ನೇಕಾರ ಸಂಜೀವ ಶೆಟ್ಟಿಗಾರ್ ಅವರಿಗೆ ರಾಜ್ಯ ಮಟ್ಟದ ಬಹುಮಾನ

ಕಿನ್ನಿಗೋಳಿ:  ಸುಪ್ರಸಿದ್ದ ‘ಉಡುಪಿ ಸೀರೆ’ಯ ನೇಕಾರರಾಗಿರುವ ಸಂಜೀವ ಶೆಟ್ಟಿಗಾರ್ ಹತ್ತಿ ಬಟ್ಟೆ ಸೀರೆ ನೇಯ್ಗೆಗಾಗಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಲಭಿಸಿದೆ. ಇವರು ತಾಳಿಪಾಡಿ ನೇಕಾರರ ಸಂಘದ ಸದಸ್ಯರು. ಆ. 07 ರಂದು ಸೋಮವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಂದು ಬೆಂಗಳೂರಿನಲ್ಲಿ ಅವರು ರಾಜ್ಯ ಪ್ರಶಸ್ತಿ ಸ್ವೀಕರಿಸಲಿದ್ದಾರೆ. 74 ವಯಸ್ಸಿನ ಸಂಜೀವ ಶೆಟ್ಟಿಗಾರ್ ಈಗ ಇರುವ ಕೇವಲ ಹತ್ತು 80 ಕೌಂಟ್ ನೇಕಾರರಲ್ಲಿ ಒಬ್ಬರು. ಕೈಯಿಂದ ಚಂದದ ಬುಟ್ಟಾ ನೇಯುವಲ್ಲಿ ಪರಿಣಿತರು. 80 ಕೌಂಟ್ ನ ಸಹಜ ಸೀರೆ […]

ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಕೈಮಗ್ಗ ಸೀರೆಗಳ ಸೌಂದರ್ಯ ಸ್ಪರ್ಧೆ ಕಾರ್ಯಕ್ರಮ

ಉಡುಪಿ: ಪದ್ಮಶಾಲಿ ನೇಕಾರ ಪ್ರತಿಷ್ಠಾನ, ಉಡುಪಿ ಹಾಗೂ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ (ರಿ) ಬೆಂಗಳೂರು ವತಿಯಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಪ್ರಯುಕ್ತ ಭಾನುವಾರದಂದು ಕೈಮಗ್ಗ ಸೀರೆಗಳ ಸೌಂದರ್ಯ ಸ್ಪರ್ಧೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಮಾಜಿ ಶಾಸಕ ಕೆ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಉದಯಕುಮಾರ್ ಶೆಟ್ಟಿ ಕಿದಿಯೂರು, ಮಟ್ಟಾರು ರತ್ನಾಕರ ಹೆಗ್ಡೆ, ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ, […]

ಇತಿಹಾಸದಲ್ಲೆ ಮೊದಲ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ ಕಂಬಳ..!

ಬೆಂಗಳೂರು: ಬೆಂಗಳೂರಿನಲ್ಲಿ ಕಂಬಳದ ಇತಿಹಾಸದಲ್ಲಿ ಮೊದಲ ಬಾರಿಗೆ, ರಾಜ ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಜೋಡುಕೆರೆ ಕಂಬಳ ನಡೆಯಲಿದ್ದು, ತುಳುನಾಡಿನ ಕಂಬಳದ ಕೋಣಗಳು ಬೆಂಗಳೂರಿನ ಕಡೆಗೆ ಹೊರಡಲಿದೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆಯಲಿರುವ ಈ ಕಂಬಳಕ್ಕೆ ಮೈಸೂರು ಅರಸರಿಂದ ಅನುಮತಿ ದೊರೆತಿದೆ. ಕರಾವಳಿ ಕರ್ನಾಟಕದ ಬೇಸಾಯ ವೃತ್ತಿಯೇ ಪ್ರಮುಖವಾಗಿರುವ ಸಮಾಜದಲ್ಲಿ ಕೋಣಗಳು ಅವರ ಬದುಕಿನ ಅವಿಭಾಜ್ಯ ಅಂಗ. ‘ಕಂಬಳ, ಬೇಸಾಯಗಾರರು ಭತ್ತದ ಗದ್ದೆಗಳಲ್ಲಿ ಕೊಯ್ಲಿನ ಬಳಿಕ ಕೋಣಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಆಟವಷ್ಟೇ […]

