಡಿಮೆ ಮಾಡುತ್ತದೆ. ನಾವು ಬಳಸಿದ ಕಾಫಿ ಪುಡಿಯಲ್ಲಿ ಉನ್ನತ ಮಟ್ಟದ ಕೆಫಿನ್ ಅಂಶವಿರುತ್ತದೆ. ಈ ಅಂಶವು ರಕ್ತ ಸಂಚಾರ ಉತ್ತಮವಾಗಲು ಹಾಗೂ ಉರಿಯೂತ ಕಡಿಮೆ ಮಾಡಲು ಇದು ಪ್ರಯೋಜನಕಾರಿಯಾಗಿದೆ. ಕಾಫಿ ಪುಡಿಯನ್ನು ಕಪ್ಪು ಚುಕ್ಕೆ ಆಗಿರುವಂತಹ ಚರ್ಮದ ಮೇಲೆ ಸ್ಕ್ರಬ್ ಮಾಡುವುದರಿಂದ ಕಪ್ಪು ಚುಕ್ಕೆಗಳು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.

ಚರ್ಮವು ನೆರಿಗೆ ಕಟ್ಟುವುದನ್ನು ದೂರಮಾಡುತ್ತದೆ. ಮಹಿಳೆಯರಿಗೆ ವಯಸ್ಸು ೩೦ ದಾಟುತ್ತಿದ್ದ ಹಾಗೆ ಚರ್ಮವು ನೆರಿಗೆಗಟ್ಟಲು ಪ್ರಾರಂಭವಾಗುತ್ತದೆ. ಅದರಲ್ಲೂ ಮುಖದಲ್ಲಿ ಹೆಚ್ಚಾಗಿ ನೆರಿಗೆ, ಗೆರೆಗಳು ಕಾಣಿಸಿಕೊಳ್ಳುತ್ತದೆ. ಕಾಫಿ ಪುಡಿಯಲ್ಲಿ ಇರುವಂತಹ ಪೋಷಕಾಂಶಗಳು ಚರ್ಮಕ್ಕೆ ಮೊಶ್ಚಿರೈಸ್ ನೀಡಿ ಚರ್ಮವನ್ನು ಪುನಶ್ಚೇತನಗೊಳಿಸಲು ಸಹಕಾರಿಯಾಗುತ್ತದೆ. ಹಾಗೇ ಚರ್ಮವನ್ನು ತುಂಬಾ ಮೃದುವಾಗಿಯೂ ನಯವಾಗಿಯೂ ಮಾಡುತ್ತದೆ.