ಮನಸ್ಸಿಗೆ ಬೇಜಾರಾಗಿದೆಯೇ ಹೀಗೆ ಮಾಡಿ? ಜೀವನ ಇರೋದೇ ಪ್ರತಿ ಕ್ಷಣವನ್ನೂ ಅನುಭವಿಸೋದಕ್ಕೆ

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲೊಂದು ಸಮಯದಲ್ಲಿ ಮನಸ್ಸಿಗೆ ಬೇಜಾರಾಗುವುದು ಸಹಜ. ಕೆಲವೊಮ್ಮೆ ಕೆಲಸದ ಒತ್ತಡ, ಕುಟುಂಬದ ಸಮಸ್ಯೆಗಳು, ಸ್ನೇಹಿತರೊಂದಿಗೆ ಉಂಟಾಗುವ ಭಿನ್ನಾಭಿಪ್ರಾಯ, ನಿರೀಕ್ಷೆಗಳು ಈಡೇರದಿರುವುದು ಅಥವಾ ಯಾವುದೇ ಸ್ಪಷ್ಟ ಕಾರಣವಿಲ್ಲದೆಯೂ ಮನಸ್ಸು ಭಾರವಾಗಬಹುದು. ಆದರೆ ಈ ಭಾವನೆ ಶಾಶ್ವತವಲ್ಲ. ಸರಿಯಾದ ರೀತಿಯಲ್ಲಿ ಅದನ್ನು ನಿಭಾಯಿಸಿದರೆ ಮತ್ತೆ ಸಂತೋಷದಿಂದ ಬದುಕಬಹುದು. 1. ನಿಮ್ಮ ಭಾವನೆಗಳನ್ನು ಒಪ್ಪಿಕೊಳ್ಳಿ “ನನಗೆ ಬೇಜಾರಾಗಿದೆ” ಎಂದು ಒಪ್ಪಿಕೊಳ್ಳುವುದು ಮೊದಲ ಹೆಜ್ಜೆ. ದುಃಖವನ್ನು ಮರೆಮಾಚುವ ಬದಲು, ಅದು ಸಹಜ ಭಾವನೆ ಎಂಬುದನ್ನು ಅರಿತುಕೊಳ್ಳಿ. 2. ಒಬ್ಬರೇ ಎಲ್ಲವನ್ನೂ […]
ನೀವು ಗಂಡು ಮಗುವಿನ ಪೋಷಕರೇ? ಜೀವನದಲ್ಲಿ ಗೆಲ್ಲಲು ಈ ವಿಷಯಗಳನ್ನು ತಪ್ಪದೇ ಕಲಿಸಿ!

ಗಂಡು ಮಗುವಿನ ತಂದೆ, ತಾಯಿಯಾಗಿ ಮಗನಿಗೆ ಉತ್ತಮ ಶಿಕ್ಷಣ, ಉತ್ತಮ ಉದ್ಯೋಗ ಕೊಡಿಸುವ ಕನಸು ಎಲ್ಲರಿಗೂ ಇರುತ್ತದೆ. ಆದರೆ ಅದಕ್ಕಿಂತ ಮುಖ್ಯವಾದದ್ದು ಮಹಿಳೆಯರನ್ನು ಗೌರವಿಸುವ, ಜವಾಬ್ದಾರಿಯುತ, ಸಂವೇದನಾಶೀಲ ಮತ್ತು ಉತ್ತಮ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಯಾಗಿ ಬೆಳೆಸುವುದು. ಇಂತಹ ಮೌಲ್ಯಗಳನ್ನು ಬಾಲ್ಯದಲ್ಲಿಯೇ ಕಲಿಸಿದರೆ, ಮುಂದಿನ ಜೀವನದಲ್ಲಿ ಆತ ಉತ್ತಮ ಮಗ, ಸ್ನೇಹಿತ, ಪತಿ, ತಂದೆ ಮತ್ತು ನಾಗರಿಕನಾಗಬಹುದು. ಭಾವನೆಗಳನ್ನು ಮರೆಮಾಚಬಾರದು “ಗಂಡಸರು ಅಳಬಾರದು” ಎಂಬ ಕಲ್ಪನೆಯಿಂದ ದೂರವಿರಿ. ದುಃಖ, ಭಯ, ಆತಂಕ ಅಥವಾ ಒತ್ತಡವನ್ನು ಹಂಚಿಕೊಳ್ಳುವುದು ಸಹಜ. ಕೋಪ […]
ಜುಲೈ 28 ರಂದು ಕೈತೋಟ ತರಬೇತಿ ಕಾರ್ಯಕ್ರಮ