ಜೆ.ಸಿ.ಐ ಮಣಿಪಾಲ ಹಿಲ್ ಸಿಟಿ ವತಿಯಿಂದ ಯುವ ಸಬಲೀಕರಣ ತರಬೇತಿ ಕಾರ್ಯಕ್ರಮ

ಮಣಿಪಾಲ: ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಜೆ.ಸಿ.ಐ ಮಣಿಪಾಲ ಹಿಲ್ ಸಿಟಿ ವತಿಯಿಂದ ‘ಯುವ ಸಬಲೀಕರಣ’ ತರಬೇತಿ ಕಾರ್ಯಕ್ರಮವನ್ನು ಆ.5 ರಂದು ಹಮ್ಮಿಕೊಳ್ಳಲಾಗಿತ್ತು. ಸಭೆಯ ಅಧ್ಯಕ್ಷತೆ ಜೇಸಿಐ ಮಣಿಪಾಲ ಹಿಲ್ ಸಿಟಿ ಅಧ್ಯಕ್ಷ ಜೇಸಿ ಜಯಂತ ತಲವಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಕಾಂತರಾಜ್ ಎ.ಎನ್., ಸಂಪನ್ಮೂಲ ವ್ಯಕ್ತಿಯಾಗಿ ಜೇ.ಸಿ.ಐ. ಸೆನೆಟರ್ ಸುಭಾಷ್ ಬಂಗೇರ, ಐಕಾನಿಕ್ ತರಬೇತುದಾರರು, ಜೇಸಿಐ ಭಾರತ, ಹಾಗೂ ಜೊತೆಗೆ ಕಾಲೇಜಿನ ಪ್ರಾಧ್ಯಾಪಕ ವೃಂದದವರು ಹಾಗೂ ಜೇ.ಸಿ.ಐ. ನ […]

ಮಲ್ಪೆ: ಸಮುದ್ರಕ್ಕೆ ತೆರಳಿದ ಇಬ್ಬರು ಬಾಲಕಿಯರು; ಒಬ್ಬಳ ಸಾವು ಮತ್ತೊಬ್ಬಳ ರಕ್ಷಣೆ

ಮಲ್ಪೆ: ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಮಲ್ಪೆ ಬಳಿ ನೀರುಪಾಲಾಗಿದ್ದು, ಓರ್ವ ಬಾಲಕಿ ಸಾವನ್ನಪ್ಪಿದ್ದರೆ, ಮತ್ತೊರ್ವ ಬಾಲಕಿಯನ್ನು ರಕ್ಷಿಸಲಾಗಿದೆ. ಮಡಿಕೇರಿ ಮೂಲದ ಮಾನ್ಯ ಮೃತ ರ್ದುದೈವಿ. ಬದುಕುಳಿದ ಯಶಸ್ವಿನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಮಡಿಕೇರಿಯಿಂದ ಈ ಬಾಲಕಿಯರು ನಾಪತ್ತೆಯಾಗಿದ್ದರು. ಈ ಕುರಿತು ಮಡಿಕೇರಿ ಠಾಣೆಯಲ್ಲಿ ಇಬ್ಬರು ಕಾಣೆಯಾಗಿರುವ ದೂರು ದಾಖಲಾಗಿತ್ತು. ಇದೀಗ ಮಲ್ಪೆ ಬಳಿ ನಿನ್ನೆ ತಡರಾತ್ರಿ ಭಾರಿ ಅಲೆಗಳ ಹೊಡೆತಕ್ಕೆ ಇಬ್ಬರು ಬಾಲಕಿಯರು ಸಮುದ್ರ ಪಾಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. […]