ಮಂಗಳೂರು: ಸಿರಿ ತೋಟಗಾರಿಕೆ ಸಂಘ (ರಿ) (ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆ), ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಆವರಣ, ಬೆಂದೂರು, ಮಂಗಳೂರು ಇದರ ವತಿಯಿಂದ ಕೈತೋಟ ತರಬೇತಿ ಕಾರ್ಯಕ್ರಮವನ್ನು ಜುಲೈ 28 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ರವರೆಗೆ ಬೆಂದೂರು ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ತರಬೇತಿ ಕಾರ್ಯಕ್ರಮದಲ್ಲಿ ಪಾಟಿಂಗ್, ರೀಪಾಟಿಂಗ್, ಕಸಿ ಕಟ್ಟುವುದು (ಗ್ರಾಪ್ಟಿಂಗ್, ಬಡ್ಡಿಂಗ್, ಲೇಯರಿಂಗ್), ಸಾವಯವ ಗೊಬ್ಬರ ತಯಾರಿ, ತಾರಸಿ ಕೃಷಿಯ ಕುರಿತು ತರಬೇತಿ […]
ಚುಂಬನದ ಭಾಷೆ ಗೊತ್ತೇ? ಪ್ರತಿಯೊಂದು ಮುತ್ತೂ ಹೇಳುತ್ತದೆ ಒಂದು ಕಥೆ!

ಪ್ರತಿ ವರ್ಷ ಜುಲೈ 6ರಂದು ಅಂತರಾಷ್ಟ್ರೀಯ ಚುಂಬನ ದಿನ (International Kissing Day)ವನ್ನು ಆಚರಿಸಲಾಗುತ್ತದೆ. ಈ ದಿನವು ಪ್ರೀತಿ, ಕಾಳಜಿ, ಆತ್ಮೀಯತೆ ಮತ್ತು ಮಾನವೀಯ ಸಂಬಂಧಗಳ ಮಹತ್ವವನ್ನು ನೆನಪಿಸುತ್ತದೆ. ಚುಂಬನವು ಕೇವಲ ಪ್ರಣಯದ ಸಂಕೇತವಲ್ಲ; ಅದು ಸಂತೋಷ, ಗೌರವ, ಆಶೀರ್ವಾದ, ಸಾಂತ್ವನ ಮತ್ತು ವಾತ್ಸಲ್ಯದ ಅಭಿವ್ಯಕ್ತಿಯೂ ಆಗಿದೆ. ಚುಂಬನದ ಪ್ರಮುಖ ವಿಧಗಳು ಮತ್ತು ಅವುಗಳ ಅರ್ಥ 1. ಹಣೆಯ ಚುಂಬನ (Forehead Kiss)ಇದು ಪ್ರೀತಿ, ಕಾಳಜಿ, ರಕ್ಷಣೆ ಮತ್ತು ಗೌರವದ ಸಂಕೇತ. ತಾಯಿ-ತಂದೆ, ಅಜ್ಜ-ಅಜ್ಜಿ ಅಥವಾ ಆತ್ಮೀಯರು […]
ಪತ್ನಿಯ ಕಾಲು ನೋವಿನ ಪರಿಹಾರಕ್ಕೆ ಮನೆಯಲ್ಲಿಯೇ ಎಸ್ಕಲೇಟರ್ ನಿರ್ಮಿಸಿದ ರೈತ: ಈ ಮಾದರಿ ಪ್ರೀತಿಗೆ ನೆಟ್ಟಿಗರು ಸಖತ್ ಖುಷ್!

ಆಂದ್ರಪ್ರದೇಶ: ಪ್ರೀತಿಯನ್ನು ವ್ಯಕ್ತಪಡಿಸಲು ಭವ್ಯ ಸ್ಮಾರಕಗಳನ್ನು ನಿರ್ಮಿಸಬೇಕೆಂದಿಲ್ಲ. ಪ್ರೀತಿಸುವವರ ದೈನಂದಿನ ಕಷ್ಟವನ್ನು ಕಡಿಮೆ ಮಾಡುವ ಕಾಳಜಿಯೇ ನಿಜವಾದ ಪ್ರೀತಿಯ ಸಂಕೇತ ಎಂಬುದನ್ನು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ 65 ವರ್ಷದ ರೈತ ಹಾಗೂ ಮೆಕಾನಿಕ್ ಸಟ್ಟಿ ಶಿವನಾರಾಯಣ ರೆಡ್ಡಿ ಸಾಬೀತುಪಡಿಸಿದ್ದಾರೆ. ರಾಜಮಹೇಂದ್ರವರಂನಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಅರ್ಥಮೂರು ಗ್ರಾಮದ ನಿವಾಸಿಯಾದ ಶಿವನಾರಾಯಣ ರೆಡ್ಡಿ ಅವರ ಪತ್ನಿ ಸತ್ಯವೇಣಿ ಹಲವು ವರ್ಷಗಳಿಂದ ತೀವ್ರ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಮನೆಯ ಮೊದಲ ಮಹಡಿಗೆ ತೆರಳಲು ಪ್ರತಿದಿನ 21 ಮೆಟ್ಟಿಲುಗಳನ್ನು […]